Subscribe to Updates
Get the latest creative news from FooBar about art, design and business.
- e-paper (19-07-2025) Chikkamagalur Express
- ಸಾರಿಗೆ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚನೆ
- 2047ಕ್ಕೆ `ಏಳು ಬೀಜಗಳಿಂದ ಏಳು ಲಕ್ಷ ಟನ್ಗೆ ಭಾರತದ ಕಾಫಿ ಜಿಗಿತ’
- e-paper (18-07-2025) Chikkamagalur Express
- ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ
- ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
- e-paper (17-07-2025) Chikkamagalur Express
- ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ
Author: chikkamagalur express
ಚಿಕ್ಕಮಗಳೂರು: ಬಾಲಗಂಗಾಧರನಾಥ ಶ್ರೀಗಳ ಮುಂದಾಲೋಚನೆಯಿಂದ ವಿದ್ಯಾ ರ್ಥಿಗಳು ದೇಶದ ಪ್ರತಿಷ್ಟಿತ ಕಂಪನಿ, ಸರ್ಕಾರಿ ಕೆಲಸ ಸೇರಿದಂತೆ ವಿವಿಧ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಸಿ ಕೊಂಡು ಗಣನೀಯ ಸೇವೆ ಸಲ್ಲಿಸುತ್ತಿದೆ ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣ ನಾಥ ಸ್ವಾಮೀಜಿ ಹೇಳಿದರು. ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಭಾನುವಾರ ಅವರು ಆರ್ಶೀವಚನ ನೀಡಿ ಸಮಾಜದಲ್ಲಿ ಕೆಲವು ಮಕ್ಕಳ ನ್ಯೂನ್ಯತೆ ಹಾಗೂ ಅಸಹಾಯತೆ ಮನಗಂಡ ಶ್ರಿಗಳು ಅಂಧಮಕ್ಕಳ ಶಾ ಲೆಯನ್ನು ಸ್ಥಾಪಿಸಿದರು. ಕಾಲ ಉರುಳಿದಂತೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಪ್ರಪ್ರಥಮವಾಗಿ ಇಂಜಿನಿಯರ್ ಕಾಲೇಜು ಸ್ಥಾಪಿಸಿ ಆರಂಭದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಅವಕಾಶ ಕಲ್ಪಿ ಸಿಕೊಟ್ಟರು ಎಂದರು. ರಾಜ್ಯದ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಲುವಾಗಿ ವಿದ್ಯಾಕ್ಷೇತ್ರದಲ್ಲಿ ತಮ್ಮ ದೇ ಕೊಡುಗೆ ನೀಡಿರುವ ಆದಿಚುಂಚನಗಿರಿ ಟ್ರಸ್ಟ್ ಇಡೀ ದೇಶದಲ್ಲೇ ಗುಣಮಟ್ಟದ ಕಾಲೇಜು ಎಂಬುದಾಗಿ ಪ್ರತೀತಿ ಪಡೆದುಕೊಂಡಿದೆ ಎಂದ ಅವರು ಇಲ್ಲಿನ ವಿದ್ಯಾರ್ಥಿಗಳು ಅಬ್ದುಲ್‌ಕಲಾಂ ಹಾಗೂ…
ಚಿಕ್ಕಮಗಳೂರು: ಹಿರಿಯ ವಕೀಲರ ಅನುಭವ ಹಾಗೂ ವಾದ ಮಂಡಿಸುವ ಚಾಣ ಕ್ಯತೆಯನ್ನು ಯುವ ವಕೀಲರು ಅನುಸರಿಸಬೇಕು. ಇದರಿಂದ ಕಾಲಕ್ರಮೇಣ ಪರಿಣಿತಿ ಹೊಂದುವ ಮುಖಾ ಂತರ ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾನುಮತಿ ಹೇಳಿದರು. ನಗರದ ಟಿಎಂಎಸ್ ಕಾಲೇಜಿನ ರೋಟರಿ ಸಭಾಂಗಣದಲ್ಲಿ ವಕೀಲರ ಸಂಘದಿಂದ ಏರ್ಪಡಿಸಿದ್ಧ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ವಕೀಲರು ಸಮಾಜದ ಮುಖ್ಯಭೂಮಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ರಾಜಕಾರಣ ಕ್ಷೇತ್ರ ದಲ್ಲೂ ತೊಡಗಿಸಿಕೊಂಡು