ಚಿಕ್ಕಮಗಳೂರುಎಕ್ಸ್ಪ್ರೆಸ್: ನಗರದ ಎಂ.ಜಿ.ರಸ್ತೆಯ ಎರಡು ಬದಿ ಫುಟ್ಪಾತ್ ಹಾಗೂ ಇಂಟರ್ಲಾಕ್ ಅಳವಡಿಕೆ ಕಾಮಗಾರಿಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಶಂಕುಸ್ಥಾಪನೆ ನೆರೆವೇರಿಸಿದರು.
ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ನಗರದ ಕೇಂದ್ರ ಬಿಂದು ಹಾಗೂ ರಾಜ ಮಾರ್ಗವಾಗಿರುವ ಎಂಜಿ ರಸ್ತೆಯಲ್ಲಿ ಫುಟ್ಪಾತ್ ಹಾಗೂ ಇಂಟರ್ಲಾಕ್ ಕಾಮಗಾರಿಗೆ ೩೨.೫ ಲಕ್ಷ ರೂಗಳನ್ನು ಮೀಸಲಿಡಲಾಗಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಂಡು ನಗರವು ಸುಂದರವಾಗಿ ಕಂಗೋಳಿಸಲಿದೆ, ಈಗಾಗಲೇ ನಗರದೆಲ್ಲೆಡೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಪೂರ್ಣಗೊಳ್ಳುವ ಹಂತಕ್ಕೂ ಸಹ ತಲುಪಿದೆ ಎಂದರು.
ಶಾಸಕ ಸಿ.ಟಿ.ರವಿ ಅವರು ೬೦ ಕೋಟಿ ವಿಶೇಷ ಅನುದಾನದಲ್ಲಿ ಪ್ರತಿಯೊಂದು ರಸ್ತೆಯೂ ಸಹ ಡಾಂಬರೀಕರಣಗೊಳ್ಳುತ್ತಿದೆ, ನಗರದ ಆಜಾದ್ ಪಾರ್ಕ್ನಿಂದ ಡಿ.ಸಿ.ಕಚೇರಿಯ ವರೆಗೂ ಪುಟ್ಪಾತ್ ಮತ್ತು ಇಂಟರ್ಲಾಕ್ ಸರಿಪಡಿಸುವ ಕಾರ್ಯ ನಡೆಯುತ್ತಿದೆ, ಜನವರಿ ಅಂತ್ಯದೊಳಗಾಗಿ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿದೆ, ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ನಗರಸಭೆಯು ಶ್ರಮವಹಿಸುತ್ತಿದೆ, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ತಿಳಿಸಿದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ ನಗರದ ಎಂ.ಜಿ.ರಸ್ತೆಯ ಎರಡು ಬದಿ ಫುಟ್ಪಾತ್ ಹಾಗೂ ಇಂಟರ್ಲಾಕ್ ಅಳವಡಿಕೆ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು, ಸಂಪೂರ್ಣವಾಗಿ ಹಾಳಾಗಿರುವ ಭಾಗದ ಟೈಲ್ಸ್ಗಳನ್ನು ಮರುಜೊಡಣೆ ಮಾಡಿ, ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗದ ರೀತಿಯಲ್ಲಿ ೧೫ ದಿನಗಳ ಒಳಗಾಗಿ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.
ಎಂಜಿ ರಸ್ತೆ ಹಾಗೂ ಆಜಾದ್ ಪಾರ್ಕ್ ನಿಂದ ಡಿ.ಸಿ ಕಚೇರಿ ವರೆಗಿನ ಎರಡು ಬದಿಯಲ್ಲಿ ಪುಟ್ಬಾತ್ ಸರಿಪಡಿಸುವುದರ ಜತೆಗೆ ಮುಂದಿನ ಹಂತದಲ್ಲಿ ಬಸವನಹಳ್ಳಿ ಮುಖ್ಯ ರಸ್ತೆ ಸೇರಿದಂತೆ ಹಲವೆಡೆ ಪುಟ್ಬಾತ್ ರಸ್ತೆಯನ್ನು ಸರಿಪಡಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ವಿಫುಲ್ಕುಮಾರ್ ಜೈನ್, ಸಲ್ಮಾ, ರೂಪಕುಮಾರ್, ಅನುಮಧುಕರ್, ಪುಷ್ವಮೋಹನ್, ಇಂಜಿನಿಯರ್ ಚಂದನ್ ಮತ್ತಿತರರು ಉಪಸ್ಥಿತರಿದ್ದರು
BJP is trying to hide the voice of the opposition