ಚಿಕ್ಕಮಗಳೂರು: ಣಪತಿ ಉತ್ಸವಗಳು ಜನರಲ್ಲಿ ಭಕ್ತಿ ಮತ್ತು ಆಧ್ಯಾತ್ಮ ಮೂಡಿಸುವಲ್ಲಿ ಹೆಚ್ಚು ಆಕರ್ಷಿತವಾಗಲಿ ಎಂದು ಬಸವ ಮಂದಿರದ ಡಾ.ಬಸವಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ಇಂದು ನಗರದ ಬಸವನಹಳ್ಳಿ ಓಂಕಾರೇಶ್ವರ ದೇವಾಲಯದ ಮುಂಭಾಗದಲ್ಲಿ ಪ್ರತಿ?ಪಿಸುವ ಹಿಂದೂ ಮಹಾ ಗಣಪತಿ ಪೆಂಡಾಲಿಗೆ ಗೋಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ಬಾರಿಯ ಸಾಮೂಹಿಕ ಸಾರ್ವಜನಿಕ ಗಣಪತಿ ಸಾಂಸ್ಕೃತಿಕ ಉತ್ಸವಗಳು ಶ್ರೀಮಂತವಾಗಿದ್ದು ಹಿಂದು ಮಹಾಗಣಪತಿ ಆಚರಣೆ ದೇಶದ ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಾ ದಶಮಾನೋತ್ಸವ ಆಚರಿಸುತ್ತಿರುವ ಭಾವನೆ ಮೂಡುತ್ತಿದೆ ಎಂದು ಶ್ಲಾಘಿಸಿದರು.
ಕೇವಲ ಮಹಾರಾ?ಕ್ಕೆ ಸೀಮಿತವಾಗಿದ್ದ ಗಣಪತಿ ಉತ್ಸವವನ್ನು ಇಡೀ ದೇಶದಾದ್ಯಂತ ಸಾಮೂಹಿಕವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಬಾಲಗಂಗಾಧರ್ ತಿಲಕ್ ರವರು ಭಾರತದ ಶ್ರೇ? ಸಂಸ್ಕೃತಿ ಸಾಂಸ್ಕೃತಿಕ ವೈವಿಧ್ಯತೆ ಜೊತೆಗೆ ಅಖಂಡತೆ ಉಳಿಯುವಂತೆ ಮಾಡಿದ್ದಾರೆಂದು ಹೇಳಿದರು.
ಧಾರ್ಮಿಕ ಭಾವನೆಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಗಣಪತಿ ಉತ್ಸವಗಳು ಸಹಕಾರಿ ಎಂದ ಅವರು ಇಂದು ಗಣಪತಿ ಉತ್ಸವಗಳು ಸಂಸ್ಕೃತಿಯನ್ನು ಹೊರತುಪಡಿಸಿ ಸಿನಿಮಾ ಹಾಡುಗಳನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿರುವುದರಿಂದ ಯುವ ಪೀಳಿಗೆಗೆ ದಾರಿ ತಪ್ಪುತ್ತಿದೆ ಎಂದು ವಿಷಾಧಿದರು.
ದೇವರನ್ನು ಕಾಣಲು ವಿವಿಧ ರೀತಿಯ ವಿಭಿನ್ನವಾದ ಅಭಿಪ್ರಾಯಗಳ ಮೂಲಕ ಹಿಂದಿನ ದಾರ್ಶನಿಕರು ಜನತೆಗೆ ಮಾರ್ಗ ತೋರಿಸಿದ್ದಾರೆ ಜಗತ್ತಿನಲ್ಲಿ ನಿರಂತರ ಬದಲಾವಣೆಗಳಾಗುತ್ತಿದ್ದು ದೇವರು ಭಕ್ತ ಬೇರೆ ಬೇರೆ ಎಂದು ಸಿದ್ಧಾಂತದಲ್ಲಿ ಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
ವೈವಿಧ್ಯತೆ ವಿಶಿ?ಗಳನ್ನು ಬಂಧಿಸಿರುವುದೇ ಮಹಾಶಕ್ತಿ ಯಾಗಿದ್ದು ಅದನ್ನೇ ದೇವರೆಂದು ಕರೆಯುತ್ತೇವೆ ಪ್ರಕೃತಿ ಸ್ವಾಭಾವಿಕವಾಗಿ ಕೊಟ್ಟಿರುವುದನ್ನು ನಾವು ಧರ್ಮ ಎಂದು ವ್ಯಾಖ್ಯಾನಿಸುತ್ತೇವೆ. ವಿಶಾಲ ಅರ್ಥದಲ್ಲಿ ಧರ್ಮವನ್ನು ಜಗತ್ತಿಗೆ ತೋರಿಸಿದ ಸಾಂಸ್ಕೃತಿ ಅದು ಭಾರತೀಯ ಹಿಂದೂ ಸಂಸ್ಕೃತಿ ಎಂದು ಬಣ್ಣಿಸಿದರು.