ಸಮಾಜ ಸುಧಾರಣೆಗೆ ಮುಂದಾಗುತ್ತಿರುವುದು ಖುಷಿಯ ಸಂಗತಿ. ಹೀಗಾಗಿ ಪ್ರಾರಂಭದಲ್ಲಿ ಯುವ ವಕೀಲರಿಗೆ ಮಾರ್ಗದರ್ಶನದ ಅಗತ್ಯವಿದ್ದು, ಕಾನೂನಿನ ತಿಳುವಳಿಕೆ ಬಗ್ಗೆ ಸಂದೇಹ ವಿದ್ದಲ್ಲಿ ಹಿರಿಯರಲ್ಲಿ ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು ಎಂದರು. ವಕೀಲ ವೃತ್ತಿಯಲ್ಲಿ ಎಷ್ಟೇ ತಿಳಿದುಕೊಂಡರೂ ಅಹಂ ಎನ್ನುವುದು ಇರಕೂಡದು. ತಿಳುವಳಿಕೆ ಹೊಂ ದಿದ್ದರೂ ಇನ್ನಷ್ಟು ತಿಳಿಯುವ ಅಂಬಲವಿರಬೇಕು ಎಂದ ಅವರು ಯುವ ವಕೀಲರು ಕಲಿಕೆಗೆ ಹೆಚ್ಚಿನ ಮಹ ತ್ವ ಕೊಡುವುದನ್ನು ರೂಢಿಸಿಕೊಂಡರೆ ಸಾರ್ವಜನಿಕ…
ಚಿಕ್ಕಮಗಳೂರು: ಆಹಾರದಿಂದಲೇ ಆರೋಗ್ಯ. ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪದಾರ್ಥಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಸಿರಿಧಾನ್ಯಗಳಿಂದ ತಯಾರಾದ ಖಾದ್ಯಗಳನ್ನು ಹೆಚ್ಚು ಬಳಸುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ ಜಿಲ್ಲಾ, ಪಂಚಾಯತ್ ಹಾಗೂ ಕೃಷಿ ಇಲಾಖೆ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಮಹಾತ್ಮ ಗಾಂಧಿ ಉದ್ಯಾನವನದದಲ್ಲಿ (ರತ್ನಗಿರಿ ಬೋರೆ) ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ಆಹಾರ ಬೆಳೆಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಕೊರಲೆ, ಬರಗು ಇವುಗಳ ಬಳಕೆಯನ್ನು ಮರೆತು ಪಾಶ್ಯಾತ್ಯ ಆಹಾರ ಪದ್ಧತಿಗೆ ಮಾರುಹೋಗುತ್ತಿದ್ದೇವೆ. ಇಂತಹ ಆಹಾರ ಪದ್ಧತಿಗಳಿಂದ ನಮ್ಮ ಜೀವನಶೈಲಿ ಬದಲಾಗುವುದಲ್ಲದೆ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಗಳು ಉಂಟಾಗಿವೆ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಿರಿಧಾನ್ಯಗಳಿಂದ ತಯಾರಾಗುವ ಖಾದ್ಯಗಳನ್ನು ಸೇವಿಸಬೇಕು. ಇವುಗಳು ಮಧುಮೇಹ ಸೇರಿದಂತೆ ಇನ್ನಿತರ ರೋಗಗಳನ್ನು ನಿಯಂತ್ರಿಸಲು…
ಚಿಕ್ಕಮಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗೆ ಮುಂದಾಗಿರುವ ಆಶ್ರಯ ಫೌಂಡೇಶನ್‌ನ ಧ್ಯೇಯೋದ್ದೇಶಗಳಿಗೆ ಸರ್ಕಾರದ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರವನ್ನು ನೀಡುತ್ತೇವೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ಕೀರ್ತನಾ ಭರವಸೆ ನೀಡಿದರು. ನಗರದ ಎಐಟಿ ವೃತ್ತದ ಒಕ್ಕಲಿಗರ ಭವನದಲ್ಲಿ ಎಲ್ಲಾ ವಯೋಮಾನದ ಜನರ ಆರೋಗ್ಯ, ಶಿಕ್ಷಣ, ಆರೋಗ್ಯ, ಸಮಾಜಸೇವೆ ಮುಂತಾದವುಗಳಿಗೆ ಅನುಕೂಲವಾಗುವಂತೆ ಆರಂಭಿಸಲಾಗಿರುವ ಆಶ್ರಯ ಫೌಂಡೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾನ್ಯವಾಗಿ ಖಾಸಗಿ ಸಂಘ, ಸಂಸ್ಥೆಗಳು ನಿರ್ಧಿಷ್ಠ ಕ್ಷೇತ್ರಗಳಿಗೆ ಸೀಮಿತವಾಗಿರುತ್ತವೆ. ಆದರೆ ಆಶ್ರಯ ಫೌಂಡೇಶನ್ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಲು ಮುಮದಾಗಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ಕೆ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡುತ್ತೇವೆ. ನಿಮ್ಮ ಸಹಕಾರ ನಮಗಿರಲಿ, ನಮ್ಮ ಸಹಕಾರ ನಿಮಗಿರುತ್ತದೆ ಎಂದರು. ಆಶ್ರಯ ಫೌಂಡೇಶನ್‌ನ ಉಪಾಧ್ಯಕ್ಷೆ ವರ್ಷಾ ಎ.