ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬೈರಿಗದ್ದೆ ಸಾರಗೋಡು ನಿರಾಶ್ರಿತರು ಭೂಮಿ ಮತ್ತು ಹಕ್ಕುಪತ್ರ ಬದಲಿ ಭೂಮಿ ನೀಡುವಂತೆ ಒತ್ತಾಯಿಸಿ ಇಂದು ನಗರದ ಅಜಾದ್ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿದರು
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ನೇತೃತ್ವದಲ್ಲಿ ಸಾರಗೋಡು ಹದಿನಾರು ಕುಟುಂಬಗಳ ನಿರಾಶ್ರಿತರು ಕುಂದೂರು ಪಂಚಾಯಿತಿ ವ್ಯಾಪ್ತಿಯ ಬೈರಿಗದ್ದೆಯಲ್ಲಿ ಕಳೆದ ೭೫ ವ?ಗಳಿಂದ ವಾಸವಾಗಿದ್ದು ಇದುವರೆಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು
ಈ ಹಿಂದೆ ೨೦೦೭ರಲ್ಲಿ ಸುಮಾರು ೬೦ ಕುಟುಂಬಗಳನ್ನು ಜಿ ಅಗ್ರಹಾರ ಅಲ್ಲಿ ಭೂಮಿಯನ್ನು ಕೊಟ್ಟಿದ್ದು ಇದರಲ್ಲಿ ೧೮ ಕುಟುಂಬಗಳನ್ನು ೧೯೭೮ರ ಹಿಂದಿನ ಕುಟುಂಬಗಳೆಂದು ಗುರುತಿಸಿ ಪರಹಾರ ಕೊಡುವುದಾಗಿ ಹೇಳಿದ್ದರು ಆದರೆ ನೀವು ಈ ಹಿಂದೆ ನಿರಾಶ್ರಿತರಿಗೆ ಕೊಟ್ಟ ಪರಿಹಾರವನ್ನು ನಮಗೂ ಕೊಡಿ ಎಂದು ಬಾಂಡ್ ಪೇಪರ್‌ನಲ್ಲಿ ಬರೆಸಿ ಕೊಟ್ಟಿದ್ದೇವೆ ಆದರೆ ಈಗ ೧೭ ವ?ದಿಂದ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
೧೬ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಇಲ್ಲವಾದರೆ ನಮ್ಮಗಳಿಗೆ ಸರಕಾರದ ವತಿಯಿಂದ ಸಾಮೂಹಿಕ ದಯಾ ಮರಣ ಕೊಡಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ವಿನಂತಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಡಾ. ಶಿವಪ್ರಸಾದ್ ಸುಪ್ರೀತ್ ಸೇರಿದಂತೆ ೧೬ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು.
Saragoda refugees stage a sit-in to demand replacement land