Subscribe to Updates
Get the latest creative news from FooBar about art, design and business.
- e-paper (12-07-2025) Chikkamagalur Express
- ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಮನವಿ
- ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ
- e-paper (11-07-2025) Chikkamagalur Express
- ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು
- ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್ಗಳ ಮೂಲಕ ಸಾಲಸೌಲಭ್ಯ
- e-paper (10-07-2025) Chikkamagalur Express
- ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು
Author: chikkamagalur express
ಚಿಕ್ಕಮಗಳೂರು: ಜನಬಳಕೆಯ ಪದಗಳನ್ನು ತಿಣುಕದೆ ಸುಲಲಿತವಾಗಿ ಬಳಸಿ ಸಾಹಿತ್ಯ ಸೃಷ್ಟಿಸುತ್ತಿದ್ದರಲ್ಲ, ಅದುವೇ ಎಚ್ಚೆಸ್ವಿಯವರ ಕಾವ್ಯ ರಚನೆಯ ದೊಡ್ಡ ಶಕ್ತಿ. ಅದುವೇ ನಾವೆಂದಿಗೂ ಅವರನ್ನು ನೆನಪಿನಂಗಳದಲ್ಲಿ ಸ್ಮರಣೆ ಮಾಡಿಕೊಳ್ಳಲು ಕಾರಣ ಎಂದು ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಂಸ್ಕೃತಿಕ ಸಂಘ ಹಾಗೂ ಸುಗಮ ಸಂಗೀತ ಗಂಗಾ ಸಹಯೋಗದಲ್ಲಿ ಭಾನುವಾರ ಸಂಜೆ ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ `ನೆನಪಿನಂಗಳದಲ್ಲಿ ಎಚ್ಚೆಸ್ವಿ’ ಡಾ.ಎಚ್.ಎಸ್.ವೆಂಕಟೇಶಮೂರ್ತಿಯ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೋಪಿಕಾ ಸ್ತ್ರೀಯರಂತೆ ಕೃಷ್ಣನನ್ನು ಪ್ರೀತಿಸಿದವರಿಗೆ ಮಾತ್ರ ಕೃಷ್ಣನ ಮೇಲೆ ಅಷ್ಟೊಂದು ಭಾವ ತೀವ್ರತೆಯಿಂದ ಕಾವ್ಯ ಸೃಷ್ಟಿಸಲು ಸಾಧ್ಯ, ಎಚ್ಚೆಸ್ವಿಯವರ `ಡಿವೈನ್ ಲವ್’ ಆ ರೀತಿಯದು ಎಂದ ಅವರು, ಎಚ್ಚೆಸ್ವಿಯವರ ರಚನೆ `ತೂಗು ಮಂಚದಲ್ಲಿ ಕೂತು.. ಮೇಘ ಶ್ಯಾಮ ರಾಧೆಗಾತು.. ಆಡುತಿರುವನು ಏನೋ ಮಾತು.. ರಾಧೆ ನಾಚುತ್ತಿದ್ದಳು.. ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ, ಜುಮ್ಮ ಕೊಡುವ ಮುಖವನೆತ್ತಿ ಕಣ್ಣು…
ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆಯಾಗಿ ಇಲ್ಲಿಗೆ ೧೦೦ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಜೂ.೧೮ ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಿಪಿಐ ಕಚೇರಿಯ ಬಿ.ಕೆ.ಸುಂದರೇಶ್ ಸಭಾಂಗಣದಲ್ಲಿ ಅಂದು ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪ್ರಸ್ತುತ ದೇಶ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ. ದಿನೇ ದಿನೆ ನಿರುದ್ಯೋಗ ಸಮಸ್ಯೆ, ಬಡತನ ವೃದ್ಧಿಯಾಗುತ್ತಿದೆ ಎಂದು ದೂರಿದರು. ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಡವರು ಮತ್ತು ಶ್ರೀಮಂತರ ಮಧ್ಯೆ ಅಂತರ ತೀವ್ರಗೊಳ್ಳುತ್ತಿದೆ. ಕೂಲಿ ಕಾರ್ಮಿಕರು ಸಂಕಷ್ಟದ ಬದುಕನ್ನು ಕಳೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ, ಆರೋಗ್ಯ ಕೈಗೆಟುಕದಂತಾಗಿದೆ. ಬಡವರಿಗೆ ವಾಸಿಸಲು ಮನೆ, ನಿವೇಶನ ಇಲ್ಲ ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ…