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಆಶ್ರಯ ಫೌಂಡೇಶನ್‌ನಿಂದ ಅರ್ಥಪೂರ್ಣವಾಗಿ ಚಿಕ್ಕಮಗಳೂರು ಜನತೆಗೆ ಸೇವೆ ಸಿಗಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಫೌಂಡೇಶನ್ ಅಂಗವಿಕಲರು, ಅಂಧರಷ್ಟೇ ಅಲ್ಲದೆ ವೃದ್ಧರು, ಅಬಲರಿಗೆ ನೆರವು…
ಚಿಕ್ಕಮಗಳೂರು: ನಗರದ ಕಲೊಡ್ಡಿ , ಇಂದಿರಾಗಾಂ ಬಡಾವಣೆ, ಶಾಂತಿನಗರದಲ್ಲಿ ನಿವೇಶನ ರಹಿತರು ಯಾರಿದ್ದಾರೆ ಅವರಿಗೆ ನಿವೇಶನ ಒದಗಿಸಬೇಕು. ಹಕ್ಕುಪತ್ರ ಇಲ್ಲದವರಿಗೆ ಹಕ್ಕುಪತ್ರ ಕೊಡಿಸುವ ಬಗ್ಗೆ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನ ತಗೆದುಕೊಂಡಿರುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರಸಭೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಮಾತನಾಡಿ,ಮೊದಲು ಬಡವರಿಗೆ ನಿವೇಶನ ನೀಡಬೇಕು, ಮನೆ ಕಟ್ಟಿಕೊಂಡು ಹಕ್ಕುಪತ್ರ ಇಲ್ಲದವರು ಯಾರಿದ್ದಾರೆ ಅವರಿಗೆ ಹಕ್ಕುಪತ್ರ ಕೊಡಿಸುವ ಬಗ್ಗೆ ಹಾಗೂ ನಿವೇಶನ ಇಲ್ಲದವರಿಗೆ ಶೀಘ್ರದಲ್ಲಿ ನಿವೇಶನ ಒದಗಿಸಬೇಕು. ಹಕ್ಕುಪತ್ರ ಕೊಡಿಸಲು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದರು. ೧೫೧೧ ಜಿ-ಪ್ಲಸ್ ೨ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಕೊಡುವ ಬಗ್ಗೆ ನಿರ್ಣಯಿಸಿದ್ದೇವೆ. ೨೯೪ ಜನ ೯೪ ಸಿಸಿ ಅಡಿ ಅರ್ಜಿ ಕೊಟ್ಟಿದ್ದಾರೆ. ಸ್ಥಳಪರಶೀಲಿಸಿ ಜಿಲ್ಲಾಕಾರಿಗಳ ಮೂಲಕ ಅವರಿಗೂ ಹಕ್ಕುಪತ್ರ ಕೊಡಿಸುವ ಕೆಲಸ ಮಾಡಲಿದ್ದೇವೆ ಎಂದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಆಯುಕ್ತ ಬಸವರಾಜು, ಆಶ್ರಯ ಸಮಿತಿ ಸದಸ್ಯರಾದ ಫಯಾಜ್, ಯಶೋಧಮ್ಮ, ಪ್ರಸಾದ್ ಅಮೀನ್,…
ಚಿಕ್ಕಮಗಳೂರು: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ರಾಜ್ಯ ಉಪಾಧ್ಯಕ್ಷರು ಹಾಗೂ ಪ್ಲಾಂಟೇಷನ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಹಿರಿಯ ಕಾರ್ಮಿಕ ಮುಖಂಡ ಕೆ. ಗುಣಶೇಖರ್ ರವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಕ್ಕೆ ಒಳಗಾಗಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಶನಿವಾರ ಮಧ್ಯಾಹ್ನ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಯಲಿದೆ. ಗುಣಶೇಖರ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಐದು ದಶಕಗಳಿಂದ ಕಾಫಿ, ಟೀ, ರಬ್ಬರ್ ತೋಟಗಳ ಕಾರ್ಮಿಕರ ಮುಖಂಡರಾಗಿ ಅವಿರತ ಸೇವೆ ಸಲ್ಲಿಸಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡರಾಗಿದ್ದರು. ದಿವಂಗತ ಬಿ.