ಚಿಕ್ಕಮಗಳೂರು: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಚಲನಚಿತ್ರ ಮಂದಿರದ ಮಾಲೀಕರು ಭಿತ್ತಿ ಪತ್ರಗಳನ್ನು ಹಾಕಿರುವುದರಿಂದ ವಾಹನ ಸವಾರರು ಅದನ್ನು ವೀಕ್ಷಿಸುತ್ತಿರುವುದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.
ಅವರು ಗುರುವಾರ ನಗರಸಭೆ ವತಿಯಿಂದ ನಗರದ ಸಾರ್ವಜನಿಕ ಸ್ಥಳದಲ್ಲಿ ಹಾಕಲಾಗಿದ್ದ ಚಲನಚಿತ್ರದ ಭಿತ್ತಿಪತ್ರಗಳನ್ನು ತೆರವುಗಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಗರದ ಸ್ವಚ್ಚತೆಗೆ ಆದ್ಯತೆ ನೀಡಬೇಕಿರುವ ಚಿತ್ರಮಂದಿರದವರು ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಬಗ್ಗೆ ನಿಗಧಿತ ಸ್ಥಳದಲ್ಲೇ ಭಿತ್ತಿ ಪತ್ರಗಳನ್ನು ಹಾಕುವಂತೆ ಸೂಚಿಸಿ ಎಲ್ಲಾ ಚಿತ್ರಮಂದಿರಗಳ ಮಾಲೀಕರಿಗೆ ನಗರಸಭೆಯಿಂದ ಸೂಚನೆ (ಓoಣiಛಿe) ಪತ್ರವನ್ನು ನೀಡುವುದಾಗಿ ಎಚ್ಚರಿಸಿದರು.
ನಗರವನ್ನು ಸುಂದರ ನಗರವನ್ನಾಗಿಸಲು ನಿರ್ಧಾರ ಮಾಡಿದ್ದು ಅದರ ಪೂರಕವಾಗಿ ಇದು ಒಂದು ಭಾಗವಾಗಿದ್ದು, ವಿದ್ಯುತ್ ಕಂಬಗಳ ಮೇಲೆ, ಅಂಗಡಿ ರೋಲಿಂಗ್ ಶೆಟರ್ ಮೇಲೆ ಖಾಸಗಿ ಮನೆ ಗೋಡೆಗಳ ಮೇಲೆ ಭಿತ್ತಿಪತ್ರ ಅಂಟಿಸುತ್ತಿರುವುದರಿಂದ ಚಿತ್ರಮಂದಿರ ಮಾಲೀಕರ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರಸಭೆ ವತಿಯಿಂದ ಪ್ರತ್ಯೇಕ ಜಾಹಿರಾತು ಫಲಕಗಳನ್ನು ನಿರ್ಮಿಸಿದ್ದು ಸೂಕ್ತವಾದ ಸ್ಥಳದಲ್ಲಿಯೇ ಹಾಕಬೇಕು ಎಂದು ಮನವಿ ಮಾಡಿದ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲು ವಿನಂತಿಸಿದರು. ಕೆಲವು ಖಾಸಗಿ ಶಾಲೆಗಳು ಮತ್ತು ಸಂಘಸಂಸ್ಥೆಗಳು ಬ್ಯಾನರ್ ಬಂಟಿಂಗ್ಸ್ಗಳನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ನಗರದ ಅಂದ ಕೆಟ್ಟು ಹೋಗುತ್ತಿದೆ ಈ ಬಗ್ಗೆ ನಗರಸಭೆ ಅನುಮತಿ ಪಡೆದು ಸೂಕ್ತ ಜಾಗದಲ್ಲಿ ಹಾಕುವಂತೆ ಕೋರಿದರು.
ಇದನ್ನು ಮೀರಿ ಕಾನೂನು ಉಲ್ಲಂಘಿಸುವವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯವುದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳಾದ ಅಣ್ಣಯ್ಯ, ಈಶ್ವರ್, ಸುನಿಲ್, ಶ್ರೀನಿವಾಸ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
The movie poster should be posted at the designated place