ಚಿಕ್ಕಮಗಳೂರುಎಕ್ಸ್ಪ್ರೆಸ್: ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದರ ಜತೆಗೆ, ಕಮರ್ಷಿಯಲ್ ಬ್ಯಾಂಕ್ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮವನ್ನು ಮಾಡಬಾರದೆಂದು ಸರ್ಕಾರ ನಿರ್ಣಯ ಮಾಡಿ ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ ರವರು ಘೋಷಣೆ ಮಾಡ್ಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಅವರು ಬಾಣೂರು ನೂತನ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ೧೯೨೬ರಲ್ಲಿ ಸಹಕಾರ ಸಂಘವು ಸ್ಥಾಪನೆಗೊಂಡು ಅನೇಕ ಕಾರಣಗಳಿಂದ ಸಂಘದ ಚಟುವಟಿಕೆ ಸ್ಥಗಿತಗೊಂಡ ಸಂದರ್ಭದಲ್ಲಿ ೨೦೧೦-೧೧ ರಲ್ಲಿ ಮರು ಚಾಲನೆ ನೀಡಿ ಇಂದು ಶೂನ್ಯ ಬಡ್ಡಿ ದರದಲ್ಲಿ ೯ ಕೋಟಿ ರೂಗಳ ಕೆಸಿಸಿ ಸಾಲವನ್ನು ಕೊಟ್ಟಿದ್ದು, ಇಡೀ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದರ ಜತೆಗೆ, ಕಮರ್ಷಿಯಲ್ ಬ್ಯಾಂಕ್ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮವನ್ನು ಮಾಡಬಾರದೆಂದು ಸರ್ಕಾರ ನಿರ್ಣಯ ಮಾಡಿ ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ ರವರು ಘೋಷಣೆ ಮಾಡ್ಡಿದ್ದಾರೆ ಎಂದು ತಿಳಿಸಿದರು.
ರೈತರು ಉದ್ದೇಶ ಪೂರ್ವಕವಾಗಿ ಮೊಸ ಮಾಡುವವರಲ್ಲ, ಬೆಳೆ ನಾಶದಿಂದ, ಮಳೆ ಬಾರದಿದ್ದಾಗ ರೈತನು ಅಸಾಯಕನಾಗುತ್ತಾನೆ, ರಸಗೋಬ್ಬರ ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದೆ, ರೈತರಿಗೆ ಮೊಸವಾಗಬಾರದೆಂಬ ಉದ್ದೇಶದಿಂದ ಭಾರತ್ ಯೂರಿಯಾ ಎಂಬ ಒಂದೇ ಬ್ರಾಂಡಿನ ರಸಗೋಬ್ಬರವನ್ನು ದೇಶದಾದ್ಯಂತ ಮಾರಾಟ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ, ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ೧೦ ಸಾವಿರ ರೂಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ, ಫಸಲ್ವಿಮಾ ಯೋಜನೆಯಡಿ ಬೆಳೆ ಪರಿಹಾರ ನೀಡಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸ್ಸಾದ ಮನೆ-ಮನೆಗಳಿಗೆ ಗಂಗೆ ಎಂಬ ಜಲಜೀವನ್ ಯೋಜನೆಯ ಶಂಕುಸ್ಥಾಪನೆಯನ್ನು ೧೫ ರಂದು ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ ರವರು ನೆರೆವೇರಿಸಲಿದ್ದಾರೆ, ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದೇವಸ್ಥಾನ, ಆಸ್ಪತ್ರೆ, ಬಸ್ ನಿಲ್ದಾಣ, ಹಾಸ್ಟೆಲ್, ಯಾತ್ರಿನಿವಾಸ, ಚೆಕ್ಡ್ಯಾಮ್, ಸೇತುವೆಯ ಕಾಮಗಾರಿಗಾಗಿ ೩೬ ಕೋಟಿ ರೂಗಳ ಅನುದಾನವನ್ನು ಕೊಡಲಾಗಿದೆ ಹಾಗೂ ೫ ಲಕ್ಷ ರೂಗಳ ಯಶಸ್ವಿನಿ ಯೋಜನೆ, ಆಯುಷ್ ಮಾನ್ ಭಾರತ್ ಯೋಜನೆ ತರಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜಪ್ಪ ಮಾತನಾಡಿ ರೈತರ ಬಳಿಗೆ ತೆರಳಿ ಸಹಕಾರಿ ಸಂಘದಿಂದ ಆಗುವ ಪ್ರಯೋಜನಗಳನ್ನು ತಿಳಿಸಿ, ರೈತರಿಂದ ಶೇರನ್ನು ಸಂಗ್ರಹಿಸಿ ಸಂಘದ ವತಿಯಿಂದ ಸಾಲವನ್ನು ವಿತರಣೆ ಮಾಡಿಕೊಂಡು ಬಂದಿದ್ದು, ೨ ವರ್ಷಗಳಿಂದ ಕೃಷಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ಪ್ರತಿಯೋಬ್ಬ ರೈತರಿಗೆ ಬೇದಬಾವ ತೊರದೆ ಪ್ರತಿರೈತರಿಗು ಇಂದು ೧೦ ಕೋಟಿ ವರೆಗಿನ ಸಾಲವನ್ನು ನೀಡಲಾಗಿದೆ, ಈ ಬಾಗದ ರೈತರಿಗೆ ೨೫ ಸಾವಿರ ರೂಗಳಿಂದ ೧ ಲಕ್ಷದ ವರೆಗೂ ಒಟ್ಟು ೨.೫ ಕೋಟಿ ರೂಗಳು ಸಾಲಮನ್ನಾ ದೊರೆತ್ತಿದೆ ಎಂದರು.
