ಚಿಕ್ಕಮಗಳೂರು: ಜನವರಿ ೬ ರಿಂದ ೧೬ರ ವರೆಗೆ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಗೃಹಶೋಭೆ ಮೇಳ ನಡೆಯಲಿದ್ದು ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ನಗರದಲ್ಲಿಯೇ ಕೈಗೆಟಕುವ ದರದಲ್ಲಿ ರಾಜ್ಯ, ಅಂತರಾಜ್ಯದ ವಿವಿಧ ಗೃಹ ಬಳಕೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು ಶುಕ್ರವಾರದಿಂದ ಚಾಲನೆಗೊಂಡಿರುವ ಈ ಮೇಳವು ಜನವರಿ ೬ ರಿಂದ ೧೬ರ ವರೆಗೆ ತೆರೆದಿರಲಿದ್ದು ಸಾರ್ವಜನಿಕರು ಇಲ್ಲಿಗೆ ಭೇಟಿನೀಡಿ ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ ಮಾತನಾಡಿ ಗೃಹಶೋಭೆ ಮೇಳವು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಲಿದೆ, ಮನೆಯ ಅಲಂಕಾರಕ್ಕೆ ಬೇರೆ-ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ತರಲಾಗಿದೆ, ಇದರ ಉಪಯೋಗವನ್ನು ನಗರದ ಜನತೆ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಮೇಳದ ನಿರ್ದೇಶಕ ನಾಗಚಂದ್ರ ಮಾತನಾಡಿ ಕಳೆದ ೧೬ ವರ್ಷಗಳಿಂದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಪ್ರತಿ ಜನವರಿಯಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ಬೃಹತ್ ಗೃಹಬಳಕೆ ವಸ್ತುಗಳ ಮೇಳವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ, ಈ ಬಾರಿಯು ವಿಶೇಷವಾಗಿ ವಿವಿಧ ರಾಜ್ಯಗಳ ೧೦೦ಕ್ಕೂ ಹೆಚ್ಚು ಗೃಹಬಳಕೆ ವಸ್ತುಗಳ ಪ್ರದರ್ಶನವಾಗುತ್ತಿದ್ದು ಗ್ರಾಹಕರ ಕೈಗೆಟುಕುವ ದರದಲ್ಲಿ ದೊರೆಯಲಿದೆ, ಜತೆಗೆ ಮಕ್ಕಳಿಗೆ ಆಕರ್ಷಣಿಯವಾಗುವಂತ ಕೇಕ್, ಮತ್ತು ಎಲಿಯನ್ಸ್ ಸೇರಿದಂತೆ ವಿವಿಧ ಪ್ರದರ್ಶನಗಳು ಗ್ರಾಹಕರನ್ನು ಸೆಳೆಯಲಿದೆ ಎಂದರು.
ಮೇಳವು ಪ್ರತಿದಿನ ಬೆಳಗ್ಗೆ ೧೧ ರಿಂದ ರಾತ್ರಿ ೯ರ ವರೆಗೆ ಒಟ್ಟು ೧೦ ದಿನಗಳ ಕಾಲ ಇರಲಿದ್ದು ನಗರದ ಗ್ರಾಹಕರು ಗೃಹಮೇಳಕ್ಕೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ವೆಂಕಟೇಶ್ ಉಪಸ್ಥಿತರಿದ್ದರು.
Griha Shobha Mela till Jan 16, Product at affordable price