ಚಿಕ್ಕಮಗಳೂರುಎಕ್ಸ್ಪ್ರೆಸ್: ಭಾರತೀಯ ಮತದಾನ ವ್ಯವಸ್ಥೆ ತನ್ನ ಮುಕ್ತತೆ, ನಿಸ್ಪಕ್ಷ್ಷಪಾತತೆ ಮತ್ತು ಸುರಕ್ಷತೆ ದೃಷ್ಠಿಯಿಂದ ವಿಶ್ವದಲ್ಲಿ ಮಾದರಿಯಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ಮತದಾರರ ನೆನೆಯುವಿಕೆ ಮತ್ತು ಮತದಾನರಿಗೆ ಗೌರವಿಸುವುದಕ್ಕೆ ಭಾರತೀಯ ಚುನಾವಣಾ ಆಯೋಗವು ತನ್ನ ಸಂಸ್ಥಾಪನ ದಿನವಾದ ಜ. ೨೫ ನ್ನು ಮತದಾರ ದಿನವೆಂದು ಆಚರಿಸಲಾಗುತ್ತದೆ ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತ್ವರಿತಗತಿ ವಿಶೇಷ (ಪ್ರೋಕ್ಸೋ) ನ್ಯಾರ್ಯಲಯ-೧, ಗೌ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ಹೇಳಿದರು.
ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆಯು ಮೊದಲ ಪ್ರಕ್ರಿಯೆ ಯಾಗಿದ್ದು ಅನ್ನದಾನ ಧಾನ, ವಿದ್ಯಾಧಾನದಂತೆ ಮತದಾನವೂ ಕೂಡ ಶ್ರೇಷ್ಠದಾನವಾಗಿದೆ ೧೮ವರ್ಷ ತುಂಬಿದ ಪ್ರತಿಯೊಬ್ಬ ಯುವಕ ಯುವತಿಯರು ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸದೃಢ ದೇಶ ನಿರ್ಮಾಣ ಮಾಡಬೇಕು ಜನಸಾಮಾನ್ಯರು ಜಾಗೃತರಾಗಿದ್ದಾಗ ಆಗ ಯಾವ ಕ್ರಮದ ಅವಶ್ಯಕತೆ ಇರಲ್ಲ, ಮತದಾನ ಎಷ್ಟು ಜವಾಬ್ದಾರಿ ಯುತವಾಗಿ ಇರುತ್ತೆ ಅದರ ಒಳಗೆ ಇರುವ ಉತ್ತಮ ಆಯ್ಕೆ ಮಾಡಿಕೊಳ್ಳಬಹುದು, ಅದರಿಂದ ಈ ದೇಶ ಬಲಿಷ್ಠವಾಗುವ ರೀತಿ ನಡೆಕೊಳ್ಳಬಹುದು ಇದರಿಂದ ಮತದಾನ ಎಲ್ಲರಿಗೂ ಅನುಕೂಲವಾಗುತ್ತದೆ ದೇಶಕ್ಕೂ ಒಳ್ಳೆಯದಾಗುತ್ತೆ, ಪ್ರಪಂಚಕ್ಕೂ ಒಳ್ಳೆಯದಾಗುತ್ತೆ ಒಂದು ಒಳ್ಳೆ ಹೆಸರು ಬರುತ್ತದೆ ಎಂದು ಹೇಳಿದರು.
