ALSO FEATURED IN

Brahma Kumari Ishwari Maha Vidyalaya: ಬ್ರಹ್ಮಕುಮಾರಿ ಈಶ್ವರಿ ಮಹಾ ವಿದ್ಯಾಲಯಕ್ಕೆ ಮಂಜೂರು ಮಾಡಿರುವ ಕಟ್ಟಡವನ್ನು ರದ್ದುಪಡಿಸುವಂತೆ ಮನವಿ

Spread the love

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಪ್ರಜಾಪಿತಾ ಬ್ರಹ್ಮಕುಮಾರಿ ಮಹಾ ವಿದ್ಯಾಲಯಕ್ಕೆ ಕೋಟೆ ಬಡಾವಣೆಯ ದೇವಸ್ಥಾನದಲ್ಲಿ ಇರುವ ಆವರಣವನ್ನು ಮಂಜೂರು ಮಾಡಿದ್ದಾರೆ, ಅದನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಕೋಟೆ ಬಡಾವಣೆಯ ಗ್ರಾಮಸ್ಥರು ಮಂಗಳವಾರ ಅಪಾರ ಜಿಲ್ಲಾಧಿಕಾರಿಗಳಾದ ರೂಪ ಅವರಿಗೆ ಮನವಿ ನೀಡಿದರು.

ನಗರಸಭೆ ಸದಸ್ಯ ಸಿ.ಎಂ.ಕುಮಾರ್ ಮನವಿ ನೀಡಿ ಮಾತನಾಡಿ, ನಗರದ ಕೋಟೆ ಬಡಾವಣೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಟ್ಟಡವಿದ್ದು, ಈ ಹಿಂದೆ ಸದರಿ ಕಟ್ಟಡವನ್ನು ಒಳಚರಂಡಿ ಇಲಾಖೆಗೆ ನೀಡಿದ್ದು, ಈಗ ಕಟ್ಟಡವು ಖಾಲಿ ಇದೆ,

ಕಟ್ಟಡವನ್ನು ದೇವಸ್ಥಾನದ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿದ್ದೆವು, ಆದರೆ ಈ ಕಟ್ಟಡವನ್ನು ಮುಜರಾಯಿ ಇಲಾಖೆಯಿಂದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ಮಹಾ ವಿದ್ಯಾಲಯಕ್ಕೆ ನೀಡಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ, ಈ ಕಟ್ಟಡವು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವಶ್ಯಕವಾಗಿರುತ್ತದೆ,

ಆದ್ದರಿಂದ ತಾವುಗಳು ತಕ್ಷಣವೇ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ಮಹಾ ವಿದ್ಯಾಲಯಕ್ಕೆ ಮಂಜೂರು ಮಾಡಿರುವುದನ್ನು ರದ್ದುಗೊಳಿಸಿ, ದೇವಸ್ಥಾನದ ಕೆಲಸಗಳಿಗೆ ಉಪಯೋಗಿಸುವಂತೆ ಆದೇಶವನ್ನು ಕೊಡಬೇಕಾಗಿ ಮನವಿ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಕೋಟೆ ಕೃಷ್ಣಮೂರ್ತಿ, ಶಿವಕುಮಾರ್, ಪ್ರಶಾಂತ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Brahma Kumari Ishwari Maha Vidyalaya

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version