ಚಿಕ್ಕಮಗಳೂರು: ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರು ಅಗ್ರಗಣ್ಯರು. ಅವರ ವ್ಯಕ್ತಿತ್ವ ಮತ್ತು ಜೀವನಸಾಧನೆಗಳು ಬದುಕಿಗೆ ಮಾರ್ಗಸೂಚಿಗಳಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಇಂದು ಕುವೆಂಪು ಕಲಾಮಂದಿರದಲ್ಲಿ ವಿಶ್ವ ಮಾನವ ದಿನಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾರಂಭದಲ್ಲಿ ಕುವೆಂಪುರವರು ಇಂಗ್ಲೀಷ್ನಲ್ಲಿ ಕವಿತೆಗಳನ್ನು ರಚನೆ ಮಾಡುತ್ತಿದ್ದರು ಐರಿಷ್, ಕವಿಯನ್ನು ಭೇಟಿಮಾಡಿ ತಾವು ರಚಿಸಿದ ಕವಿತೆಗಳನ್ನು ಐರಿಷ್ ಕವಿಗೆ ತೋರಿಸುತ್ತಾರೆ ಇವರನ್ನು ನೋಡಿದ ಐರಿಷ್ ಕವಿಯು ತಾವು ಕನ್ನಡದಲ್ಲಿ ಏಕೆ ರಚನೆ ಮಾಡಬಾರದೆಂದು ಕುವೆಂಪುರವರಿಗೆ ಕಿವಿಮಾತು ಹೇಳುತ್ತಾರೆ, ಅಂದಿನಿಂದ ಕುವೆಂಪುರವರು ಕನ್ನಡದಲ್ಲಿ ಕೃತಿಗಳನ್ನು ರಚಿಸಲು ಪ್ರಾರಂಭಿಸಿದರು. ಇವರ ಕೃತಿಗಳಲ್ಲಿ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮ ಬಾಳು ಎಂಬ ನೀತಿ ಪಾಠಗಳನ್ನು ಕಾಣುತ್ತೇವೆ ಇಂದಿನ ಪೀಳಿಗೆ ಕುವೆಂಪುರವರು ಕಂಡ ಸಾಮರಸ್ಯದ ಬದುಕು ಹೊಂದಬೇಕು ಎಂದರು.
ಎಲ್ಲರೂ ಹುಟ್ಟುವಾಗ ವಿಶ ಮಾನವರಾಗಿಯೇ ಹುಟ್ಟಿದ್ದರು ತಮ್ಮ ಬದುಕಿನಲ್ಲಿ ವಿಶ್ವ ಮಾನತ್ವವನ್ನು ಮತ್ತು ಉದಾರತೆಯನ್ನು ಹಾಗೂ ಸಾಮರಸ್ಯವನ್ನು ಅಳವಡಿಸಿಕೊಂಡಾಗ ಮಾತ್ರ ನಿಜರೂಪದಲ್ಲಿ ವಿಶ್ವಮಾನವರಾಗುತ್ತಾರೆ ಎಂದು ಸಾರಿದ ಮಾಹಾನ್ ಕವಿ ಕುವೆಂಪು ಎಂದು ತಿಳಿಸಿದರು.
ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿಯೇ ಹುಟ್ಟಿದ್ದರೂ ತಮ್ಮ ಬದುಕಿನಲ್ಲಿ ವಿಶ್ವಮಾನವತ್ವವನ್ನು ಮತ್ತು ಉದಾರತೆಯನ್ನು ಅಳವಡಿಸಿಕೊಂಡಾಗ ಮಾತ್ರ ನಿಜರೂಪದಲ್ಲಿ ವಿಶ್ವಮಾನವರಾಗುತ್ತಾರೆ ಎಂದು ಸಾರಿದ ಮಾಹಾನ್ ಕವಿ ಕುವೆಂಪು ಎಂದ ಅವರು ತಮ್ಮ ಕಾವ್ಯದಲ್ಲಿ ಗ್ರಾಮೀಣ ಪ್ರದೇಶದ ಬದುಕಿನ ವಿಚಾರಗಳನ್ನು ಬಿಂಬಿಸಿದ್ದಾರೆ. ಎಂದು ತಿಳಿಸಿದರು.
ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀ ರಾಮಾಯಾಣ ದರ್ಶನಂ ಮಹಾಕಾವ್ಯದಲ್ಲಿ ಇಂದಿನ ಕಾಲಕ್ಕೆ ಅಗತ್ಯವಾದ ಮಾಹಿತಿಗಳನ್ನು ನೀಡಿದ್ದಾರೆ. ಅಲ್ಲದೆ ಬೃಹತ್ ಕಾವ್ಯಗಳಾದ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಅವರ ನಾಟಕಗಳಲ್ಲಿ ವೈಚಾರಿಕತೆಯ ಸ್ಪರ್ಶವನ್ನು ಕಾಣುತ್ತೇವೆ ಎಂದು ಹೇಳಿದರು.
ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಸ್ವಾತಂತ್ರೋತ್ಸವದ ಭಾಷಣದಲ್ಲಿ ಕುವೆಂಪುರವರು ೨೦ ನೇ ಶತಮಾನದ ಶ್ರೇಷ್ಠ ಕವಿ, ಸಮಾಜದಲ್ಲಿ ಎಲ್ಲರೂ ಒಟ್ಟಿಗೆ ಬಾಳುವ ಎಲ್ಲಾ ಅಂಶಗಳನ್ನು ರಾಜ್ಯ ರಾಷ್ಟ್ರಕ್ಕೆ ನೀಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ. ಫ್ರಭು ಮಾತನಾಡಿ ಮೂಲ ರಾಮಾಯಾಣ ದರ್ಶನಂ ಬರೆದ ಮೇಲೆ ಅನೇಕ ಭಾಷೆಗಳಲ್ಲಿ ಸಾಕಷ್ಟು ಕೃತಿಗಳು ರಚನೆಯಾದವು. ಕನ್ನಡ ಸಾಹಿತ್ಯಕ್ಕೆ ಸಂಬಂಧ ಪಟ್ಟಂತೆ ಕನ್ನಡ ರತ್ನತ್ರಯರಾದ ಕುಮಾರವ್ಯಾಸ, ಪಂಪ, ರನ್ನ, ಜನ್ನ ಕವಿಗಳ ನಂತರ ೨೦ ನೇ ಶತಮಾನದಲ್ಲಿ ನವೋದಯ ಸಾಹಿತ್ಯ ರಚನೆಯನ್ನು ಕಾಣುತ್ತೇವೆ. ಈ ಕಾಲಗಟ್ಟದಲ್ಲಿ ರಚನೆಯಾದ ಸಾಹಿತ್ಯದಲ್ಲಿ ಆದರ್ಶವನ್ನು ಕಾಣುತ್ತೇವೆ ೯ ವರ್ಷಗಳು ಕುವೆಂಪುರವರು ರಾಮಾಯಾಣಂ ಕೃತಿ ರಚಿಸುತ್ತಾರೆ. ಈ ಕೃತಿಯಲ್ಲಿ ಭೂಲೋಕದಲ್ಲಿರುವ ಎಲ್ಲಾ ಮೌಲ್ಯಗಳ ಬಗ್ಗೆ ತಿಳಿಸಿದ್ದಾರೆ ಎಂದು ಅವರು ಪ್ರತಿಯೊಬ್ಬರು ಕುವೆಂಪುರವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳ ಹುಲ್ಲಹಳ್ಳಿ ಅವರು ಕುವೆಂಪು ಅವರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕ ಡಾ. ರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ , ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ , ಕಾರ್ಯದರ್ಶಿ ಎಂ.ಸಿ. ಪ್ರಕಾಶ್ ಉಪಸ್ಥಿತರಿದ್ದರು.
Kuvempu is foremost in Kannada literature