ಚಿಕ್ಕಮಗಳೂರು: ಜಾಗರ ಹೋಬಳಿ ಕಸಾಪ, ಗಾಳಿಗುಡ್ಡೆ ಗ್ರಾಮಸ್ಥರು, ಕೆಳಚಂದ್ರ ಗ್ರೂಫ್ ಹಾಗೂ ಪುನೀತ್ ಗೆಳೆಯರ ಬಳಗದ ವತಿಯಿಂದ ತಾಲ್ಲೂಕಿನ ಗಾಳಿಗುಡ್ಡೆ ಗ್ರಾಮದಲ್ಲಿ ನಟ ಪುನೀತ್ಕುಮಾರ್ ಸ್ಮರಣಾರ್ಥ ಪುತ್ಥಳಿ ಪ್ರತಿಷ್ಟಾಪನೆ ಕಾರ್ಯವು ಅ.೧೯ ರಂದು ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ ಎಂದು ಕಸಾಪ ಹೋಬಳಿ ಘಟಕದ ಗೌರವಾಧ್ಯಕ್ಷ ಕಳವಾಸೆ ರವಿ ಹೇಳಿದ್ದಾರೆ.
ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಹಲವು ವರ್ಷಗಳ ಹಿಂದೆ ಗ್ರಾಮ ದಲ್ಲಿ ಕನ್ನಡದ ಧ್ವಂಜಕಟ್ಟೆ ಹಾಗೂ ನಟ ಪುನೀತ್ರಾಜ್ಕುಮಾರ್ ಅವರ ಪುತ್ಥಳಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಅದಾದ ಬಳಿಕ ಕೊರೋನಾ ಹಾಗೂ ಅಕಾಲಿಕವಾಗಿ ಮೃತರಾದ ಪುನೀತ್ ನೋವಿನಿಂದ ಪುತ್ಥಳಿ ನಿರ್ಮಾಣ ತಡವಾಗಿದೆ ಎಂದಿದ್ದಾರೆ.
ಇದೀಗ ಗಾಳಿಗುಡ್ಡೆ ಗ್ರಾಮದಲ್ಲಿ ಅ.೧೯ ರಂದು ಪುತ್ಥಳಿ ಪ್ರತಿಷ್ಟಾಪನೆ ಕಾರ್ಯಕ್ಕೆ ಕೈಹಾಕಿದ್ದು ಕೆಳಚಂದ್ರ ಗ್ರೂಪ್ ೪ ಲಕ್ಷ ದೇಣಿಗೆ ಹಾಗೂ ಧ್ವಂಜಸ್ಥಂಬ ಸೇರಿದಂತೆ ಒಟ್ಟು ೮ ಲಕ್ಷ ರೂ. ವ್ಯಯಿಸಿದ್ದು ಮುಂದಿನ ನವೆಂಬರ್ ತಿಂಗಳ ಅಂತಿಮದೊಳಗೆ ಪುತ್ಥಳಿ ಅನಾವರಣಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಅನಾವರಣಗೊಳ್ಳುತ್ತಿರುವ ನಾಲ್ಕು ಅಡಿ ಎತ್ತರದ ಪುನೀತ್ರಾಜ್ ಕುಮಾರ್ ಪುತ್ಥಳಿಕೆ ಕಾರ್ಯಕ್ರಮಕ್ಕೆ ಸಚಿವ ಕೆ.ಜೆ.ಜಾರ್ಜ್, ಶಾಸಕ ಹೆಚ್.ಡಿ.ತಮ್ಮಯ್ಯ, ಮಾಜಿ ಸಚಿವ ಸಿ.ಟಿ.ರವಿ, ಜಿಲ್ಲಾ ಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಸಿನಿಮಾ ನಟರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಹೋಬಳಿ ಘಟಕದ ಕಸಾಪ ವತಿಯಿಂದ ಹಲವಾರು ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮ ವನ್ನು ಆಯೋಜಿಸಿ ಸಾಮಾಜಿಕ ಚಟುವಟಿಕೆಗಳನ್ನು ರೂಪಿಸಿಕೊಂಡು ಬಂದಿದೆ. ಜೊತೆಗೆ ಅನಾವರಣ ದಿನದಂದು ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದಿದ್ದಾರೆ.
Actor Puneethrajkumar Putthali installation on 19th