ಕುವೆಂಪು ಕಲಾಮಂದಿರದಲ್ಲಿ ಬುಧವಾರ ಭಾರತ ಚುನಾವಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ೧೩ ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
೧೮ ವರ್ಷ ತುಂಬಿರುವ ಪ್ರತಿಯೊಬ್ಬರು ಮತದಾನ ಮಾಡಬಹುದು ಹಾಗೂ ತಪ್ಪದೆ ಮತದಾನದಲ್ಲಿ ಭಾಗವಹಿಸಿ ನಮ್ಮ ಹಕ್ಕಿನ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಯುವ ಮತದಾರರಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಚುನಾವಣಾ ಆಯೋಗ ಪ್ರತಿಯೊಬ್ಬ ಅರ್ಹ ಮತದಾರನಿಗೆ ಚುನಾವಣೆಯಲ್ಲಿ ಭಾಗವಹಿಸುವ ಮತದಾನ ಮಾಡುವ ಹಕ್ಕು ನೀಡಿದೆ, ಅದನ್ನು ಪ್ರತಿಯೊಬ್ಬ ಅರ್ಹ ಮತದಾರರು ಸಮರ್ಥವಾಗಿ ಬಳಸಿಕೊಳ್ಳಬೇಕು. ಪ್ರಸ್ತುತ ಸಾಲಿನ ಮತದಾರರ ದಿನವನ್ನು ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ, ಪ್ರತಿಯೊಬ್ಬ ಮತದಾದರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಮಾತನಾಡಿ ಸುಮಾರು ಮೂರುವರೆ ಕೋಟಿ ಜನರ ತ್ಯಾಗ ಬಲಿದಾನಗಳ ಪ್ರತೀಕವಾಗಿ ಈ ದೇಶ ಸ್ವಾತಂತ್ರ್ಯವನ್ನು ಪಡೆದಿದೆ, ಸ್ವಾತಂತ್ರ್ಯ ನಂತರ ಘಟನೆಗಳನ್ನ ನಾವು ಸೂಕ್ಮವಾಗಿ ಅವಲೊಕಿಸುವುದು ಬಹಳ ಅನಿವಾರ್ಯವಾಗಿದೆ ಅಲವು ರಾಷ್ಟ್ರಗಳ ಸಂವಿಧಾನವನ್ನು ಅದ್ಯಯನ ಮಾಡಿ ಅತ್ಯಂತ ವಿಸ್ತಾರವಾದ ಲಿಖಿತ ಸಂವಿಧಾನವನ್ನು ಕೊಟ್ಟದ್ದಾರೆ. ನಮ್ಮ ಸಂವಿಧಾನದ ಬಗ್ಗೆ ಹೇಳವುದಾದರೆ ಪ್ರತೀ ಭಾರತೀಯನಿಗೂ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಉಲ್ಲೇಖಿಸಿದ್ದಾರೆ ಎಂದ ಅವರು ಪ್ರಪಾಂಚದ್ಯಂತ ೧೬೭ ದೇಶಗಳಲ್ಲಿ ಸುಮಾರು ೯೬ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ, ಸುಮಾರು ಒಂಬೈನೂರ ಐವತ್ತು ಕೋಟಿ ಜನಸಂಖ್ಯೆಯಲ್ಲಿ ಸುಮಾರು ಐನೂರು ಕೋಟಿ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾರೆ, ೪೬ ದೇಶಗಳಲ್ಲಿ ಸಣ್ಣ ಪುಟ್ಟ ಪ್ರಜಾಪ್ರಭುತ್ವದ ಅಂಶಗಳು ಸಣ್ಣದಾಗಿ ನಮಗೆ ತೋರುವುದು. ಪ್ರಾಧನ್ಯವಾಗಿ ಆಟೋಕ್ರಸಿ ಇರುವಂತ ವ್ಯವಸ್ಥೆಯನ್ನು ಇನ್ನು ೪೬ ದೇಶಗಳಲ್ಲಿ ಕಾಣುತ್ತೇವೆ ಎಂದು ಹೇಳಿದರು.
ಕಳೆದ ೨, ೩ ವರ್ಷಗಳಲ್ಲಿ ವಿವಿಧ ಇಲಾಖೆಯ ನೇತೃತ್ವದಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮತದಾನರ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ, ಈ ಪ್ರಕ್ರಿಯೆಯಲ್ಲಿ ಯುವಕರು ಅತ್ಯಂತ ಕ್ರಿಯಾಶೀಲರಾಗಬೇಕು, ನಗರದ ಮತದಾರರು ಮತದಾನದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಬಾಗಿವಹಿಸಬೇಕು, ವಯೋವೃದ್ಧರು ಕೂಡ ಅಷ್ಟೇ ಉತ್ಸಾಹದಿಂದ ಈ ಒಂದು ಪ್ರಕ್ರಿಯೆಯಲ್ಲಿ ಬಾಗಿಗಳಾಗಬೇಕೆಂದರು. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಆಡಳಿತ ವ್ಯವಸ್ಥೆಯ ಪರವಾಗಿ ಜಿಲ್ಲಾ ಚುನಾವಣಾ ಅಧಿಕಾರಿ ಅವರ ನೇತೃತ್ವದಲ್ಲಿ ಎಲ್ಲ ಸಿದ್ಧತೆಯನ್ನು ಜಿಲ್ಲಾ ಚುನಾವಣೆ ಶಾಕೆ ಮಾಡಿಕೊಂಡಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ ಕುರಿತು ನಡೆಸಿದ್ ಪ್ರಬಂದ ಸ್ಪರ್ಧೆಯಲ್ಲಿ ವಿಜೇತರಾದ ಫ್ರೌಢಶಾಲೆ ಹಾಗೂ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪವಿಭಾಗಾಧಿಕಾರಿ ರಾಜೇಶ್ ಮುಂತಾದವರಿದ್ದರು.
Participate in the voting process