ALSO FEATURED IN

ನಶಿಸುತ್ತಿರುವ ರಂಗ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯ ಇದೆ

Spread the love

ಚಿಕ್ಕಮಗಳೂರು: ವಿವಿಧ ಪಠ್ಯಗಳಿಂದ ಹಲವು ಸಾಹಿತಿಗಳು ರಚಿಸಿರುವ ಕಾವ್ಯರೂಪಗಳನ್ನು ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ ಕಾವ್ಯರಂಗ ಎಂಬ ನಾಟಕ ಪ್ರದರ್ಶನ ನಡೆಯುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಅಭಿಪ್ರಾಯಿಸಿದರು.

ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮೈಸೂರಿನ ನಿರ್ದಿಗಂತ ರಂಗಭೂಮಿ ಕಲಾ ತಂಡದವರು ಕಾವ್ಯರಂಗ ಎಂಬ ನಾಟಕವನ್ನು ಅಭಿನಯಿಸುತ್ತಿದ್ದು, ಇದರ ಅಧ್ಯಕ್ಷತೆಯನ್ನು ವಹಿಸ ಅವರು ಮಾತನಾಡಿದರು.

ನಿರ್ದಿಗಂತ ಸಂಸ್ಥೆಯಿಂದ ನಾಳೆ ಸಂಜೆ ೬ ಗಂಟೆಗೆ ಕುವೆಂಪು ಕಲಾ ಮಂದಿರದಲ್ಲಿ ಪಠ್ಯದ ಆಯ್ದ ಭಾಗಗಳಾದ ಗಾಯಗಳು ಎಂಬ ನಾಟಕವನ್ನು ಪ್ರದರ್ಶಿಸುತ್ತಿದ್ದು, ಇದರ ನೇತೃತ್ವವನ್ನು ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್‌ಬಸಪ್ಪ, ಗುರುಶಾಂತಪ್ಪ, ಮತ್ತಿತರರ ಪ್ರಮುಖರು ವಹಿಸಲಿದ್ದಾರೆ ಎಂದರು.

ರಂಗಭೂಮಿ ಕಲಾವಿದರ ನಾಟಕ ಪ್ರದರ್ಶನ ಮತ್ತು ಅವರ ವ್ಯಕ್ತಿತ್ವ ಹೇಗೆ ಇರುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಜೆವಿಎಸ್ ಶಾಲೆಗೆ ಡ್ರಾಮಾ ಟೀಚರ್‌ನ್ನು ನೇಮಕ ಮಾಡಲಾಗಿದ್ದು, ಇದರಿಂದ ಶಾಲೆಯ ಮಕ್ಕಳಲ್ಲಿ ನಾಟಕದ ಬಗ್ಗೆ ಅಭಿಮಾನ ಬೆಳೆಯಬೇಕು ಎಂದು ಹೇಳಿದರು.

ನಿರ್ದಿಗಂತ ಸಂಸ್ಥೆಯ ಸಂಸ್ಥಾಪಕರಾಗ ನಟ, ಚಿಂತಕ ಪ್ರಕಾಶ್‌ರಾಜ್‌ರವರು ಅವರ ತಾಯಿಗೆ ಅನಾರೋಗ್ಯದ ನಿಮಿತ್ತ ಇಂದು ಆಗಮಿಸಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದ ಅವರು ನಿರ್ದಿಗಂತ ಸಂಸ್ಥೆ ರಂಗಭೂಮಿ ಕಲಾ ತಂಡದವರು ಪ್ರದರ್ಶಿಸುವ ನಾಟಕದ ಸಂಭಾಷಣೆ, ನಟನೆಯನ್ನು ಶಾಂತಿ ರೀತಿಯಿಂದ ಮಕ್ಕಳು ಕೇಳಿದಾಗ ನಮ್ಮ ಶ್ರಮ ಫಲಿಸುತ್ತದೆ ಎಂದರು.

ಇತ್ತೀಚೆಗೆ ಅತ್ಯಾಧುನಿಕ ಮಾಧ್ಯಮಗಳಿಂದಾಗಿ ರಂಗಭೂಮಿ ಕಲಾವಿದರಿಗೆ ತೊಂದರೆಯಾಗುತ್ತಿದ್ದು, ಈ ಕಲೆಯನ್ನು ನಮ್ಮ ಶಾಲೆಯಲ್ಲಿ ಆಯೋಜನೆ ಮಾಡಿರುವುದು ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ರಂಗ ಕಲೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಶ್ಲಾಘಿಸಿದರು.

ನಿರ್ದಿಗಂತ ಸಂಸ್ಥೆಯ ವ್ಯವಸ್ಥಾಪಕ ಗಣೇಶ್ ಮಾತನಾಡಿ ಸುತ್ತಮುತ್ತಲ ಜನರ ಧ್ವನಿಯನ್ನು ಕಾವ್ಯದಲ್ಲಿಯ ಚಿಂತನಶೀಲ ನಡೆಗೆ ನೆರವು ನೀಡಬಲ್ಲದು ಎಂಬ ಆಶಯದೊಂದಿಗೆ ಕಾವ್ಯರಂಗ ರೂಪುಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲಕ್ಷ್ಮಣಗೌಡ, ಕಾರ್ಯದರ್ಶಿ ಪ್ರಕಾಶ್, ಜ್ಯೋತಿಪ್ರಕಾಶ್, ಮಾಚಗೊಂಡನಹಳ್ಳಿ ಶಾಲೆಯ ಸಹ ಕಾರ್ಯದರ್ಶಿ ದಿನೇಶ್, ಜೆವಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ತೇಜಸ್ವಿನಿ ಜಿಲ್ಲಾ ಒಕ್ಕಲಿಗರ ಸಂಘದ ವ್ಯವಸ್ಥಾಪಕ ರಾಜು, ಮುಖ್ಯೋಪಾಧ್ಯಾಯ ವಿಜಿತ್ ಮತ್ತಿತರರು ಭಾಗವಹಿಸಿದ್ದರು.

A play called Kavyaranga

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version