ಚಿಕ್ಕಮಗಳೂರು: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಶೇ.೫೦ ಕ್ಕೆ ನಿಗದಿಪಡಿಸಬೇಕು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಒತ್ತಾಯಿಸಿ ದರು.
ನಗರದ ರಾಮನಹಳ್ಳಿಯಲ್ಲಿ ಬುಧವಾರ ಗೌರಿ ಸೇವಾ ಟ್ರಸ್ಟನ್ನು ಉದ್ಘಾಟಿಸಿ ಟ್ರಸ್ಟ್ ನಿಂದ ನೀಡಲಾದ ಪಠ್ಯ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತ ನಾಡಿದರು.
ಮಹಿಳಾ ಮೀಸಲಾತಿಯನ್ನು ಹೆಚ್ಚಿಸಲು ಈ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಂದಾಗಿದ್ದರು. ಆ ವೇಳೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು ಹಾಗಾಗೀ ಅದು ನೆನೆಗುದಿಗೆ ಬಿದ್ದಿತ್ತು ಎಂದರು
ಇತ್ತೀಚೆಗೆ ಮಹಿಳಾ ಮೀಸಲಾತಿಯನ್ನು ಶೇ.೩೩ ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿದೆ ಎಂದ ಅವರು, ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿರುವುದರಿಂದ ಅದನ್ನು ಶೇ.೫೦ ಕ್ಕೆ ನಿಗದಿಪಡಿಸಬೇಕು ಎಂದು ಸಲಹೆ ಮಾಡಿದರು.
ಮಹಿಳಾ ಮೀಸಲಾತಿಯನ್ನು ಶೇ.೫೦ಕ್ಕೆ ನಿಗದಿಪಡಿಸುವಂತೆ ಮಹಿಳೆಯರೂ ಹೋ ರಾಟ ನಡೆಸಬೇಕು ಎಂದರು.
ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಅವಕಾಶ ಮತ್ತು ಸವಲತ್ತು ಗಳನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗ ಬೇಕು ಎಂದು ಕಿವಿಮಾತು ಹೇಳಿದರು.
ಗಿರಿ ಗಂಗೋತ್ರಿ ಶಾಲೆಯ ಮುಖ್ಯ ಶಿಕ್ಷಕ ಎಲ್.ಜಿ.ಪರಮೇಶ್ವರಪ್ಪ ಮಾತನಾಡಿ, ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ಗಿರಿ ಗಂಗೋತ್ರಿ ಶಾಲೆ ದುಸ್ತಿತಿ ಯಲ್ಲಿದ್ದು ಅದಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ನೂತನ ಕಟ್ಟಡ ವನ್ನು ನಿರ್ಮಿಸಬೇಕು ಎಂದು ವೇದಿಕೆಯಲ್ಲಿದ್ದ ನಗರಸಭಾ ಸದಸ್ಯರಿಗೆ ಮನವಿ ಮಾಡಿದರು.
ಗಿರಿ ಗಂಗೋತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಗೌರಿ ಸೇವಾ ಟ್ರಸ್ಟ್ ವತಿಯಿಂದ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯ ರಿಗೆ ಪ್ರಮಾಣ ಪತ್ರ ನೀಡಲಾಯಿತು.
ನಗರಸಭಾ ಸದಸ್ಯ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಮಹಮ್ಮದೀಯ ಅಂಜು ಮನ್ ಕಮಿಟಿ ಅಧ್ಯಕ್ಷ ಸೈಯದ್ ಗೌಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮುಳ್ಳಯ್ಯ, ಪ್ರದೀಪ್, ಗೌರಿಟ್ರಸ್ಟಿನ ಮುಖ್ಯಸ್ಥರಾದ ರವಿಕುಮಾರ್, ಲತಾ ರವಿಕುಮಾರ್, ಸೌಜನ್ಯ ಉಪಸ್ಥಿತರಿದ್ದರು.
Distribution of textbooks to students