ಚಿಕ್ಕಮಗಳೂರು: ದೇಶದಲ್ಲಿ ಆನೆಗಳ ಸಂತತಿ ಹೆಚ್ಚು ನ? ಹಾಗೂ ಮಾನವ ಸಂಘ? ಹೆಚ್ಚಾಗಿದ್ದು ಈ ಸಂಬಂಧ ಆರ್ಟಿಪಿಸಿಎಲ್ ಇಂಟಲಿಜೆನ್ಸ್ ಆಧಾರಿತ ಆನೆಗಳ ಗಣತಿ ಕಾರ್ಯಾ ಕೈಗೊಂಡು ವೈಜ್ಞಾನಿಕವಾಗಿ ಗುರುತಿಸಿ ಪ್ರತ್ಯೇಕಿಸಬೇಕಾಗಿ ಭದ್ರ ಏಕೋ ಕನ್ಸರ್ವೇ?ನ್ ಫೌಂಡೇಶನ್ ಅಧ್ಯಕ್ಷ ಡಾ. ಶಿವಪ್ರಸಾದ್ ಅವರು ಒತ್ತಾಯಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ಈ ಸಂಬಂಧವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಆನೆಯ ಸಂತತಿ ಹೆಚ್ಚುತ್ತಿರುವುದು ಉಸ್ತುವಾರಿ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಪ್ರಶಂಸನೀಯವಾಗಿದ್ದರು ಆನೆಗಳ ಹಾವಳಿಯಿಂದ ಸಂಘ? ಮತ್ತು ನ?ಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಆಧುನಿಕ ತಂತ್ರಜ್ಞಾನ ಆಧಾರಿತ ನಿರ್ವಹಣಾ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಕಳೆದ ಮೂರು ವ?ಗಳಲ್ಲಿ ೧೫೦೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವುದಾಗಿ ಸರ್ಕಾರದ ವರದಿ ಹೇಳಿದೆ ಈ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಆರ್ಟಿಪಿಸಿಎಲ್ ಇಂಟಲಿಜೆನ್ಸ್ ಆಧಾರಿತ ಆನೆಗಳ ಗಣತಿ ಕೈಗೊಂಡು ಪ್ರತಿ ಆನೆಗಳ ದೇಹ ಸಮಗ್ರ ಮಾಹಿತಿಯೊಂದಿಗೆ ರಚನಾಧಾರಿತವಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಕ್ಯಾಮರಗಳ ಸಹಾಯದಿಂದ ದತ್ತಾಂಶಗಳನ್ನು ಸಂಗ್ರಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.
ಈ ರೀತಿಯ ದತ್ತಾಂಶಗಳಿಂದ ಸಂಭವನೀಯ ಅಪಾಯವನ್ನುಂಟು ಮಾಡುವ ತುಂಡಾನೆಗಳನ್ನು ಗುರುತಿಸುವುದು ಪ್ರತ್ಯೇಕಿಸಿ ಪುನರ್ವಸತಿ ಕಲ್ಪಿಸುವುದರಿಂದ ಸಾರ್ವಜನಿಕರಲ್ಲಿನ ಆತಂಕವನ್ನು ಕಡಿಮೆ ಮಾಡಬಹುದಾಗಿರುತ್ತದೆ ಇದರ ಜೊತೆಗೆ ಆನೆಗಳ ಹಿಂಡು ಬಂದಾಗ ನಿರ್ವಹಣೆ ಮತ್ತು ರಕ್ಷಣಾ ಕವಾಯಿತುಗಳನ್ನು ನಡೆಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದರು.
ಸರ್ಕಾರ ಈ ಬಗ್ಗೆ ಗಮನ ಹರಿಸಿ ವೈಜ್ಞಾನಿಕವಾಗಿ ಗುರುತಿಸಿ ಪ್ರತ್ಯೇಕಿಸಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಎಚ್.ಎಂ ಮಂಜುನಾಥ್ ಉಪಸ್ಥಿತರಿದ್ದರು.
RTPCL intelligence based elephant census work