ಚಿಕ್ಕಮಗಳೂರು: ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ತ್ಯಾಗ, ಸಹನೆ ಹಾಗೂ ಸೇವಾಗುಣಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಸೇವಾ ಅವಧಿಯಲ್ಲಿ ರೋಗಿಗಳಿಗೆ ಉತ್ತಮವಾ ಗಿ ಆರೈಕೆ ಮಾಡಲು ಸಾಧ್ಯವಾಗಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು.
ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಆಶ್ರಯ ಇನ್ಸಿಟ್ಯೂಟ್ ಅಂಡ್ ಕಾಲೇಜು ಆಫ್ ನರ್ಸಿಂಗ್ ವತಿಯಿಂದ ಏರ್ಪಡಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಿಂಗ್ ವೃತ್ತಿ ಅತ್ಯಂತ ಜವಾಬ್ದಾರಿ ಹೊಂದಿದ್ದು ದೇಶದಲ್ಲಿ ತುರ್ತು ಅಥವಾ ಅಪಘಾತಗಳು ಸಂಭವಿ ಸಿದರೆ ಗಾಯಾಳುಗಳಿಗೆ ವೈದ್ಯರ ಮುಂಚೆಯೇ ಆರೈಕೆಯಲ್ಲಿ ತೊಡಗುವುದು ನರ್ಸ್ಗಳು. ಹೀಗಾಗಿ ವೃತ್ತಿಯನ್ನು ಪ್ರೀತಿಸುವ ವಿದ್ಯಾರ್ಥಿಗಳು ನರ್ಸಿಂಗ್ನಲ್ಲಿ ಸಾಧನೆಗೈದ ಪ್ಲಾರೆನ್ ನೈಟಿಂಗೇನ್, ಮದರಾ ತೆರಸಾರ ಜೀವನ ಚರಿತ್ರೆ ಯನ್ನು ಅಧ್ಯಯನ ನಡೆಸಬೇಕು ಎಂದು ಸಲಹೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆ ಅಥವಾ ಇನ್ಯಾವುದೋ ಕಾರಣಕ್ಕೂ ಪೋಷಕರನ್ನು ವೃದ್ದಾ ಶ್ರಮಕ್ಕೆ ಕಳಿಸುವ ಪ್ರವೃತ್ತಿಯಲ್ಲಿದೆ. ಅಲ್ಲಿಯು ಅನಾರೋಗ್ಯ ಸಮಸ್ಯೆ ಕಾಡುವ ಹಿನ್ನೆಲೆಯಲ್ಲಿ ನರ್ಸಿಂಗ್ ವಿದ್ಯಾಭ್ಯಾ ಸದ ಬಳಿಕ ವಿದ್ಯಾರ್ಥಿಗಳು ಆಗಾಗ ಆಶ್ರಮಕ್ಕೆ ಭೇಟಿ ನೀಡಿ ವೃದ್ದರನ್ನು ತಾಯಿ ಅಥವಾ ಮಗಳಾಗಿ ನೋಡಿಕೊ ಳ್ಳುವುದು ಓರ್ವ ನರ್ಸ್ನ ಪ್ರಮುಖ ಕೆಲಸ ಎಂದರು.
ಚಿಕ್ಕಮಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸದ ಕೊರತೆಯನ್ನು ನೀಗಿಸುವ ಸಲುವಾಗಿ ಆಶ್ರಯ ಇನ್ಸಿಟ್ಯೂಟ್ ಸಕಲ ಸೌಕರ್ಯಗಳನ್ನು ಹೊಂದಿರುವ ಕಾಲೇಜು ಸ್ಥಾಪಿಸಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲ ಕಲ್ಪಿಸಿದೆ ಎಂದ ಅವರು ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡ ಅನೇಕ ನರ್ಸಿಂಗ್ ವಿದ್ಯಾರ್ಥಿಗಳು ದೇಶ- ವಿದೇಶ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಆಶ್ರಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್ಕುಮಾರ್ ಮಾತನಾಡಿ ನರ್ಸಿಂಗ್ ವಿದ್ಯಾರ್ಥಿ ಗಳು ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ತಾಳ್ಮೆಯನ್ನು ಮೊದಲು ಅಳವಡಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಬಳಿಕ ಸೇವೆಯಲ್ಲಿ ಭಾಗಿಯಾಗುವವರು ರೋಗಿಗಳ ಆರೈಕೆ ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಬೇಕು. ಹಂತ ಹಂತವಾಗಿ ರೋಗಿಗಳಿಗೆ ಮನವರಿಕೆ ಮಾಡಿ ಕಾಯಿಲೆಯ ಗುಣಮುಖಕ್ಕೆ ಶ್ರಮಿಸಬೇಕು ಎಂದರು.
ಪ್ರಸ್ತುತ ನಗರದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸಲಾಗಿದ್ದು ಇನ್ನೂ ಕೆಲವೇ ತಿಂಗಳಲ್ಲೇ ಕಾಲೇಜನ್ನು ವಿಶಾಲ ವಾಗಿ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸವಲತ್ತು ಒದಗಿಸಲಾಗುವುದು. ಅಲ್ಲದೇ ಮುಂ ಬರುವ ದಿನಗಳಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್ಗೂ ಆರಂಬಿಸುವ ಚಿಂತನೆಯಿದೆ ಎಂದ ಅವರು ಪ್ರಸ್ತುತ ಕಾಲೇ ಜಿನ ಪ್ರಾಂಶುಪಾಲರು, ಸಿಬ್ಬಂದಿಗಳ ತಂಡ ಅತ್ಯುತ್ತಮವಾಗಿದೆ ಎಂದರು.
ಇದೇ ವೇಳೆ ಕಾಲೇಜಿನ ಪ್ರಾಂಶುಪಾಲೆ ತೇಜಸ್ವಿನಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಆಶ್ರಯ ಎಜುಕೇಷನ್ ಟ್ರಸ್ಟ್ ನಿರ್ದೇಶಕಿ ಡಾ. ಶುಭ ವಿಜಯ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ್, ಕಾಲೇಜಿನ ಉಪನ್ಯಾಸಕರಾದ ಶಿಲ್ಪಾ, ತೇಜಸ್ವಿ, ಅಕ್ಷತಾ, ಸಾಗರ್, ಲಾವಣ್ಯ, ಕ್ರಿಸ್ಟಿನಾ, ರಶ್ಮಿ ಮತ್ತಿತರರು ಹಾಜರಿದ್ದರು.
Vocational teaching program for nursing students