ಜಿಲ್ಲೆಯಲ್ಲಿ ೨೮೦ ಕೋಟಿ ಸಾಲಮನ್ನಾದ ಜತೆಗೆ ೩ ಲಕ್ಷ ರೂಗಳ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೋರೆಯುವಂತೆ ಸಹಕಾರ ಇಲಾಖೆ, ಜಿಲ್ಲಾ ಸಹಕಾರಿ ಬ್ಯಾಂಕ್ ಮಾಡುತ್ತಿದೆ, ರಾಜ್ಯದಲ್ಲಿ ಇರುವ ಎಲ್ಲಾ ಸಹಕಾರ ಬ್ಯಾಂಕ್ ಆರ್ಥಿಕ ಒತ್ತಡವನ್ನು ಅನುಭವಿಸುತ್ತಿದೆ, ಈ ಸಮಸ್ಯೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಗೆಹರಿಸಬೇಕು ಮತ್ತು ನಬಾರ್ಡ್ನಿಂದ ಹೆಚ್ಚಿನ ಮರು ಹಣಕಾಸಿನ ವ್ಯವಸ್ಥೆಯ ಜತೆಗೆ, ರಾಜ್ಯ ಸರ್ಕಾರದಿಂದ ೪% ಮತ್ತು ಕೇಂದ್ರ ಸರ್ಕಾರದಿಂದ ೩% ಬಡ್ಡಿ ದರದಲ್ಲಿ ಸಿಗುತ್ತಿರು ಹಣದಲ್ಲಿ ರಾಜ್ಯ ಸರ್ಕಾರದಿಂದ ಬಡ್ಡಿ ನೆರವು ಸಹಾಯದ ದೋರೆತಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ಗಳಿಗೆ ಲಾಭವಾಗುವುದರ ಜತೆಗೆ, ಸಹಕಾರ ಸಂಘದ ವತಿಯಿಂದ ಹೆಚ್ಚಿನ ರೈತರಿಗೆ ಸಾಲ ವಿತರಣೆ ಮಾಡಬಹುದು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ೯೦೦ ಕೋಟಿ ಕೃಷಿ ಸಾಲ ವಿತರಣೆ ಮಾಡಿದ್ದು, ಈಗಿನ ಆಡಳಿತ ಮಂಡಳಿಯು, ರೈತರಿಂದ ಬಂದ ಎಲ್ಲಾ ಅರ್ಜಿಗಳಿಗೆ ಸಕಾರಾತ್ಮಕವಾಗಿ ವಿಳಂಬವಿಲ್ಲದೆ ಸಾಲ ವಿತರಣೆ ಮಾಡಿಕೊಂಡು ಬಂದಿದೆ, ರಾಜ್ಯ ಸರ್ಕಾರ ಯಶಸ್ವಿ ಯೋಜನೆಯನ್ನು ೧-೧೧-೨೦೨೨ ರಿಂದ ಮರುಜಾರಿ ಮಾಡಿದ್ದು, ಪ್ರತಿಯೋಬ್ಬ ರೈತರು ಯಶಸ್ವಿ ಯೋಜನೆಯಲ್ಲಿ ಸದಸ್ಯತ್ವವನ್ನು ನೊಂದಾಣಿ ಮಾಡಿಕೊಂಡು, ಈ ಯೋಜನೆಯಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಸಿದ್ಧಯ್ಯ, ನಿರ್ದೇಶಕ ಹಾಲಮ್ಮ, ಕಲ್ಮುರಡಪ್ಪ, ಹೇಮಾವತಿ, ವೀರಭದ್ರಪ್ಪ, ಷಡಾಕ್ಷರಿ ಮೂರ್ತಿ, ಪರ್ವತಪ್ಪ, ನವೀನ್, ರಾಮೇಗೌಡ, ನಾಗಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ ಉಪಸ್ಥಿತರಿದ್ದರು.
Inaugurate the building of the new cooperative society in Banur