ಹಿಂದು ಮಹಾಸಭಾ ವತಿಯಿಂದ ಭಾರತದ ಧರ್ಮ, ಹಿಂದೂ, ಸಂಸ್ಕೃತಿ, ಪರಂಪರೆಗಳನ್ನು ರಕ್ಷಣೆ ಮಾಡುತ್ತಿದ್ದೇವೆ. ಬೀಸುವುದು ಗಾಳಿ ಧರ್ಮ, ಹಾಲು ಕೊಡುವುದು ಹಸುವಿನ ಧರ್ಮ, ಹರಿಯುವುದು ನೀರಿನ ಧರ್ಮ, ಮರುಗುವುದು ಮನು? ಧರ್ಮ, ಇವೆಲ್ಲವನ್ನು ದೇವರು ನಮಗೆ ಕರುಣಿಸಿರುವ ಮಹಾಶಕ್ತಿ ಎಂದು ಹೇಳಿದರು.
ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಸಂತೋ? ಪ್ರಾಸ್ತಾವಿಕವಾಗಿ ಮಾತನಾಡಿ ೨೦೧೪ರ ಆಗಸ್ಟ್ ೩೧ ರಂದು ಮಹಾ ಗಣಪತಿ ಕಾರ್ಯಕ್ರಮಕ್ಕೆ ನಗರದಲ್ಲಿ ಚಾಲನೆ ನೀಡಿ ಆರಂಭಿಸಲಾಯಿತು ಎಂದರು.
ನಗರದಲ್ಲಿ ಕಳೆದ ಹತ್ತು ವ?ಗಳಿಂದ ಗಣಪತಿ ಉತ್ಸವವನ್ನು ಆಚರಿಸುತ್ತಾ ಬರುತ್ತಿದ್ದು ಇದಕ್ಕೆ ಹಿಂದೂ ಪರ ಸಂಘಟನೆಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿಂ ಅಧ್ಯಕ್ಷರಾದ ಸದಾಶಿವಪ್ಪ, ಬಿಜೆಪಿ ನಗರಾಧ್ಯಕ್ಷ ಮಧು ಕುಮಾರ್ ರಾಜ್ ಅರಸ್, ನಗರಸಭೆ ಉಪಾಧ್ಯಕ್ಷ ಅಮೃತೇಶ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ರೂಪಕುಮಾರ್, ಚೈತ್ರ, ಮಂಜುನಾಥ, ಅರುಣ್ಕುಮಾರ್, ಕೃಷ್ಣ, ಪ್ರದೀಪ್.ಕೆ.ರಾವ್, ಶ್ಯಾಮ್, ಶರತ್, ಪ್ರಸಾದ್ ಕೋಟೆ, ಸುನೀಲ್ ಆಚಾರ್ಯ, ಗೌತಮ್, ನಯನ, ಮಂಜು, ಕಿಶೋರ್, ದಿಲೀಪ್ ಶೆಟ್ಟಿ, ಕೇಶವ್ ಉಪಸ್ಥಿತರಿದ್ದರು ಕಾರ್ಯದರ್ಶಿ ಕೃ? ಸ್ವಾಗತಿಸಿದರು.
Hindu Maha Ganpati Gopuja in Pandali