ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಸುಮಾರು ೩೨ ಸಾವಿರ ಜನಸಂಖ್ಯೆಯನ್ನು ಹೊಂದಿರುವ ಬಲಿಜ ಸಮುದಾಯಕ್ಕೆ ನಿವೇಶನ ಹಾಗೂ ೨ಎ ಮೀಸಲಾತಿಯನ್ನು ಒದಗಿಸಿ ಜನಾಂಗಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ತಾಲ್ಲೂಕು ಬಲಿಜ ಸಂಘ ಶಾಸಕ ಸಿ.ಟಿ.ರವಿಯವರನ್ನು ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿಯಿಂದ ಎಂ.ಜಿ.ರಸ್ತೆ ಮುಖಾಂತರ ಮೆರವಣಿಗೆ ಸಾಗಿದ ಸಮುದಾಯದ ಹಿರಿಯರು, ಮಹಿಳೆಯರು ಹಾಗೂ ಮುಖಂಡರುಗಳು ಪಾಂಚಜನ್ಯ ಕಚೇರಿಯಲ್ಲಿ ಸಮಾವೇಶಗೊಂಡು ನಿವೇಶನ ಹಾಗೂ ೨ಎ ಮೀಸಲಾತಿ ಒದಗಿಸಬೇಕು ಎಂದು ಬುಧವಾರ ಸಂಜೆ ಶಾಸಕರಿಗೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ದೇವರಾಜ್ ಬಲಿಜ ಜನಾಂಗದಲ್ಲಿ ೨೧ ಉಪ ಪಂಗಡ ಗಳು ಒಳಗೊಂಡಿದೆ. ಬಳೆ, ಹೂವು, ಅರಿಶಿನ ಕುಂಕುಮ ವ್ಯಾಪಾರ ಮಾಡುವಂತಹ ಪಂಗಡವಾಗಿರುವ ಸಮಾಜಕ್ಕೆ ಸವಲತ್ತುಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬಲಿಜ ಸಮಾಜಕ್ಕೆ ತನ್ನದೇಯಾದಂತಹ ಇದುವರೆಗೂ ಯಾವುದೇ ನಿವೇಶನ, ಸಮುದಾಯ ಭವನ, ಕಾಲೇಜು ಮತ್ತು ವಸತಿ ನಿಲಯಗಳು ಇರುವುದಿಲ್ಲ. ಆ ಹಿನ್ನೆಲೆಯಲ್ಲಿ ಸಮಾಜದ ಹಿರಿಯರು ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಶಾಸಕರು ಹಿಂದುಳಿದಿರುವ ಬಲಿಜ ಸಮುದಾಯವನ್ನು ಪರಿಗಣಿಸಿ ಸಂಘಕ್ಕೆ ಸಮುದಾಯ ಭವನ, ಕೈವಾರ ತಾತಯ್ಯನವರ ದೇವಾಲಯ ನಿರ್ಮಿಸಲು ನಿವೇಶನ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಹಾಗೂ ೨ಎ ಮೀಸಲಾತಿಯನ್ನು ಒದಗಿಸಿ ಜನಾಂಗದ ಬೆಳವಣಿಗೆಗೆ ಸಹಕರಿ ಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ಹೆಚ್.ರಾಜೇಶ್, ತಾಲ್ಲೂಕು ಉಪಾಧ್ಯಕ್ಷ ಜೈವರ್ಧನ್, ಕಾರ್ಯದರ್ಶಿ ಕೆ.ಜೆ.ಚೇತನ್, ನಿರ್ದೇಶಕರುಗಳಾದ ಬಿ.ಜೆ.ಉಮಾಶಂಕರ್, ಪಿ.ಮಂಜುನಾಥ್.ಎ.ಯಶ್ವಂತ್, ಆನಂದಶೆಟ್ಟಿ, ಪ್ರಸನ್ನ ಕುಮಾರ್, ದಿವಾಕರ, ಕೆ.ಬಿ.ಗಿರೀಶ್, ಸಿ.ರಾಘವೇಂದ್ರ, ಜಯಲಕ್ಷ್ಮೀ, ಶಿಲ್ಪಶ್ರೀ, ರಿತೇಶ್, ಬಾಲಕೃಷ್ಣ, ನಂದೀಶ್, ರೋಹಿತ್ಕುಮಾರ್, ಅರುಣ್ ಕುಮಾರ್, ಶ್ರೀಕಾಂತ್, ಭಾಗ್ಯ, ನಿತ್ಯಾನಂದ್, ಡಿ.ಮಹೇಶ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Demand for reservation for MLAs