ಚಿಕ್ಕಮಗಳೂರು: ಇಪಿಎಸ್-೯೫ರಲ್ಲಿ ನಿವೃತ್ತರಾಗಿರುವ ನೌಕರರಿಗೆ ಕನಿಷ್ಟ ನಿವೃತ್ತಿ ವೇತನ ವನ್ನು ಹೆಚ್ಚಳಗೊಳಿಸಬೇಕು ಎಂದು ಇಪಿಎಸ್-೯೫ ರಾಷ್ಟ್ರೀಯ ಹೋರಾಟ ಜಿಲ್ಲಾ ಸಮಿತಿ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಕ್ಷೇತ್ರಿಯ ಕಚೇರಿಯ ಜಿಲ್ಲಾ ಆಯುಕ್ತ ಅಶ್ವಿನ್ರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿ ಸಿದರು.
ಬಳಿಕ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಸೂರ್ಯನಾರಾಯಣ್ ಇಪಿಎಸ್-೯೫ ರಲ್ಲಿ ನಿವೃತ್ತಗೊಂಡ ನೌಕರರಿಗೆ ಈಗಾಗಲೇ ಒಂದು ಸಾವಿರ ನಿವೃತ್ತಿ ಭತ್ಯೆ ಪಡೆಯಲಾಗುತ್ತಿದೆ. ಇದನ್ನು ಕನಿಷ್ಟ ೭೫೦೦ ರೂ. ಗಳವರೆಗೆ ಹೆಚ್ಚಿಸಿ ಮಂಜೂರು ಮಾಡಿದರೆ ವಯೋಸಹಜ ಕಾಲದಲ್ಲಿ ವೈದ್ಯಕೀಯ ಖರ್ಚುಗಳಿಗೆ ಸಹಾಯ ಮಾಡಿದಂತಾ ಗುತ್ತದೆ ಎಂದು ತಿಳಿಸಿದರು.
ವೇತನ ಹೆಚ್ಚಳಗೊಳಿಸುವ ಸಂಬಂಧ ರಾಷ್ಟ್ರೀಯ ಹೋರಾಟ ಸಮಿತಿಯು ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿತ್ತು. ಇದನ್ನರಿತ ಕೇಂದ್ರದ ಕಾರ್ಮಿಕ ಹಾಗೂ ಎಂಪ್ಲಾಯಿಟ್ಮೆಂಟ್ ಸಚಿವ ಭೂಪೇಶ್ ಗುಪ್ತ ಯಾದವ್ ಅವರು ಭರವಸೆ ನೀಡಿದ ಬಳಿಕ ಸತ್ಯಾಗ್ರಹವನ್ನು ಕೈಬಿಟ್ಟರೂ ಇದುವರೆಗೂ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೦೦ಕ್ಕೂ ಹೆಚ್ಚು ನಿವೃತ್ತ ನೌಕರರು ವೇತನ ಹೆಚ್ಚಳಕ್ಕೆ ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿ ಸಲಾಗಿದೆ. ಹೀಗಾಗಿ ಕೇಂದ್ರ ಸಚಿವರ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಇಪಿಎಫ್ಓ ಮುಖಾಂತರ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದು ಜನವರಿ ೨೬ ರೊಳಗೆ ಕನಿಷ್ಟ ನಿವೃತ್ತಿ ವೇತನವನ್ನು ಹೆಚ್ಚುವರಿಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದರು.
ಆ ನಿಟ್ಟಿನಲ್ಲಿ ನೌಕರರಿಗೆ ವೇತನ ಹೆಚ್ಚಳಗೊಳಿಸುವ ಸಂಬಂಧ ವಿಳಂಭ ಧೋರಣೆ ಅನುಸರಿಸಿದರೆ ರಾಷ್ಟ್ರೀ ಯ ಹೋರಾಟ ಸಮಿತಿ ಮತ್ತೊಮ್ಮೆ ದೆಹಲಿಯಲ್ಲಿ ಜ.೩೦ ರಂದು ಪ್ರತಿಭಟನೆಗೆ ಮುಂದಾಗುತ್ತಿದ್ದು ಜಿಲ್ಲೆಯಿಂದಲೂ ನಿವೃತ್ತ ನೌಕರರು ಭಾಗವಹಿಸಿ ಹಕ್ಕುಗಳಿಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಉಪಾದ್ಯಕ್ಷ ಲಕ್ಷ್ಮಣ್ನಾಯಕ್, ಸದಸ್ಯರುಗಳಾದ ರತ್ನಾಕರ್, ಮಂಜು ನಾಥ್, ಮಾಧವರಾವ್, ವೆಂಕಟಸುಬ್ಬಯ್ಯ, ತುಕರಾಮ್, ಮನೋಹರ್ ಮತ್ತಿತರರು ಹಾಜರಿದ್ದರು
Urge EPFO to raise minimum retirement pay for employees