ALSO FEATURED IN

ಕಾನೂನು ವ್ಯವಸ್ಥೆಗೆ ಒತ್ತು ನೀಡಿ ಜನಸ್ನೇಹಿ ಆಡಳಿತ ನೀಡಲು ಬದ್ಧ

Spread the love

ಚಿಕ್ಕಮಗಳೂರು:  ಕಾನೂನು ವ್ಯವಸ್ಥೆಗೆ ಒತ್ತು ನೀಡಿ ಜನಸ್ನೇಹಿ ಆಡಳಿತ ನೀಡಲು ಬದ್ಧನಾಗಿರುವುದಾಗಿ ನೂತನ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಂ ಅಮಟೆ ತಿಳಿಸಿದರು.

ಅವರು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಅತ್ಯಂತ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದರು.

ಜನರ ಸಹಕಾರವನ್ನು ಪಡೆದುಕೊಂಡು ಪೊಲೀಸ್ ತಂಡದೊಂದಿಗೆ ಕೆಲಸ ಮಾಡುವುದಾಗಿ ಹೇಳಿದ ಅವರು ಅಪರಾಧ ಪ್ರಕರಣಗಳು ಹೆಚ್ಚು ನಡೆಯದಂತೆ ಸೂಕ್ತ ಕ್ರಮ ವಹಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಿ ಅಪರಾಧಗಳನ್ನು ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ಎಚ್ಚರಿಸಿದರು.

ಈ ಮೊದಲು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿಲ್ಲ ಆದರೆ ದತ್ತ ಜಯಂತಿ ಬಂದೋಬಸ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಶಾಂತಿಯುತ ಸೌಹಾರ್ದತೆಗೆ ಹೆಚ್ಚಿನ ಮಹತ್ವ ನೀಡಲಿದ್ದು ಎಲ್ಲರೂ ಸಹಕರಿಸುವಂತೆ ಕೋರಿದರು.

ಜಿಲ್ಲೆಯಲ್ಲಿ ಉತ್ತಮವಾಗಿ ಎಲ್ಲರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಿರುವುದು ತುಂಬಾ ತೃಪ್ತಿ ಜೊತೆಗೆ ಸಂತೋ? ತಂದಿದೆ ಎಂದು ನಿಕಟಪೂರ್ವ ಪೊಲೀಸ್ ಮುಖ್ಯ ಅಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ತಿಳಿಸಿದರು.
ಅವರು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನೂತನ ಎಸ್.ಪಿ ಡಾ.ವಿಕ್ರಂ ಅಮಟೆ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಒಂದು ವ? ೧೫ ದಿನಗಳು ಅಧಿಕಾರವಧಿಯಲ್ಲಿ ಎಲ್ಲಾ ಸಿಬ್ಬಂದಿ ಸಹಕಾರ ಪಡೆದು ರಾಜಕೀಯ ಮುಖಂಡರ ಸಲಹೆಯೊಂದಿಗೆ ಉತ್ತಮ ಸೇವೆ ಸಲ್ಲಿಸಿದ್ದೇನೆ ಬಯಲು ಮತ್ತು ಮಲೆನಾಡಿನಿಂದ ಕೂಡಿರುವ ಚಿಕ್ಕಮಗಳೂರು ಜಿಲ್ಲೆ, ರಾಜ್ಯದಲ್ಲಿ ವಿಶೇ?ವಾದ ಅತ್ಯುತ್ತಮ ಶಾಂತಿಪ್ರಿಯ ಜಿಲ್ಲೆ ಎಂದು ಶ್ಲಾಘಿಸಿದರು. ದತ್ತ ಜಯಂತಿ ಗಣಪತಿ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಾವುದೇ ಗೊಂದಲ ಇಲ್ಲದೆ ಶಾಂತಿಯಿಂದ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗಿದ್ದು ಈ ನಮ್ಮ ಕರ್ತವ್ಯಕ್ಕೆ ಸಹಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವಿವಿಧ ರೀತಿಯ ಕ್ರೈಮ್ ಪ್ರಕರಣಗಳು ಇರುತ್ತಿದ್ದವು ಅದನ್ನು ಸಮರ್ಥವಾಗಿ ತಂಡದ ರೂಪದಲ್ಲಿ ನಿರ್ವಹಿಸಿರುವುದು ಸಂತೋ? ತಂದಿದೆ ಎಂದರು.

New Chief of Police Dr. Vikram said

Facebook
X
WhatsApp
Telegram
Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

[t4b-ticker]
Exit mobile version