ಚಿಕ್ಕಮಗಳೂರು: ಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳು ಈ ದೇಶದಲ್ಲಿ ದೊಡ್ಡ ಪಿಡುಗಾಗಿದ್ದು ಇಂದು ಇವುಗಳನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಲಕ್ಯಾ ಗ್ರಾಮದ ಬಳಿ ಮೊದಲ ಜೈವಿಕ ವಿಘಟನೀಯ ಪ್ಲಾಸ್ಟಿಕ್ ಉತ್ಪಾದನಾ ಘಟಕವನ್ನು ಹೊಸದಾಗಿ ಪ್ರಾರಂಭಿಸಲಾದ ಕೈಗಾರಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳು ದಂಧೆ ಕೋರರಿಗೆ ಹಣ ಮಾಡುವ ವ್ಯವಸ್ಥೆಯಾಗಿದೆ ಇದರಲ್ಲಿ ಕಸ ವಿಲೇವಾರಿ ಮಾಡುವ ದೊಡ್ಡ ಮಾಫಿಯಾ ಇದೆ ದೆಹಲಿಯಿಂದ ಚಿಕ್ಕಮಗಳೂರು ವರೆಗೆ ಇದನ್ನು ನಿಯಂತ್ರಿಸಲು ಬಲವಾದ ಕೆಲವು ಕಾರಣಗಳಿದ್ದು ಅದನ್ನು ಈಗ ಹೇಳುವುದು ಅಪ್ರಸ್ತುತ ಎಂದರು.
ಕಸ ವಿಂಗಡಣೆ ಜೊತೆಗೆ ಪ್ಲಾಸ್ಟಿಕ್ ವಿಂಗಡಣೆ ಪ್ರತಿ ಮನೆಯಲ್ಲಿಯೇ ಮಾಡಿ ಈ ಕಂಪನಿಗೆ ನೀಡಿದರೆ ಅದನ್ನು ೧೮೦ ದಿನದಲ್ಲಿ ಕರಗುವಂತೆ ಮಾಡಿ ಪುನರ್ ಬಳಕೆ ಮಾಡಲು ಯೋಗ್ಯವಾದ ಪ್ಲಾಸ್ಟಿಕ್ ತಯಾರಿಸುತ್ತಾರೆ ಎಂದು ತಿಳಿಸಿದರು.
ಜಿಲ್ಲೆಗೆ ಹೊಸ ಹೊಸ ಆತ್ಯಾಧುನಿಕ ಇಂತಹ ಕೈಗಾರಿಕೆಗಳು ಬರಬೇಕೆಂಬುದು ನನ್ನ ಆಸೆ ಆಗಿದ್ದು ಸರ್ಕಾರ ಮತ್ತು ರಾಜಕಾರಣಿಗಳು ಇದನ್ನು ಮಾಡಬೇಕಿತ್ತು. ಇಚ್ಚಾಶಕ್ತಿ ಕೊರತೆಯಿಂದಾಗಿ ವಿಳಂಬವಾಗಿದ್ದು ಅಪ್ಪ ಹಾಕಿದ ಆಲದ ಮರ ಅಂತ ಎಲ್ಲಾ ಮಾಡಿದ್ದನ್ನೇ ಮಾಡುತ್ತಿದ್ದಾರೆ ಎಂದು ವಿ?ಧಿಸಿದರು.
