ಚಿಕ್ಕಮಗಳೂರು: ಬೆಂಗಳೂರಿನ ಈಶ ಫೌಂಡೇಶನ್ ವತಿಯಿಂದ ದಕ್ಷಿಣ ಭಾರತಾದ್ಯಂತ ಗ್ರಾಮೀಣ ಆಟಗಳ ಬೃಹತ್ ಉತ್ಸವದ ಗ್ರಾಮೋತ್ಸವದ ಕಾರ್ಯಕ್ರಮದ ಅಂಗವಾಗಿ ಮೊದಲ ಹಂತದ ಪಂದ್ಯಗಳು ಇದೇ ತಿಂಗಳು ೨೭ರ ಭಾನುವಾರ ಆರಂಭವಾಗಲಿವೆ.
ಈಶ ಫೌಂಡೇಶನ್ ಸಂಚಾಲಕರಾದ ಕೊಟ್ರೇಶಣ್ಣ ಹಾಗೂ ಇತರರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಮಹಿಳೆಯರು ಮತ್ತು ಪುರು?ರಿಗೆ ಲಿಂಗ ಭೇದ ಮತ್ತು ಜಾತಿ ಮತಗಳ ಭೇದವಿಲ್ಲದೆ ತ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಾವಳಿಗಳನ್ನು ಏರ್ಪಡಿಸಿ ಭಾರತವನ್ನು ಒಗ್ಗೂಡಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ನಗರ ಪ್ರದೇಶಗಳಾದ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆಗಳು ಮಹಾನಗರ ಪಾಲಿಕೆಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ಗ್ರಾಮೀಣ ಮಟ್ಟದಲ್ಲಿ ಈ ಪಂದ್ಯಾವಳಿಗಳನ್ನು ನಡೆಸುತ್ತಿದ್ದು ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸಕ್ತ ಕ್ರೀಡಾಪಟುಗಳು ಮಾತ್ರ ಭಾಗವಹಿಸಬೇಕು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದು ಹೇಳಿದರು.
ನಾಲ್ಕು ಹಂತಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ ಆ.೨೭ರಂದು ಕ್ಲಸ್ಟರ್ ಮಟ್ಟದ ಪಂದ್ಯಗಳು ನಡೆಯಲಿವೆ ನಂತರ ರಾಜ್ಯಮಟ್ಟ ಹಾಗೂ ಕೇಂದ್ರ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲ್ಲಿದ್ದು ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದವರಿಗೆ ವಾಲಿಬಾಲ್ ವಿಭಾಗದಲ್ಲಿ ೯ ಸಾವಿರ ರೂ, ೨ನೇ ಬಹುಮಾನ ೬ಸಾವಿರ ರೂ. ಮೂರನೇ ಬಹುಮಾನ ೩ ಸಾವಿರ ರೂ., ೪ನೇ ಬಹುಮಾನ ೨ಸಾವಿರ ರೂ. ನೀಡಲಾಗುವುದೆಂದು ತಿಳಿಸಿದರು.
ಅದೇ ರೀತಿ ಥ್ರೋಬಾಲ್ ವಿಭಾಗದಲ್ಲಿ ಮೊದಲ ಬಹುಮಾನ ೫. ಸಾವಿರ ರೂ., ೨ನೇ ಬಹುಮಾನ ೩ ಸಾವಿರ ರೂ. ಮೂರನೇ ಬಹುಮಾನ ೨೫೦೦ ರೂ., ಹಾಗೂ ನಾಲ್ಕನೇ ಬಹುಮಾನ ೧೫೦೦ರೂ ಗಳನ್ನು ನೀಡಲಾಗುವುದೆಂದು ಹೇಳಿದರು.
ಮುಂಗಡವಾಗಿ ಆನ್ಲೈನ್ ಮೂಲಕ ನೊಂದಣಿ ಮಾಡಲಾಗುವುದು ವಿಭಾಗೀಯ ಮಟ್ಟದ ಪಂದ್ಯಗಳಿಗೆ ಆಯ್ಕೆಯಾದವರಿಗೆ ಪ್ರಮಾಣ ಭತ್ಯೆ ನೀಡಲಾಗುವುದು ಕನಿ? ವಯೋಮಿತಿ ೧೪ ವ? ಗಳು ತುಂಬಿದ್ದು ಗರಿ? ವಯೋಮಿತಿಗೆ ಮಿತಿ ಇರುವುದಿಲ್ಲ ದೈಹಿಕವಾಗಿ ಸದೃಢವಾಗಿದ್ದವರಿಗೆ ಆಯ್ಕೆ ಮಾಡಲಾಗುವುದೆಂದು ತಿಳಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪಟುಗಳು ಈ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದರುಈ ಪತ್ರಿಕಾಗೋಷ್ಠಿಯಲ್ಲಿ ಈಶಾ ಫೌಂಡೇಶನ್ ನ ಸಚಿದಾನಂದ, ಶಾಂತರಾಮ ಶೆಟ್ಟಿ ಉಪಸ್ಥಿತರಿದ್ದರು
Gramotsava by Esha Foundation