ಚಿಕ್ಕಮಗಳೂರು: ನಗರದ ವಿಜಯಪುರ ದೊಡ್ಡಗಣಪತಿ ಸೇವಾ ಸಮಿತಿ ವತಿಯಿಂದ ವಿಜಯಪುರದಲ್ಲಿ ಗಣಪತಿ ಪ್ರತಿಷ್ಟಾಪನೆ ಸಂಬಂಧ ಶಾಸಕ ಹೆಚ್.ಡಿ.ತಮ್ಮಯ್ಯ ಗುದ್ದಲಿಪೂಜೆ ನೆರವೇರಿಸುವ ಮೂಲಕ ಪ್ರತಿಷ್ಟಾಪನೆಯ ಪ್ರಾರಂಭಿಕ ಹಂತಕ್ಕೆ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಗಣಪತಿ ಪ್ರತಿಷ್ಟಾಪಿಸುವುದು ಸೌಹಾರ್ದತೆಯ ಸಂಕೇತ. ಸ್ವಾತಂತ್ರ್ಯ ಪೂರ್ವ ದ ಸಂದರ್ಭದಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಭಾರತದಲ್ಲಿ ಸೌಹಾರ್ದತೆ ಸಾರುವ ಸಂಬಂಧ ಬಾಲ ಗಂಗಾ ಧರ್ ತಿಲಕ್ ಅವರು ಗಣಪತಿ ಮೂರ್ತಿ ಸ್ಥಾಪಿಸಿ ಶಾಂತಿ, ಸಾಮರಸ್ಯತೆಯಿಂದ ಬಾಳಲು ಅನುವು ಮಾಡಿಕೊಟ್ಟಿದ್ದು ಅಂ ದಿನಿಂದಲೂ ಇದುವರೆಗೂ ಗಣಪತಿ ಮೂರ್ತಿ ಪ್ರತಿಷ್ಟಾಪನೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂ ದರು.
ಕಳೆದ ಹಲವಾರು ದಿನಗಳಿಂದ ಮಳೆಯ ಕೊರತೆಯಿಂದ ರೈತರು ಹಾಗೂ ಜನತೆಗೆ ತೀವ್ರ ಸಮಸ್ಯೆಯಾಗಿದೆ. ಆ ನಿಟ್ಟಿನಲ್ಲಿ ಗಣಪತಿ ಪ್ರತಿಷ್ಟಾಪಿಸಿದ್ದು ವಿಸರ್ಜನಾ ಸಮಯದಲ್ಲಿ ಹೆಚ್ಚು ಮಳೆಯಾಗುವ ಮೂಲಕ ಕೆರೆಕಟ್ಟೆಗಳು ತುಂಬಿ ವಿಸರ್ಜನೆಗೆ ಹಾಗೂ ರೈತಾಪಿ ವರ್ಗಕ್ಕೆ ತುಂಬಾ ಅನುಕೂಲ ಕಲ್ಪಿಸಲಿ ಎಂದು ಪ್ರಾರ್ಥಿಸೋಣ ಎಂದರು.
ವಿಜಯಪುರ ದೊಡ್ಡಗಣಪತಿ ಮುಖ್ಯಸ್ಥ ಧನಂಜಯ್ಗೌಡ ಮಾತನಾಡಿ ಇಂದಿನ ಗುದ್ದಲಿಪೂಜೆ ಬಳಿಕ ಸೆ.೧೮ ರಿಂದ ಹತ್ತು ದಿನಗಳ ಕಾಲ ಗಣಪತಿ ಇರಿಸಲಾಗುವುದು. ಛದ್ಮವೇಷ, ಡ್ಯಾನ್ಸ್, ಆರ್ಕೆಸ್ಟ್ರಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಸೆ.೨೬ ರಂದು ವಿವಿಧ ಹೋಮ ಜರುಗುವ ಮೂಲಕ ಅನ್ನ ಸಂತ ರ್ಪಣೆ ಕಾರ್ಯಕ್ರಮ. ಸೆ.೨೭ ರಂದು ಕೊನೆಯ ದಿನ ಭವ್ಯ ಮೆರವಣಿಗೆ ಮೂಲಕ ಗಣಪತಿ ವಿಸರ್ಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಗಣಪತಿ ಸೇವಾ ಸಮಿತಿ ಮುಖಂಡರುಗಳಾದ ಶಂಕರ್ಸಿಂಗ್, ಕೇಬಲ್ ಮಂಜು, ಆದರ್ಶ್, ಕೇಬಲ್ ಉಮೇಶ್, ಸ್ಥಳೀಯರಾದ ಕಾಯಿ ರವಿ, ಶ್ರೀನಿವಾಸ್, ನಾರಾಯಣ್, ಮಿಲ್ಟ್ರಿ ಮಂಜು ಮತ್ತಿತರರು ಹಾಜರಿದ್ದರು.
Ganapati idol of Vijayapur is installed with shovel worship