ಚಿಕ್ಕಮಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಚ್.ಎಸ್.ಶಿವಕುಮಾರ್ ಹಿರೇಗೌಜ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಾನುಸಾರ ನೇಮಕ ಮಾಡಲಾಗಿದೆ ಎಂದು ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ರಘು ದೊಡ್ಡೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. H.S. Shivakumar Hiregauja appointed as the president of the district unit
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಕಳಸ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಆಲ್ದೂರು, ಎನ್.ಆರ್.ಪುರ, ಆಲ್ದೂರು ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಭಾನುವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯಿತು. ಶೃಂಗೇರಿಯ ಸಮೀಪದ ಸುಂಕದ ಮಕ್ಕಿ– ನೆಮ್ಮಾರ್ ಸಮೀಪ ವಿಪರೀತ ಮಳೆಗೆ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಬಿದ್ದಿದೆ. ಇದರಿಂದ ಎಸ್.ಕೆ. ಬಾರ್ಡರ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಡಿತಗೊಂಡಿತ್ತು. ಮಳೆಯ ನಡುವೆ ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮಳೆಯ ನಡುವೆ ವಾಹನ ದಟ್ಟಣೆಯಲ್ಲಿ ಸಿಲುಕಿ ಪ್ರವಾಸಿಗರು ಪರದಾಡಿದರು. ಬಿರುಸುಗೊಂಡ ಮಳೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಎಡೆಬಿಡದೇ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು. ತೀವ್ರ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಕೊಟ್ಟಿಗೆಹಾರದಲ್ಲಿ 147.2 ಮಿ.ಮೀ, ಜನ್ನಾಪುರ 40 ಮಿ.ಮೀ, ಜಾಣಿಗೆ 73 ಮಿ.ಮೀ, ಪಟ್ಟಣದಲ್ಲಿ 35 ಮಿ.ಮೀ, ಮಗ್ಗಲಮಕ್ಕಿ 48…
ಚಿಕ್ಕಮಗಳೂರು-ವ್ಯಕ್ತಿ ಶಾಶ್ವತವಲ್ಲ. ಆದರೆ ವ್ಯಕ್ತಿತ್ವ ಶಾಶ್ವತ. ಹುಟ್ಟು ಸಾವಿನ ನಡುವೆ ಇರುವುದೇ ಜೀವನ. ಈ ಅಂತರದಲ್ಲಿನ ಜೀವನ ಮೌಲ್ಯವೇ ನಮ್ಮನ್ನು ಶಾಶ್ವತವಾಗಿ ಇರುವಂತೆ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು. ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೊಗಸೆ ದೇವರಗದ್ದೆ ಕೃಷ್ಣ ಶೆಟ್ಟರ ಸಂಸ್ಮರಣೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನ ಮೌಲ್ಯವೇ ಸಾವಿನ ನಂತರವೂ ಉಳಿಯುತ್ತವೆ. ಜೀವನ ಮೌಲ್ಯಗಳು ಕಟಿಬದ್ಧರಾದವರು ಮರಣದ ಬಳಿಕವೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಪ್ರತಿಪಾದಿಸಿದರು. ರಾಮ ಹಾಗೂ ರಾಮಾಯಣ ಹತ್ತರಿಂದ ಹದಿನೈದು ಸಾವಿರ ವರ್ಷಪೂರ್ವದ್ದು. ಆದರೆ ರಾಮ ಇಂದಿಗೂ ಜನಮಾನಸದಲ್ಲಿ ಓರ್ವ ಆದರ್ಶ ಪುರುಷ ದೇವತಾ ಸ್ವರೂಪವಾಗಿ ಉಳಿದುಕೊಂಡಿದ್ದಾನೆ. ಸತ್ಯಹರಿಶ್ಚಂದ್ರ ಮೌಲ್ಯಗಳಿಗೆ ಕಟಿಬದ್ಧನಾದ ಕಾರಣದಿಂದಲೇ ಆತನ ಹೆಸರಿನೊಂದಿಗೆ ಸತ್ಯ ಇದುವರೆಗೆ ಉಳಿದುಕೊಂಡು ಬಂದಿದೆ. ಶ್ರೀಮಂತರಾದ ಕ್ಷಣ ಅವರ ಹೆಸರು ಜನಮಾನಸದಲ್ಲಿ ಉಳಿಯುವುದಿಲ್ಲ. ಸಾಮ್ರಾಟರಾದರೂ ಅವರನ್ನು ಯಾರು ನೆನೆಯುವುದಿಲ್ಲ. ಆದರೆ ಜೀವನ ಮೌಲ್ಯವನ್ನು ಉಳಿಸಿಕೊಂಡು ಬದುಕಿದಾಗ ಅವರ ಹೆಸರು…
ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನ ಕೇವಲ ನುಡಿಜಾತ್ರೆಯಲ್ಲ. ನಿತ್ಯ ನಿರಂತರ ಮಹಿಳೆಯರಿಗೆ ಚಿಂತನೆಯ ದಾರಿಯಾಗಬೇಕು. ನಮ್ಮಿಂದ ಈ ಸಮಾಜಕ್ಕೆ ಒಳ್ಳೆದಾಗುವ ಬಗೆ ಹಾಗೂ ಯಾವ ದಾರಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದು ಸಮ್ಮೇಳನಾಧ್ಯಕ್ಷೆ ಲಕ್ಷ್ಮೀ ಶ್ಯಾಮರಾವ್ ತಿಳಿಸಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷರಾಗಿ ಅವರು ಮಾತನಾಡಿದರು. ಗೃಹಿಣಿ ಗೃಹ ಮುಚ್ಚತೆ ಎಂಬ ಮಾತಿನಂತೆ ವೃತ್ತಿನಿರತ ಮಹಿಳೆಯರು ಮನೆಯ ನಿರ್ವಹಣೆ ಮಾಡುತ್ತಾ ಇರುವ ಸಮಯವನ್ನೆ ದಿಟ್ಟತನದಿಂದ ಸಾಧನೆ ಮಾಡುವ ಮಹಿಳೆಯರು ಸಾಧಿಸಲು ಹೊರಟ ಮಹಿಳೆಯರು ಇಂದು ಭಾರತದ ಉದ್ದಗಲಕ್ಕೂ ಇದ್ದಾರೆನ್ನುವುದು ಸತ್ಯವಾಗಿದೆ ಎಂದರು. ಪ್ರಾಚೀನ ಕಾಲದಿಂದಲೂ ಇಲ್ಲಿ ಮಹಿಳೆಯರು ಸ್ಥಾನಮಾನಕ್ಕೆ ಅಡ್ಡಿ ಆತಂಕಗಳು ಇದ್ದೇ ಇವೆ. ಮಹಿಳೆಯರ ಹಾದಿ ಅಷ್ಟೇನು ಸುಗಮ ಹಾದಿಯಲ್ಲ. ಇಲ್ಲಿ ಯಾವ ಯೋಜನೆಗಳು ಬಂದರೂ ಸಮಗ್ರವಾದ ಬದಲಾವಣೆ ಆಗುತ್ತಿಲ್ಲ. ಇಲ್ಲಿ ನಮ್ಮ ಹೋರಾಟವನ್ನು ಪುರುಷರ ವಿರುದ್ಧ ಎಂದುಕೊಳ್ಳದೆ ಮಹಿಳಾ ಶೋಷಣೆಯ ವಿರುದ್ಧ ಹೋರಾಟವೆಂದುಕೊಳ್ಳಬೇಕು ಎಂದರು.…
ಚಿಕ್ಕಮಗಳೂರು: ಮಹಿಳೆಯರ ಸಾಹಿತ್ಯ ಕ್ಷೇತ್ರದ ಸಾಧನೆ ನಿನ್ನೆ-ಮೊನ್ನೆಯಿಂದಲ್ಲ, ಹತ್ತನೇ ಶತಮಾನದಿಂದಲೇ ಜಾನಪದ ಗೀತೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಮಣಿಯರು ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿಶ್ರಾಂತ ಸಹ ಪ್ರಾಧ್ಯಾಪಕಿ ಡಾ. ಎಸ್.ಪಿ.ಉಮಾ ದೇವಿ ಪುತ್ತೂರು ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಹಿಂದಿನಿಂದಲೇ ಮಹಿಳೆಯರು ಜಾನಪದ ಗೀತೆಗಳನ್ನು ಕಟ್ಟಿ ಬೆಳೆಸಿದ ಪರಿಣಾಮ ವಿಶ್ವಮಾನ್ಯದಲ್ಲಿ ಮನ್ನಣೆ ಗಳಿಸಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇಂದು ಕನ್ನಡಭಾಷೆಗೆ ಇರುವಂಥ ಜೀವಂತಿಕೆ ಬೇರೆ ಯಾವುದೇ ಭಾಷೆಗೆ ದೊರೆತಿಲ್ಲ. ಹಿರಿಯರ ಜಾನಪದವು ಜನವಾಣಿ, ಕವಿವಾಣಿಯಾಗಿ ಇಂದು ಸುಗಂಧಭರಿತ ಹೂವಾಗಿ ಎಲ್ಲೆಡೆ ಹಬ್ಬಿಕೊಂಡಿದೆ ಎಂದರು. ಪುರುಷರಂತೆಯೇ ಹೆಣ್ಣು ಸಾಹಿತ್ಯ ಲೋಕದಲ್ಲಿ ಹಿಂದೆ ಬಿದ್ದಿಲ್ಲ. ಜೀವನದ ನೋವುನಲಿವು, ಬದುಕಿನ ಬವಣೆ, ಕರುಣಜನಕ ಸ್ಥಿತಿಗತಿಯನ್ನು ಉಕ್ಕಿ ಹರಿಸಿ ಬರವಣಿಗೆ ಮುಖೇನಾ ಪುಸ್ತಕಗಳನ್ನು ರಚಿಸಿ ಸಮಾಜದ ಮುಂದಿಟ್ಟು ಸಾಧನೆ ಮಾಡಲು…