ಚಿಕ್ಕಮಗಳೂರು: ತಾಲ್ಲೂಕಿನ ೪೧ ಗ್ರಾಮ ಪಂಚಾಯ್ತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗಧಿ ಪ್ರಕ್ರಿಯೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ನೇತೃತ್ವದಲ್ಲಿ ನಡೆಯಿತು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಎಲ್ಲಾ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಘೋಷಿಸಲಾಯಿತು. ಹಲವು ಪಂಚಾಯ್ತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿರ್ಧರಿಸಲು ಲಾಟರಿ ಮೊರೆ ಹೋಗಬೇಕಾಯಿತು. ಇದರ ಪರಿಣಾಮ ಕೆಲವು ಪಂಚಾಯ್ತಿಗಳಿಗೆ ಹಿಂದೆ ಇದ್ದ ಮೀಸಲಾತಿಯೇ ಮರುಕಳಿಸಿತು.
ಆಲ್ದೂರು ಪಂಚಾಯ್ತಿಯಲ್ಲಿ ಹಿಂದಿದ್ದ ಮೀಸಲಾಯಿತೇ ಈ ಬಾರಿಯೂ ಮರುಕಳಿಸಿತು. ಇದಕ್ಕೆ ಲಾಟರಿ ಕಾರಣವಾಗಿತ್ತು. ಈ ಬಗ್ಗೆ ಸದಸ್ಯರು ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದರೂ ಅದನ್ನು ಮತ್ತೆ ಬದಲಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಇನ್ನೂ ಕೆಲವು ಪಂಚಾಯ್ತಿಗೆ ನಿಗಧಿಯಾದ ಮೀಸಲು ಅಭ್ಯರ್ಥಿ ಒಬ್ಬರೇ ಇರುವ ಕಾರಣಕ್ಕೆ ಅವಿರೋಧ ಆಯ್ಕೆಯಾಗುವ ಅದೃಷ್ಟವನ್ನೂ ತಮ್ಮದಾಗಿಸಿಕೊಂಡರು.
ಚಿಕ್ಕಮಗಳೂರು ತಾಲ್ಲೂಕಿನ ೪೧ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿವರ ಕೆಳಕಂಡಂತಿದೆ.
ತೊಗರಿಹಂಕಲ್: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಐಡಿಪೀಠ: ಅಧ್ಯಕ್ಷ-ಎಸ್ಸಿ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಶಿರವಾಸೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಮೇಲಿನ ಹುಲುವತ್ತಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಎಸ್ಸಿ ಮಹಿಳೆ, ಬಿದರೆ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್ಸಿ, ಕಡವಂತಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್ಸಿ, ದೇವದಾನ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಹುಯ್ಗೆರೆ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಬಸರವಳ್ಳಿ: ಅಧ್ಯಕ್ಷ-ಎಸ್ಸಿ, ಉಪಾಧ್ಯಕ್ಷ-ಸಾಮಾನ್ಯ, ಬೈಗೂರು: ಅಧ್ಯಕ್ಷ-ಎಸ್ಸಿ, ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಆವತಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್ಸಿ, ಬ್ಯಾರವಳ್ಳಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಎಸ್ಸಿ ಮಹಿಳೆ, ದೊಡ್ಡ ಮಾಗರವಳಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಆಲ್ದೂರು: ಅಧ್ಯಕ್ಷ-ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಸತ್ತಿಹಳ್ಳಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಬಿಸಿಎಂ ಎ ಮಹಿಳೆ, ಕೆಳಗೂರು: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್ಟಿ ಮಹಿಳೆ, ತಳಿಹಳ್ಳ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಬಿಎಸಿಎಂ ಎ ಮಹಿಳೆ, ಮೈಲಿಮನೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಆಣೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ವಸ್ತಾರೆ: ಅಧ್ಯಕ್ಷ-ಎಸ್ಸಿ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಕೂದುವಳಿ: ಅಧ್ಯಕ್ಷ-ಬಿಸಿಎಂ ಬಿ, ಉಪಾಧ್ಯಕ್ಷ-ಸಾಮಾನ್ಯ, ಬಸ್ಕಲ್: ಬಿಸಿಎಂ ಎ, ಅಧ್ಯಕ್ಷ- ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಕೆಆರ್ ಪೇಟೆ: ಅಧ್ಯಕ್ಷ-ಎಸ್ಸಿ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಮಳಲೂರು: ಅಧ್ಯಕ್ಷ-ಬಿಸಿಎಂ ಎ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಅಂಬಳೆ: ಅಧ್ಯಕ್ಷ-ಬಿಸಿಎಂ ಎ, ಉಪಾಧ್ಯಕ್ಷ-ಸಾಮಾನ್ಯ, ಮುಗುಳವಳ್ಳಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಮರ್ಲೆ: ಅಧ್ಯಕ್ಷ-ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಹರಿಹರದಳ್ಳಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಎ, ಕಳಸಾಪುರ: ಅಧ್ಯಕ್ಷ-ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಬಿ ಮಹಿಳೆ, ಈಶ್ವರಳ್ಳಿ: ಅಧ್ಯಕ್ಷ-ಎಸ್ಸಿ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಎ, ಬೆಳವಾಡಿ: ಅಧ್ಯಕ್ಷ-ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಬಿ, ಮಾಚೇನಹಳ್ಳಿ: ಅಧ್ಯಕ್ಷ-ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ-ಎಸ್ಸಿ, ಕೆಬಿ ಹಾಳ್: ಅಧ್ಯಕ್ಷ-ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಸಿಂಧಿಗೆರೆ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್ಸಿ, ಲಕ್ಯ: ಅಧ್ಯಕ್ಷ-ಬಿಸಿಎಂ ಎ, ಉಪಾಧ್ಯಕ್ಷ-ಸಾಮಾನ್ಯ, ಲಕ್ಕುಮನಹಳ್ಳಿ: ಅಧ್ಯಕ್ಷ-ಎಸ್ಟಿ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಹಿರೇಗೌಜ: ಅಧ್ಯಕ್ಷ-ಬಿಸಿಎಂ ಬಿ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಎ ಮಹಿಳೆ, ಬಿಳೇಕಲ್ಲಳ್ಳಿ: ಅಧ್ಯಕ್ಷ-ಬಿಸಿಎಂ ಬಿ, ಉಪಾಧ್ಯಕ್ಷ-ಬಿಸಿಎಂ ಎ ಮಹಿಳೆ, ಮಲ್ಲೇನಹಳಿ: ಅಧ್ಯಕ್ಷ-ಎಸ್ಸಿ, ಉಪಾಧ್ಯಕ್ಷ-ಬಿಸಿಎಂ ಎ ಮಹಿಳೆ, ದಾಸರಹಳ್ಳಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, ಹಿರೇಕೊಳಲೆ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಅಲ್ಲಂಪುರ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಬೀಕನಹಳ್ಳಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಎ, ಕರ್ತಿಕೆರೆ: ಅಧ್ಯಕ್ಷ-ಎಸ್ಸಿ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ತೇಗೂರು: ಅಧ್ಯಕ್ಷ-ಎಸ್ಸಿ ಮಹಿಳೆ, ಉಪಾಧ್ಯಕ್ಷ-ಬಿಸಿಎಂ ಎ ಮಹಿಳೆ, ಮೂಗ್ತಿಹಳ್ಳಿ: ಅಧ್ಯಕ್ಷ-ಬಿಸಿಎಂ ಎ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಇಂದಾವರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಎಸ್ಸಿ ಮಹಿಳೆ.
Reservation of 41 Gram Panchayats of Chikkamagaluru Taluk