ಕೆ. ಸುಂದರೇಶ್ ಅವರ ಅಪ್ಪಟ ಅನುಯಾಯಿಯಾಗಿದ್ದರು. ಕಾರ್ಮಿಕರ ಪರವಾಗಿ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ತೊಗಡಿಸಿಕೊಂಡಿದ್ದರು. ಗುಣಶೇಖರ್ ಅವರ ನಿಧನಕ್ಕೆ ಸಿಪಿಐ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. Senior labor leader K. Gunasekhar passed away
ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಗ್ರಾಮದಲ್ಲಿ ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ದಲಿತ ಸಮಾಜ ಹಾಗೂ ಒಕ್ಕಲಿಗ ಸಮಾಜದ ನಡುವಿನ ಗಲಾಟೆ ತೀವ್ರವಾಗಿದ್ದು, ವಿವಾದಿತ ಸ್ಥಳದಲ್ಲೇ ಇಂದು ದಲಿತರು ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಒಕ್ಕಲಿಗ ಸಮುದಾಯ ಹಾಗೂ ದಲಿತರ ನಡುವೆ ವಾಗ್ದಾಳಿ ನಡೆದಿದ್ದಲ್ಲದೆ ಒಕ್ಕಲಿಗ ಸಮುದಾಯದ ಮಹಿಳೆಯರು ಶವ ಸಂಸ್ಕಾರದ ಗುಂಡಿಯೊಳಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಆಲ್ದೂರು ಗ್ರಾಮದ ರಸ್ತೆ ಪಕ್ಕದ ಜಾಗದ ಬಗ್ಗೆ ಹಿಂದಿನಿಂದಲೂ ವಿವಾದವಿತ್ತು. ದಲಿತರು ಈ ಜಾಗ ನಮ್ಮ ಸ್ಮಶಾನಕ್ಕೆ ಸೇರಿದ್ದು ಎಂದರೆ, ಒಕ್ಕಗಲಿರು ಇದು ಒಕ್ಕಲಿಗರ ಸಮುದಾಯ ಭವನಕ್ಕೆ ಸೇರಿದ ಜಾಗ ಎಂದು ಹೇಳುತ್ತಲೇ ಬಂದಿದ್ದರು. ಹೀಗಾಗಿ ದಶಕಗಳಿಂದಲೂ ಈ ಜಾಗ ವಿವಾದಿತ ಪ್ರದೇಶವೇ ಆಗಿತ್ತು. ಈ ನಡುವೆ ಶುಕ್ರವಾರ ಆಲ್ದೂರು ಗ್ರಾಮದಲ್ಲಿ ದಲಿತ ಮಹಿಳೆಯೋರ್ವರು ಮೃತಪಟ್ಟಿದ್ದು, ವಿವಾದಿತ ಜಾಗದಲ್ಲೇ ಗುಂಡಿ ತೆಗೆದು ಮಹಿಳೆ ಅಂತ್ಯ ಸಂಸ್ಕಾರಕ್ಕೆ ದಲಿತರು ಮುಂದಾಗಿದ್ದರು. ವಿಷಯ ತಿಳಿದ ಒಕ್ಕಲಿಗ ಸಮುದಾಯದವರು ಸ್ಥಳಕ್ಕೆ ತೆರಳಿ ಅಂತ್ಯ…
ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಬಹಳ ಅನನ್ಯವಾಗಿದ್ದು, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು. ಅವರು ಇಂದು ನಗರದ ವಿವಿಧ ವಾರ್ಡ್‌ಗಳಲ್ಲಿ ಸುಮಾರು ೧.೧೫ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ದಿಢೀರ್ ನಗರ, ಹಕ್ಕಿಪಿಕ್ಕಿ ಕಾಲೋನಿ, ಐ.ಜಿ ಬಡಾವಣೆ, ಶಾಂತಿನಗರ-೨, ಕುಪ್ಪೇನಹಳ್ಳಿ, ಕಲ್ಯಾಣನಗರ ಈ ನೂತನ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಥಳೀಯರ ಸಹಕಾರ ದೊರೆತಾಗ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಎಂದರು. ಕೆಆರ್‌ಡಿಎಲ್ ಮತ್ತು ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಿರುವ ಅಂಗನವಾಡಿ ಕೇಂದ್ರಗಳು ಉತ್ತಮ ಗುಣಮಟ್ಟಗಳಿಂದ ಕೂಡಿದ್ದು, ಕೇಂದ್ರಗಳಲ್ಲಿ ಬಡವರ ಮಕ್ಕಳು ಅಭ್ಯಾಸ ಮಾಡುವುದರಿಂದ ತೊಂದರೆಯಾಗದಂತೆ ತಲಾ ೨೦ ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.…