ALSO FEATURED IN

ಜೀವನದಲ್ಲಿ ದೊಡ್ಡ ಗುರಿಯನ್ನಿಟ್ಟುಕೊಂಡರೆ ವಿದ್ಯಾರ್ಥಿಗಳು ಮಹತ್ಕಾರ್ಯಮಾಡಲು ಸಾಧ್ಯ

Spread the love

ಚಿಕ್ಕಮಗಳೂರು: ಜೀವನದಲ್ಲಿ ದೊಡ್ಡ ಗುರಿಯನ್ನಿಟ್ಟುಕೊಂಡರೆ ವಿದ್ಯಾರ್ಥಿಗಳು ಮಹತ್ಕಾರ್ಯಮಾಡಲು ಸಾಧ್ಯ. ಶೇ.೯೦ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರಕ್ಕೆ ಪ್ರತಿವರ್ಷ ಮಹಾಸಭಾದಿಂದ ೧ಕೋಟಿ ರೂ.ನೀಡಲಾಗುತ್ತಿದೆ ಎಂದು ಅರಣ್ಯ ಸಚಿವ ಹಾಗೂ ಅಖಿಲ ಭಾರತ ವೀರಶೈಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನಕಾರ್ಯದರ್ಶಿ ಈಶ್ವರಖಂಡ್ರೆ ಹೇಳಿದರು.

ಕೆಂಪನಹಳ್ಳಿಯ ಗಾಯತ್ರಿಕಲ್ಯಾಣ ಮಂಟಪದಲ್ಲಿ ಅಖಿಲ ಭಾರತವೀರಶೈವ ಮಹಾಸಭಾ ಜಿಲ್ಲಾ ಘಟಕ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ,ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ಸಮಾಜ ನಮ್ಮದು. ಒಗ್ಗೂಡಿ ಐಕ್ಯತೆ ಸಾಧಿಸಬೇಕಿದೆ. ಸಂಘಟನೆತಯೊಂದಿಗೆ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನಮಾಡಬೇಕಿದೆ ಎಂದರು.

ದೇಶ ಮತ್ತು ನಾಡಿನ ಅಭಿವೃದ್ಧಿ, ಮನುಕುಲದ ಉದ್ಧಾರಕ್ಕೆ ಮಠಗಳು ಶ್ರಮಿಸುತ್ತಿವೆ.ವೀರಶೈವ ಲಿಂಗಾಯತ ಸಮಾಜಕ್ಕೆ ಸುದೀರ್ಘ ಇತಿಹಾಸವಿದೆ.ಇವುಗಳ ಪರಂಪರೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಸಮಾಜ ಎಲ್ಲವನ್ನು ಕೊಟ್ಟಿದೆ. ಸಮಾಜದ ಋಣ ತೀರಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಸತ್ಕಾರ್ಯವನ್ನು ಮೈಗೂಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಬೇಕು. ಅದರಲ್ಲೆ ಹೆಚ್ಚಿನ ಪರಿಶ್ರಮ ಹಾಕುವ ಮೂಲಕ ಮಹತ್ತರವಾದುದನ್ನು ಸಾಧಿಸಲು ವಿಫುಲ ಅವಕಾಶಗಳಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ರಂಭಾಪುರಿ ಪೀಠದ ಜಗದ್ಗುರು ಶ್ರೀವೀರಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗಸ್ವಾಮೀಜಿ, ಶಂಕರದೇವರಮಠದ ಶ್ರೀ ಚಂದ್ರಶೇಖರಸ್ವಾಮೀಜಿ, ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿಸ್ವಾಮೀಜಿ, ಕಡೂರು ಯಳನಾಡು ಮಠದ ಶ್ರೀಜ್ಞಾನಪ್ರಭುಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರಸ್ವಾಮೀಜಿ, ಬೀರೂರು ಬಾಳೆಹೊನ್ನೂರು ಶಾಖಾಮಠದ ಶ್ರೀ ರುದ್ರಮುನಿಸ್ವಾಮೀಜಿ, ಬೇರುಗಂಡಿಮಠದ ಶ್ರೀ ರೇಣುಕಮಹಂತ ಸ್ವಾಮೀಜಿ, ಬಸವತತ್ವಪೀಠದ ಶ್ರೀಬಸವ ಮುರುಸಿದ್ದಸ್ವಾಮೀಜಿ ಇದ್ದರು.

ಅಧ್ಯಕ್ಷತೆಯನ್ನು ಅಖಿಲಭಾರತ ವೀರಶೈವಮಹಾಸಭಾದ ಜಿಲ್ಲಾಘಟಕ ಅಧ್ಯಕ್ಷ ಹೆಚ್.ಎಂ.ಲೋಕೇಶ್ ಇದ್ದರು.ಮಹಿಳಾ ಘಟಕದ ಅಧ್ಯಕ್ಷ ವನಮಾಲಾ ಮೃತ್ಯುಂಜಯ ಸೇರಿದಂತೆ ತಾಲೂಕು ಅಧ್ಯಕ್ಷರು ಸಮಾಜ ಮುಖಂಡರು ಇದ್ದರು. ಶಾಸಕ ಹೆಚ್.ಡಿ.ತಮ್ಮಯ್ಯ ಅವರನ್ನು ಮಹಾಸಭಾವತಿಯಿಂದ ಸನ್ಮಾನಿಸಲಾಯಿತು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Pratibhapuraskar and felicitation ceremony for MLAs

Facebook
X
WhatsApp
Telegram
Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

[t4b-ticker]
Exit mobile version