ಚಿಕ್ಕಮಗಳೂರು ; ಮನುಷ್ಯನು ಪರೋಪಕಾರ, ತ್ಯಾಗ, ಸೇವಾ ಗುಣಗಳನ್ನು ಹೊಂದಿದ್ದು ಸಮಾಜಕ್ಕೆ ಆದರ್ಶವಾಗಿ ಬದುಕುವುದ ಜೊತೆಗೆ ಇತರರಿಗೆ ಮಾರ್ಗದರ್ಶಕರಾಗಿರಬೇಕೆಂದು ಅಮೃತ್ ನೋನಿ ಸಂಸ್ಥೆಯ ಮ್ಯಾನೇಜಿಂಗ್ ಡೈರಕ್ಟರ್ ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಭಾನುವಾರ ಬಸವನಹಳ್ಳಿಯ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ನಿವೃತ್ತ ನೌಕರರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಪ್ರ ನೌಕರರ ಸಂಘದವರು ನಮ್ಮ ಭಾಷೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವುದರ ಜೊತೆಗೆ ಸಮಾಜಕ್ಕೆ ಆದರ್ಶ ಪ್ರಾಯವಾಗಿ ಬದುಕುತ್ತದ್ದೇವೆ ಎಂದರು.
ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಹಿಂದಿನ ಕಾಲದಲ್ಲಿ ಸೇವಾ ಮನೋಭಾವನೆಯಿಂದ ಮಾಡಿ ಗೌರವ ಬರುವಂತೆ ನೆಡೆದುಕೊಳ್ಳುತ್ತಿದ್ದರು ಆದರೆ ಇಂದು ವ್ಯಾಪಾರಿಕರಣ ಆಗುತ್ತಿರುವುದು ವಿಷಾದನೀಯ ಸಂಗತಿ, ಆದುನಿಕ ಶಿಕ್ಷಣ ಹಲವು ಅವಕಾಶಗಳನ್ನು ಒದಗಿಸಿ ಕೊಡುತ್ತದೆ, ಉನ್ನತ ವ್ಯಾಸಂಗ ಮಾಡಿದ ನಾವುಗಳು ನಮ್ಮ ದೇಶದಲ್ಲಿಯೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ನಮ್ಮ ದೇಶ ಜಗತ್ತಿಗೆ ಭಿನ್ನ ಯೋಜನೆ ರೂಪಿಸಿ ಜಗತ್ತು ನಮ್ಮಕಡೆ ನೊಡುವ ರೀತಿ ಮಾಡುವಂತಹ ಶಕ್ತಿ ಸಾಮರ್ಥ್ಯ ಭಾರತಕ್ಕೆ ಇದೆ, ವಿಪ್ರ ನೌಕರರು ನಮ್ಮ ಸಂಸ್ಕೃತಿಯನ್ನು ಮತ್ತಷ್ಟು ಗೌರವದಿಂದ ಕಾಣುವಂತೆ ನೋಡಿಕೊಳ್ಳಬೇಕು ಎಂದರು.
ಸಾಹಿತಿ ಬೆಳವಾಡಿ ಮಂಜುನಾಥ್ ಮಾತನಾಡಿ ಸಮಾಜ ಬಾಂಧವರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ವಿಪ್ರ ನೌಕರರ ಸಂಘದ ಅಧ್ಯಕ್ಷ ಎಂ.ಸಿ.ಪ್ರಕಾಶ್ ಮಾತನಾಡಿ ಸಂಘದ ಸಂಘಟನೆಗೆ ಎಲ್ಲರ ಸಲಹೆ ಸಹಕಾರ ಅಗತ್ಯ ಪ್ರತಿವರ್ಷ ನಮ್ಮ ಸಮಾಜದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ
ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.
ಮಕ್ಕಳಿಗೆ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿಕೊಡಬೇಕು, ಪ್ರತಿಯೊಬ್ಬರು ಪ್ರತಿದಿನ ಸಂದ್ಯಾ ವಂದನೆ ಜೊತೆ ಗಾಯಿತ್ರಿ ಮಂತ್ರ ಪಟಿಸಿದಾಗ ನಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರುಗಳಾದ ಅನಂತರಾಮಯ್ಯ, ಚಂದ್ರಮೌಳಿ, ಉಪಾಧ್ಯಕ್ಷರಾದ ಕೆ.ಯು.ವಿನುತ್ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಪಿ.ಕಿರಣ್, ನಿರ್ದೇಶಕರುಗಳಾದ ಗೋಪಾಲಕೃಷ್ಣ, ಬದ್ರಿನಾರಾಯಣ್, ಸುನೀಲ್ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಸ್ವಾಗತಿಸಿ, ಗರೀಶ್ ನಿರೂಪಿಸಿ, ಸುನೀಲ್ ವಂದಿಸಿದರು. ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
District Vipra Employees Welfare Association