ಚಿಕ್ಕಮಗಳೂರು: ಭಾರತೀಯ ಸಂಸ್ಕೃತಿಯಲ್ಲಿಗುರುವಿಗೆದೇವರ ಸ್ಥಾನವನ್ನು ನೀಡಲಾಗಿದೆ. ಗುರುಗಳಿಗೆ ಇತಿಹಾಸ ಸೃಷ್ಟಿಸುವ ಸಾಮರ್ಥ್ಯವಿದೆ. ಗುರು ಹಾಗೂ ಶಿಕ್ಷಕ ಈ ಪದಗಳ ನಡುವೆಅಗಾಧ ವ್ಯತ್ಯಾಸವಿದ್ದು, ಕರ್ತವ್ಯ ನಿರ್ವಹಿಸುವವರು ಶಿಕ್ಷಕ ಎನಿಸಿಕೊಂಡರೆ ಅರಿವು ಮೂಡಿಸುವವರುಗುರು ಎನಿಸುತ್ತಾರೆ. ಅರಿವು ಮೂಡಿಸುವಗುರು ಹೃದಯದಲ್ಲಿ ಸ್ಥಾನ ಪಡೆಯುತ್ತಾರೆಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರ ದಿನ ಆಚರಣೆ ಇಡೀ ದೇಶದಲ್ಲಿಯೇ ನೆಡೆಸಲಾಗುತ್ತಿದೆ, ವಿದ್ಯಾರ್ಥಿಗಳ ಜೀವನ ಗೋಲ್ಡನ್ ಲೈಫ್ ಪ್ರೌಢಶಿಕ್ಷಣ ಮುಗಿದ ನಂತರ ಶಾಲಾ ದಿನಗಳಿಗೆ ಹಿಂದುರುಗಿ ಬರಲು ಸಾದ್ಯವಿಲ್ಲ, ಶಿಕ್ಷಕರು ಮತ್ತು ಹಿರಿಯರ ಬಗ್ಗೆ ಗೌರವ ಬೆಳೆಸಿಕೊಂಡು ಜೀವದಲ್ಲಿ ಶಿಸ್ತನ್ನು ಬೆಳೆಸಿಕೊಂಡಾಗ ಉನ್ನತ ಸ್ಥಾನ ಏರಲು ಸಾದ್ಯ ಎಂದರು.
ಒಂದು ಶಿಲೆ ಉತ್ತಮ ಶಿಲ್ಪ್ಪಿಯ ಕೈಗೆ ಸಿಕ್ಕಿದರೆ ಸುಂದರ ಶಿಲ್ಪವಾಗುವ ಹಾಗೆ ಉತ್ತಮಗುರುವಿನ ಕೈಗೆ ಸಿಕ್ಕಿದ ವಿದ್ಯಾರ್ಥಿಗಳು ಇತಿಹಾಸವನ್ನು ಸೃಷ್ಟಿಸುವ ವ್ಯಕ್ತಿಗಳಾಗಿ ಬದಲಾಗುತ್ತಾರೆ. ಈ ಹಿನ್ನೆಯಲ್ಲಿಯೇ ಭಾರತದಲ್ಲಿಗುರುವಿಗೆದೇವರ ಸ್ಥಾನ ನೀಡಲಾಗಿದೆ.ಅಜ್ಞಾನದಕತ್ತಲನ್ನು ದೂರಗೊಳಿಸಿ ಜ್ಞಾನದ ಬೆಳಕನ್ನು ನೀಡಿ, ಗುರಿಯಕಡೆಗೆ ಮುನ್ನಡೆಸಲುಗುರುವಿನ ಮಾರ್ಗದರ್ಶನ ಬೇಕುಎಂದುಅವರು ಹೇಳಿದರು.
ಎಲ್ಲವನ್ನು ಬದಲಿಸುವ, ಎಲ್ಲವನ್ನು ಅಳಿಸಿ ಹಾಕುವ ಹಾಗೂ ಪುನರ್ನಿರ್ಮಾಣ ಮಾಡುವ ಸಾಮರ್ಥ್ಯವಿರುವುದು ಶಿಕ್ಷಣಕ್ಕೆ ಮಾತ್ರ. ಗುರು ಮಾತ್ರಎಲ್ಲರನ್ನು, ಎಲ್ಲವನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದ್ದಾನೆ.ವಿದ್ಯಾರ್ಥಿಗಳಲ್ಲಿ ಕನಸನ್ನು ಬಿತ್ತಿಅದಕ್ಕೆ ನೀರೆರೆದು ನನಸು ಮಾಡುವಲ್ಲಿಗುರುವಿನ ಪಾತ್ರ ಮಹತ್ವದ್ದು. ಅವರಲ್ಲಿ ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಾಮರ್ಥ್ಯವನ್ನುಸೃಷ್ಟಿಸುವ ಸಾಮರ್ಥ್ಯಗುರುವಿಗಿದೆಎಂದು ಹೇಳಿದರು.
ಜೆವಿಎಸ್ ಶಾಲೆಯು ಪ್ರಾರಂಭವಾಗಿ ೩೯ ವರ್ಷಗಳಾಗಿವೆ ಈ ಶಾಲೆಯಲ್ಲಿ ಹಲವಾರು ಶಿಕ್ಷಕರು ತಮ್ಮ ವೃತ್ತಿ ಜೀವನವನ್ನು ಕಳೆದಿದ್ದು, ೨೫ ವರ್ಷಕ್ಕೂ ಹೆಚ್ಚು ಸೇವೆಯನ್ನು ಸಲ್ಲಿಸಿ ಇನ್ನೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಮ್ಮ ಶಾಲೆಯಲ್ಲಿ ಇದ್ದಾರೆ ಅವರಿಗೆ ನಮ್ಮ ಅಭಿನಂದನೆಗಳು ಎಂದು ತಿಳಿಸಿದರು.
ಜೆವಿಎಸ್ ಶಾಲಾ ಸಹ ಕಾರ್ಯದರ್ಶಿ ಕೆ.ಕೆ.ಮನುಕುಮಾರ್ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ದೇಶದ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದುಎಂದರು.
ಡಾ. ಸರ್ವಪಲ್ಲಿರಾಧಾಕೃಷ್ಣನ್ಅವರುರಾಯಭಾರಿಯಾಗಿದ್ದ ಸಂದರ್ಭದಲ್ಲಿ ಭಾರತದ ಸಂಸ್ಕೃತಿಯನ್ನುಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಮೂಲಕ ಭಾರತದ ಬಗ್ಗೆ ವಿದೇಶಗಳಿಗೆ ಇರುವಕಲ್ಪನೆಯನ್ನುಉನ್ನತ ಮಟ್ಟಕ್ಕೆ ಏರಿಸಿಕೊಡುಗೆ ನೀಡಿದರುಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ದಿನೇಶ್, ಶಾಲಾ ಸಮಿತಿ ಸದಸ್ಯ ಗಂಗೇಗೌಡ, ಸಿಇಓ ಕುಳ್ಳೇಗೌಡ, ಮ್ಯಾನೇಜರ್ ರಾಜು, ಮುಖ್ಯ ಶಿಕ್ಷಕ ವಿಜಿತ್, ಪುಷ್ವವತಿ, ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ, ಉಪಸ್ಥಿತರಿದ್ದರು.
place of teacher god in indian culture