ಚಿಕ್ಕಮಗಳೂರು-ಚಿಕ್ಕಮಗಳೂರಿನ ಸಮಾಜ ಸೇವಕರೆಂದೆ ಹೆಸರುವಾಸಿಯಾಗಿರುವ ರೂಬೆನ್ ಮೋಸಸ್ ರವರಿಗೆ ಸಿಡಿಎ ಅಧ್ಯಕ್ಷ ಸ್ಥಾನ ನೀಡುವಂತೆ ಕ್ರಿಶ್ಚಿಯನ್ ಚರ್ಚ್ಸ್ ಅಸೋಸಿಯೇಷನ್ ವತಿಯಿಂದ ಶಾಸಕ ತಮ್ಮಯ್ಯ ರವರಿಗೆ ಮನವಿ ನೀಡಿದರು.
ಕ್ರಿಶ್ಚಿಯನ್ ಚರ್ಚ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಫಾದರ್ ಸುಂದರ್ ಬಾಬು ಮನವಿ ನೀಡಿ ಮಾತನಾಡಿ ಸಮಾಜ ಸೇವಕ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಹಲವಾರು ವರ್ಷಗಳಿಂದ ವಿವಿಧ ಜವಾಬ್ದಾರಿಗಳನ್ನು ಹೊತ್ತು, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಯಾವುದೇ ಪಕ್ಷ ವಿರೋದಿ ಚಟುವಟಿಕೆ ಮಾಡದೆ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರು, ಪಕ್ಷದ ಪರವಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಇಡಿ ದೇಶವನ್ನೇ ಬೆಚ್ಚು ಬೀಳಿಸಿದ ಕೋವಿಡ್ ಸಂದರ್ಭದಲ್ಲಿ ೨ ವರ್ಷ ಲಾಕ್ಡೌನಲ್ಲಿ ರಸ್ತೆಯಲ್ಲಿದ್ದ, ನಿರ್ಗತಿಕರು, ಬಿಕ್ಷುಕರು ಮತ್ತು ಅನಾಥರನ್ನು ತನ್ನ ನೇತೃತ್ವದಲ್ಲಿ ಸ್ನೇಹಿತರು ಮತ್ತು ತನ್ನ ಪತ್ನಿಯೊಂದಿಗೆ, ಪ್ರಾಣ ಭಯ ತೋರೆದು ಸಮಾಜ ಸೇವೆ ಮಾಡಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರನ್ನು ಕುಟುಂಬಸ್ಥರೆ ಮುಟ್ಟಲು ಹಿಂಜರಿಯುತ್ತಿದ್ದಾಗ, ಹಲವಾರು ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂದರು.
ಗುಜರಾತ್ ಭೂಕಂಪವಾದ ಸಂದರ್ಭದಲ್ಲಿ ರೋಟರಿ ಕ್ಲಬ್ ಸ್ನೇಹತರೊಂದಿಗೆ ಗುಜರಾತಿನ ಹಲವಾರು ಹಳ್ಳಿಗಳನ್ನು ಬೇಟಿ ಮಾಡಿ ಸೇವೆ ಸಲ್ಲಿಸಿದ್ದಾರೆ,
ಕೇರಳ, ಮಡಿಕೇರಿ, ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಬಾರಿ ಮಳೆಯಾದ ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ, ತನ್ನ ಪತ್ನಿ ಸಹನಾಜೋನ್ ರವರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದಾಗ ಅವರ ಅಂಗಾಂಗಗಳನ್ನು ದಾನ ಮಾಡಿ ಸಮಾಜ ಸೇವೆ ಮಾಡುತ್ತಿರುವ ರೂಬೆನ್ ಮೋಸಸ್ ರವರಿಗೆ ಸಿಡಿಎ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ಫಾದರ್ ರವಿ ಏಂಜೆಲೋಸ್, ಫಾದರ್ ಸುರೇಶ್ ಐಸಕ್, ಫಾದರ್ ನಾಗರಾಜ್ ಗೌಡ, ಫಾದರ್ ಕ್ರಿಸ್ಟೋಫರ್, ಫಾದರ್ ಜೆಮಿನಿ ಜಾರ್ಜ್, ಫಾದರ್ ವಿ.ಪಿ.ರಂಗ ಶಾಲೋಮ್, ಫಾದರ್ ಜೋಷ್ಪಾಲ್, ಫಾದರ್ ಆರೋನ್, ಫಾದರ್ ಸುರೇಂದ್ರ ಉಪಸ್ಥಿತರಿದ್ದರು.
A request to MLAs to give the post of CDA President