ವಿಕಾಸ್ ಶೆಟ್ಟಿ ಎಂಬ ಯುವಕ ವಿದೇಶದಲ್ಲಿ ವ್ಯಾಸಂಗ ಮಾಡಿ ಅಲ್ಲೇ ನೌಕರಿಯಲ್ಲಿದ್ದರೂ ತನ್ನ ದೇಶಕ್ಕೆ ಸೇವೆ ಮಾಡಬೇಕೆಂಬ ದೃಷ್ಟಿಯಿಂದ ಉದ್ಯೋಗ ಬಿಟ್ಟು ಪ್ಲಾಸ್ಟಿಕ್ ಮರು ತಯಾರಿಸಿ ಮಾಡುವ ಕರಗುವ ಪ್ಲಾಸ್ಟಿಕ್ ಗಾಗಿ ಪರಿವರ್ತಿಸುತ್ತಿರುವ ಕೈಗಾರಿಕೆಯನ್ನು ಸ್ಥಾಪಿಸಿರುವುದು ಶ್ಲಾಘನೀಯ ಇದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ಲಾಸ್ಟಿಕ್ ಮುಕ್ತ ದೇಶ, ರಾಜ್ಯ, ನಗರವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ, ರಾಜ್ಯ ಸರ್ಕಾರ ಘೋ?ಣೆ ಮಾಡಿ ಜನಜಾಗೃತಿ ಮಾಡಿದೆ ಆದರೆ ಎ?ರಮಟ್ಟಿಗೆ ಅದು ಯಶಸ್ವಿಯಾಗಿದೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದ್ದು ಪ್ಲಾಸ್ಟಿಕ್ ಮುಕ್ತಗೊಳಿಸಲು ಇಂತಹ ಯುವಕರು ಮುಂದಾಗುತ್ತಿದ್ದಾರೆ ಎಂದು ಪ್ರಶಂಸಿದರು.
ಈ ಸಂಬಂಧ ನಗರಸಭೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ಪ್ಲಾಸ್ಟಿಕ್ ಮುಕ್ತ ನಗರ, ದೇಶ ಪಟ್ಟಣವಾಗಿ ಮಾಡಲು ಸಾಧ್ಯ ಆ ನಿಟ್ಟಿನಲ್ಲಿ ಕಸದ ಜೊತೆಯಲ್ಲಿರುವ ಪ್ಲಾಸ್ಟಿಕ್ ಅನ್ನು ಬೇರ್ಪಡಿಸಿ ಈ ಕೈಗಾರಿಕ ಘಟಕಕ್ಕೆ ನೀಡುವಂತೆ ಮನವಿ ಮಾಡಿದರು.
ಪಂಚ ನದಿಗಳ ಉಗಮ ಸ್ಥಾನದ ಗಿರಿಗಳ ಸಾಲಿನಲ್ಲಿರುವ ಈ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಹೊಂದಿರುವ ಗಿರಿ ಪ್ರದೇಶದಲ್ಲಿ ಈ ಪ್ಲಾಸ್ಟಿಕ್ ಒಂದು ಅಡಿ ಆಳದವರೆಗೆ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ ಎಂದು ವಿ?ಧಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಲಿಕೆರೆ ದೊಡ್ಡ ಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಕರಡಿ ಗವಿಮಠದ ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿ ವಹಿಸಿದ್ದರು. ಲೈಫ್ ಲೈನ್ ಫೀಡ್ಸ್ ಮಾಲೀಕರಾದ ಕಿಶೋರ್ ಕುಮಾರ್ ಹೆಗಡೆ, ಪದ್ಮಮಹೇಶ್ ಉಪಸ್ಥಿತರಿದ್ದರು.
ಈ ನೂತನ ಕೈಗಾರಿಕ ಘಟಕದ ಮಾಲಿಕ ವಿಕಾಸ್ ಶೆಟ್ಟಿ ಮಾತನಾಡಿ ಇದೊಂದು ಪ್ಲಾಸ್ಟಿಕ್ ನಿರ್ವಹಣೆ ಮಾಡಲು ಹೊಸ ಪ್ರಯೋಗವಾಗಿದ್ದು ಭೂಮಿಯಲ್ಲಿ ೧೮೦ ದಿನದಲ್ಲಿ ನಮ್ಮಲ್ಲಿ ತಯಾರಾದ ಪ್ಲಾಸ್ಟಿಕ್ ಕರಗುತ್ತದೆ ಎಂದರು.
ಬೇಕರಿ, ಕಿರಾಣಿ ಅಂಗಡಿ, ಪಾನಿಪೂರಿ, ಗೋಬಿ ಮಂಚೂರಿ, ಮುಂತಾದ ಅಂಗಡಿಗಳಲ್ಲಿ ಪಾರ್ಸಲ್ ತಂದು ಬಿಸಾಕುವ ಪ್ಲಾಸ್ಟಿಕ್ ಮರುಬಳಕೆ ಮಾಡಬಹುದಾಗಿದೆ ಎಂದು ಹೇಳಿದರು.
Plastic solid waste is the biggest scourge of this country