ಚಿಕ್ಕಮಗಳೂರು: ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಕೋಟೆ ಆನಂದ್ ಅವರಿಗೆ ನೀಡುವಂತೆ ಬುಧವಾರ ಕೋಟೆ ಬಡಾವಣೆಯ ಗ್ರಾಮಸ್ಥರು ಶಾಸಕರ ಕಛೇರಿಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ರವರಿಗೆ ಮನವಿ ಮಾಡಿದರು.
ಮನವಿ ನೀಡಿ ಮಾತನಾಡಿದ ಕೋಟೆ ಬಡಾವಣೆಯ ಹಿರಿಯ ನಾಗರೀಕರಾದ ಕೋಟೆ ಈಶಣ್ಣ ಮನವಿ ನೀಡಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಕೋಟೆ ಕರಿಯಣ್ಣ ರವರ ಮಗ, ಕೋಟೆ ಆನಂದ್ ರವರು ಅವರ ತಂದೆಯ ಕಾಲದಿಂದಲು ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು, ವಿವಿಧ ಹುದ್ದೆಗಳನ್ನು ಅಲಂಕರಿಸಿ, ಎಲ್ಲಾ ನಾಯಕರ ವಿಶ್ವಾಸ ಪಡೆದಿದ್ದಾರೆ ಎಂದರು.
ಈಗ ೨೦೨೩ ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಸಿಡಿಎ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತ ಹಾಕಿಸುವ ಮೂಲಕ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಹಿಂದುಳಿದ ವರ್ಗದವರು ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ ಎಂದರು.
ಮಹರ್ಷಿ ವಾಲ್ಮಿಕಿ ಸಂಘದ ಅಧ್ಯಕ್ಷರಾದ ಕೋಟೆ ಜಗಧೀಶ್ ಮಾತನಾಡಿ ಕೋಟೆ ಆನಂದ್ ರವರಿಗೆ ಸಿಡಿಎ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮುಂದಿನ ಚುನಾವಣೆಗಳು ಹಾಗೂ ಪಕ್ಷ ಸಮುದಾಯದ ಹಿತದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೋಟೆ ಬಡಾವಣೆಯ ಶ್ರೀನಿವಾಸ್ ದೇವಾಂಗ, ಪ್ರಕಾಶ್ ರೈ, ಸಿ.ಸಿ.ಮಧು, ಗೋಪಾಲ್, ಈಶ್ವರ್, ಸೀತಾರಾಮ್, ಲಕ್ಷ್ಮಣ್ ನಾಯಕ್, ಗೋಪಾಲ್ ರಾಜ್ ಅರಸ್, ಕೋಟೆ ಮೋಹನ್, ರವಿಕುಮಾರ್, ಕೋಟೆ ಮಹೇಶ, ಎ.ಎಸ್.ಮಂಜೇಗೌಡ, ಮತ್ತಿತರರು ಉಪಸ್ಥಿತರಿದ್ದರು.
Kote villagers request that Kote Anand should be given the post of CDA president