ಚಿಕ್ಕಮಗಳೂರು: ವ್ಯಸನ ಮುಕ್ತ ದೇಶವನ್ನಾಗಿಸಲು ಯುವಜನತೆ ಕೈಜೋಡಿಸಬೇಕೆಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪೋಲಿಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಿಂದ ಆರಂಭಗೊಂಡ ಮಾದಕ ವಸ್ತುಗಳ ವಿರೋಧಿ ಅಭಿಯಾನದ ವಾಕ್ ತಾನ್ ಗೆ ಚಾಲನೆ ನೀಡಿ ಮಾತನಾಡಿದರು.
ವಿಧ್ಯಾರ್ಥಿ ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪೋಷಕರೂ ಸಹ ಎಚ್ಚರವಹಿಸಬೇಕೆಂದ ಅವರು ಹದಿಹರೆಯದ ಮಕ್ಕಳು ಮಾದಕ ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತರಾಗಿ ಬದುಕಬೇಕೆಂದರು. ಜಿಲ್ಲಾಧಿಕಾರಿ ಮೀನಾನಾಗರಾಜ್ ಮಾತನಾಡಿ ಮಾದಕ ಪದಾರ್ಥಗಳು ಜಿಲ್ಲೆಯನ್ನು ಪ್ರವೇಶಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದರೂ ಮಾದಕ ಪದಾರ್ಥಗಳು ಜಿಲ್ಲೆಯನ್ನು ಪ್ರವೇಶಿಸುತ್ತಿರುವುದು ದುರ್ದೈವದ ಸಂಗತಿ ಎಂದರು.
ಪೋಲಿಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ ಮಾತನಾಡಿ ವ್ಯಸಮ ಮುಕ್ತ ಸಮಾಜ ನಿರ್ಮಾಣಕ್ಕೆ ಬರೀ ಸರ್ಕಾರ, ಪೋಲಿಸ್ ಇಲಾಖೆಯಿಂದ ಮಾತ್ರವಲ್ಲಿ ಪ್ರತಿಯೊಬ್ಬ ಪ್ರಜೆಯ ಒಳಗೊಳ್ಳುವಿಕೆಯೊಂದಿಗೆ ಆಂದೋಲನವಾಗಿ ಮಾರ್ಪಾಡಾಗಬೇಕೆಂದರು.
ಈ ಸಂದರ್ಭದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ೧) ಸಿದ್ದೇಶ ಜಿ, ಶ್ರೀ ರಾಮಕೃಷ್ಣ ಪಿಯು ಕಾಲೇಜ್, ೨) ಚನ್ನಕೇಶವ ಎಸ್ ವೈ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ೩) ಪ್ರಜ್ವಲ್ ಎ ಪಿ, ಎಲ್.ಬಿ.ಎಸ್. ಪಿಯು ಕಾಲೇಜ್ ರವರುಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ವಿಕ್ರಮ ಅಮಟೆ, ಪೊಲೀಸ್ ಅಧೀಕ್ಷಕರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವಾಕತಾನ್ನಲ್ಲಿ ವಿವಿಧ ಶಾಲಾ ಕಾಲೇಜಿನ ಸುಮಾರು ೧೫೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಡಾ. ಪವಿತ್ರಾ, ಔಷಧ ನಿಯಂತ್ರಣ ಇಲಾಖೆ, ಅIಒS, ಶ್ರೀ. ಓಂಕಾರೇಶ್ವರ, ಅಣುವೃತ್ ಸಮಿತಿ, ಬ್ರಹ್ಮಕುಮಾರಿ, ಚಿಕ್ಕಮಗಳೂರು ರೌಂಡ್ ಟೇಬಲ್ ಪದಾಧಿಕಾರಿಗಳು ಭಾಗವಹಿಸಿದ್ದರು.
ವಾಕ್ತಾನ್ ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಿಂದ ಪ್ರಾರಂಭವಾಗಿ ಐ.ಜಿ. ರಸ್ತೆ ಮೂಲಕ ಸಾಗಿ ಹನುಮಂತಪ್ಪ ಸರ್ಕಲ್ ಮುಖಾಂತರ ಎಂ.ಜಿ. ರಸ್ತೆಯಲ್ಲಿ ಹಾದು, ಆಜಾದ್ ಪಾರ್ಕ್ ಮುಖಾಂತರ ಸಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ಮುಕ್ತಾಯಗೊಂಡಿತು.
Walk Tan of Anti-Drug Campaign