ಚಿಕ್ಕಮಗಳೂರು: ಯಾವುದೇ ಸರಕುಗಳ ಮಾರಾಟದಲ್ಲಿ ಹೆಚ್.ಎಸ್.ಎನ್ ಸಂಖ್ಯೆಯು ಕಡ್ಡಾಯವಾಗಿರಬೇಕು ಎಂದು ಚಾರ್ಟೆಡ್ ಅಕೌಂಟೆಂಟ್ ಸಂಸ್ಥಾಪಕ ಜಿ.ವೇಣುಗೋಪಾಲ್ ತಿಳಿಸಿದರು
ನಗರದ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸರಕು ಸೇವೆ ತೆರಿಗೆ ಮತ್ತು ಆದಾಯ ತೆರಿಗೆ ಹಾಗೂ ಬ್ರಾಹ್ಮಣ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ತೆರಿಗೆಯ ದರವು ಪ್ರತಿ ಗಂಟೆಗೂ ಬದಲಾಗುತ್ತದೆ, ಯಾವುದೇ ಸರಕುಗಳನ್ನು ಮಾರಾಟ ಮಾಡುತ್ತಿದ್ದರೆ ಸರಕು ಪಟ್ಟಿಯಲ್ಲಿ ನಾಲ್ಕು ಅಂಕಿಯ ಎಚ್.ಎಸ್.ಎನ್ ಸಂಖ್ಯೆಯು ಕಡ್ಡಾಯವಾಗಿ ನಮೂದಿಸಿರಬೇಕು ತಮ್ಮ ವಹಿವಾಟು ೫ ಕೋಟಿಗಿಂತ ಹೆಚ್ಚಿದ್ದರೆ ೬ ಅಂಕಿಯ ಎಚ್.ಎಸ್.ಎನ್. ಸಂಖ್ಯೆಯನ್ನು ನಮೂದಿಸಬೇಕು ಎಂದರು.
ಸರಕು ಪಟ್ಟಿಯಲ್ಲಿ ಯಾವುದೇ ರೀತಿಯ ಗೊಂದಲಗಳು ಮತ್ತು ತಪ್ಪುಗಳನ್ನು ಮಾಡಿದ್ದಲ್ಲಿ ಕನಿ? ರೂ ೨೫,೦೦೦ ದಂಡ ತೆರಬೇಕಾಗುತ್ತದೆ. ಕೆಲ ಸರಕು ಪಟ್ಟಿಯಲ್ಲಿ ಮಾಹಿತಿ ಕಾರಣದಿಂದ ತಪ್ಪುಗಳನ್ನು ನಡೆದರೆ ಪುನಃ ತಪ್ಪುಗಳು ಮುಂದುವರೆಸುವುದಿಲ್ಲ ಎಂದು ಮನವಿ ಸಲ್ಲಿಸಿ ವಿನಾಯಿತಿ ಪಡೆದುಕೊಳ್ಳಬಹುದು, ಆದರೆ ಆ ತಪ್ಪು ಗಳಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ನ?ವಾಗಬಾರದು ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ವಸ್ತು ಮಾರಾಟ ಮಾಡಿದರೆ ಅವುಗಳಿಗೆ ಕಡ್ಡಾಯವಾಗಿ ಜಿಎಸ್ಟಿ ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ ಎಂದರು.
ಚಾರ್ಟೆಡ್ ಅಕೌಂಟೆಂಟ್ ಶ್ರೇಯಸ್ ಮಾತನಾಡಿ ತಾವು ಕಟ್ಟುವ ಆಮದು ತೆರಿಗೆಯು ದೇಶದ ಮೂಲಸೌಕರ್ಯ, ಸಬ್ಸಿಡಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತದೆ. ತಮ್ಮ ಆದಾಯಕ್ಕಿಂತ ಹೆಚ್ಚು ಬಡ್ಡಿ ಪಾವತಿ ಬಾರದಂತೆ ನೋಡಿಕೊಳ್ಳಲು ತಾವುಗಳು ತೆರಿಗೆಯನ್ನು ಸರಿಯಾದ ರೀತಿಯಲ್ಲಿ ಪಾವತಿಸಬೇಕು ಎಂದರು.
ವ?ದ ಆದಾಯ ೨.೫೦ ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ಚಾಲ್ತಿ ಖಾತೆಯಲ್ಲಿ ಒಂದು ಕೋಟಿಗಿಂತ ಹೆಚ್ಚು ಹಣ ಠೇವಣಿಯಾದರೆ, ವಿದೇಶಿ ಪ್ರಯಾಣದಲ್ಲಿ ಅಥವಾ ವಿದೇಶಿ ಸಂಬಂಧಿಸಿದ ಯಾವುದೇ ೨ ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಹಾಗೂ ವಿದ್ಯುತ್ ಬಿಲ್ ನಲ್ಲಿ ೧ ಲಕ್ಷಕ್ಕಿಂತ ಹೆಚ್ಚು ಪಾವತಿಸುತ್ತಿದ್ದರೆ ಆದಾಯ ತೆರಿಗೆ ಕಡತವನ್ನು ತೆರೆಯ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲೆಕ್ಕಿಗರ ಮತ್ತು ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಜೆ.ಮಾಗಿ ಮಿರಾಜ್ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಾವೀದ್ ಅಕ್ತರ್, ಕಾರ್ಯದರ್ಶಿ ಅಬ್ದುಲ್ ಶವೂರ್, ಸದಸ್ಯರುಗಳಾದ ಸೀಮಾ, ದೀಪ್ತಿ, ಬಾಲಾಜಿ, ಖಾದರ್ಪಾಷ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿ ದ್ದರು.
Goods Service Tax and Income Tax awareness programme