ಚಿಕ್ಕಮಗಳೂರು: ಬಸವಣ್ಣ ನವರ ಪೂಜೆಗೆ ಪತ್ರೆ, ಹೂ ತರುವ ಕಾಯಕವನ್ನು ಶರಣ ಮಾದಯ್ಯನವರು ಮಾಡುತ್ತಿದ್ದರು, ಕಾಯಕವೇ ಕೈಲಾಸವೆಂಬಂತೆ ಮಾದಯ್ಯ ಮಾದಿಗರ ಹರಳಯ್ಯ, ಒಕ್ಕಲಿಗರ ಮುದ್ದಣ್ಣ, ಅಂಬಿಗರ ಚೌಡಯ್ಯ, ಇವರೆಲ್ಲ ಅನುಭವ ಮಂಟಪದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಬಣ್ಣಿಸಿದರು.
ಅವರು ಇಂದು ಕುವೆಂಪು ಕಲಾ ಮಂದಿರದಲ್ಲಿ ರಾಜ್ಯ ಹೂವಾಡಿಗರ ಮಹಾಸಭಾ ಹಾಗೂ ಜಿಲ್ಲಾ ಹೂವಾಡಿಗ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಗುರು ಬಸವಾದಿ ಶರಣ ಹೂವಾಡಿಗ ಮಾದಯ್ಯ ನವರ ೬ನೇ ವರ್ಷದ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
೧೨ನೇ ಬಸವಾದಿ ಶಿವ ಶರಣರಲ್ಲಿ ಒಬ್ಬರಾಗಿದ್ದ ಹೂಗಾರ ಮಾದಯ್ಯ ನವರು ಬಸವಕಲ್ಯಾಣದಲ್ಲಿ, ಸಾಮಾಜಿಕ ಹರಿಕಾರರು, ಶೋಷಿತ ವರ್ಗದವರ ಸಮಾನತೆಗಾಗಿ ಹೋರಾಟ ಮಾಡಿದ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಇವರ ಸಾಲಿನಲ್ಲಿ ಹೂಗಾರ ಮಾದಯ್ಯನವರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಭಾರತ ದೇಶ ವೈವಿಧ್ಯತೆ ಹೊಂದಿರುವ ಸಾಂಸ್ಕೃತಿಕವಾಗಿದ್ದು, ವಿವಿಧ ಸಮಾಜಗಳನ್ನು ಹೊಂದಿದ್ದು, ೧೨ನೇ ಶತಮಾನದ ಅನುಭವ ಮಂಟಪದ ಒಬ್ಬ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ, ಎಂದು ತಿಳಿಸಿದರು.
ಹೂಗಾರ, ಹೂವಾಡಿಗ ಸಮಾಜ ಇಂದು ಹತ್ತಾರು ಒಳ ಪಂಗಡಗಳನ್ನು ಹೊಂದಿದೆ, ಮಾದಯ್ಯನಂತಹ ಈ ಮಹಾನ್ ಪುರುಷರು, ಒಂದು ಸಮಾಜಕ್ಕೆ ಸೀಮಿತರಾದವರಲ್ಲ, ಇವರೆಲ್ಲರು ಒಂದು ಧರ್ಮಕ್ಕೆ ಸೇರಿದವರಲ್ಲ, ಸಮಾಜದ ಶೋಷಿತ ವರ್ಗದ ಸಮಾನತೆಗಾಗಿ ಧ್ವನಿ ಎತ್ತಿ ಹೋರಾಟ ಮಾಡಿದ ಫಲವಾಗಿ, ಇಂದು ಸಹ ಅವರ ಹೆಸರು ಶಾಶ್ವತವಾಗಿ ಉಳಿದಿದೆ ಎಂದರು.
ಹೂಗಾರ, ಹೂವಾಡಿಗರ ಉಪ ಪಂಗಡಗಳು ಒಟ್ಟಾಗಿ ಸೇರಿ ಮಾದಯ್ಯ ಜಯಂತಿ ಮಾಡುತ್ತಿರುವುದು ಸಂತಸ ತಂದಿದೆ, ಜೊತೆಗೆ ಇದೇರೀತಿ ಸಂಘಟಿತರಾಗಿ ಹೋರಾಟ ಮಾಡಿದಾಗ ಸಮಾಜದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬಂದರೆ, ಸಮಾಜದ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಪ್ರತಿಯೋಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕರೆ ನೀಡಿದರು.
ಯಾವುದೇ ಪೂಜೆ ಮಾಡುವಾಗಲು ಹೂವಿನ ಅವಶ್ಯಕತೆ ಇರುತ್ತದೆ, ಸುಂದರವಾಗಿ ಹೂ ಕಟ್ಟಿ ದೇವರಿಗೆ ಅರ್ಪಿಸುವ ನಿಮ್ಮ ಕಾಯಕ ತುಂಬಾ ಅರ್ಥಪೂರ್ಣ ಆಗುವುದರ ಜೊತೆಗೆ, ಆ ಹೂ ಜನ್ಮ ಸಾರ್ಥವಾಯುತು ಎಂದು ಹೇಳುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನದಿಸಿನ್ನೂರ ಶರಣ ಹೂಗಾರ ಮಾದಯ್ಯ ನವರ ಮಹಾ ಶಕ್ತಿ ಪೀಠದ ಪರಮಪೂಜ್ಯ ಶ್ರೀ ಗುರು ರಾಜೇಂದ್ರ ಶಿವ ಯೋಗಿಗಳು ಮಾತನಾಡಿ ಹೂವಾಡಿಗರ ಸಮಾಜಕ್ಕೆ ಇದುವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿಲ್ಲ, ಆದ್ದರಿಂದ ಸಮಾಜದ ಅಭಿವೃದ್ಧಿಗಾಗಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ನೀಡಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿದರು.
ಹೂವಾಡಿಗರ ಸಮಾಜದ ಬಂಧುಗಳಿಗೆ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಮೀಸಲಿಟ್ಟು, ಹೂವಿನ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ ಅವರು ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದಲೇ ಹೂಗಾರ, ಮಾದಯ್ಯನ ಜಯಂತಿ ಆಚರಿಸುವಂತೆ ಆದೇಶಿಸಬೇಕೆಂದು ಆಗ್ರಯಿಸಿದರು.
ಪ್ರಾಸ್ತಾವಿಕವಾಗಿ ನಿವೃತ್ತ ಶಿಕ್ಷಕ ಶೇಕರಪ್ಪ ಮಾತನಾಡಿ ಹೂವಾಡಿಗರ ಸಂಘದ ಉಪಾಧ್ಯಕ್ಷ ಶಂಬುಲಿಂಗಪ್ಪ ಸ್ವಾಗತಿಸಿದರು, ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ರಘು ವಹಿಸಿದ್ದರು, ಜಿಲ್ಲಾಧ್ಯಕ್ಷ ಆನಂದ್, ಮಾಜಿ ಜಿ.ಪಂ ಅಧ್ಯಕ್ಷ ಎ.ಎನ್.ಮಹೇಶ್, ಬಸವರಾಜ್ ಹೂಗಾರ್, ಅಶೋಕ್ ರಾಜಣ್ಣ, ಕಲ್ಮುರಡಪ್ಪ, ರವಿಕುಮಾರ್, ಗೌರೀಶ್, ಚಂದ್ರಪ್ಪ, ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು.
Shri Guru Basavadi Sharan Huwadiga Madaiya Jayanti