June 13, 2024

ಗುಡುದೂರು ಗ್ರಾಮದ ಸಹರಾಬಾಯ್ಸ್ ಕ್ರಿಕೆಟ್‌ತಂಡ ಪ್ರಥಮ ಸ್ಥಾನ

0
ಗುಡುದೂರು ಗ್ರಾಮದ ಸಹರಾಬಾಯ್ಸ್ ಕ್ರಿಕೆಟ್‌ತಂಡ ಪ್ರಥಮ ಸ್ಥಾನ

ಗುಡುದೂರು ಗ್ರಾಮದ ಸಹರಾಬಾಯ್ಸ್ ಕ್ರಿಕೆಟ್‌ತಂಡ ಪ್ರಥಮ ಸ್ಥಾನ

ಚಿಕ್ಕಮಗಳೂರು: ಕೂದುವಳ್ಳಿ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೂದುವಳ್ಳಿ ಪ್ರೀಮಿಯರ್‌ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಲ್ದೂರು ಸಮೀಪದ ಗುಡುದೂರು ಗ್ರಾಮದ ಸಹರಾಬಾಯ್ಸ್ ಕ್ರಿಕೆಟ್‌ತಂಡ ಪ್ರಥಮ ಸ್ಥಾನದೊಂದಿಗೆ ೩೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಸ್ಥಾನವನ್ನು ಕೂದುವಳ್ಳಿಯ ಅಂಬೇಡ್ಕರ್ ಕ್ರಿಕೆಟರ್‍ಸ್ ಟೀಮ್ ಕೂದುವಳ್ಳಿಯ ತಂಡ ೧೫ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಿತು. ಅಂತಿಮ ಪಂದ್ಯಾವಳಿಯಲ್ಲಿ ನಾಲ್ಕು ಓವರ್‌ಗಳಿಗೆ ಸೀಮಿತಗೊಳಿಸಲಾಯಿತು ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಗುಡುದೂರು ತಂಡ ೩೪ ರನ್‌ಗಳಿಸಿದ ಈ ಮೊತ್ತವನ್ನು ಬೆನ್ನುಹತ್ತಿದ ಕೂದುವಳ್ಳಿ ತಂಡ ೩೩ ರನ್‌ಗಳಿಸಿ ಸೋಲೊಪ್ಪಿಕೊಂಡಿತು.

ಆಲ್ದೂರು ವಗಾರ್ ರಸ್ತೆಯ ಯಕ್ಸ್‌ಲೆಂಟ್ ತಂಡ ಮೂರನೇ ಸ್ಥಾನಪಡೆಯಿತು. ೮ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರೆ, ನಾಲ್ಕನೇ ಸ್ಥಾನವನ್ನು ತುಡುಕೂರಿನ ವಿರಾಟ್ ಕ್ರಿಕೆಟರ್‍ಸ್ ೪ಸಾವಿರ ನಗದು ಮತ್ತು ಟ್ರೋಫಿ ಪಡೆಯಿತು.

ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ವಿತೇತ ತಂಡದ ಗುಡುದೂರಿನ ಕಾರ್ತಿಕ್,ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅಂಬೇಡ್ಕರ್ ಕ್ರಿಕೆಟ್ ತಂಡ ಕೂದುವಳ್ಳಿಯ ತಂಡದ ನಾಯಕ ಕೆ.ಆರ್.ರೋಹಿತ್ ಪಡೆದುಕೊಂಡರೆ, ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ವಗಾರ್ ರಸ್ತೆಯ ಯಕ್ಸ್‌ಲೆಂಟ್ ತಂಡದ ಅರುಣ್ ಪಡೆದರೆ, ಉತ್ತಮ ದಾಳಿಕಾರ ಪ್ರಶಸ್ತಿಯನ್ನು ತುಡುಕೂರಿನ ಕೌಶಿಕ್ ಪಡೆದುಕೊಂಡರೆ, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಕೂದುವಳ್ಳಿಯ ಕೆ.ಹೆಚ್.ಲೋಕೇಶ್ ತನ್ನದಾಗಿಸಿಕೊಂಡರು.

ಪ್ರಶಸ್ತಿಯನ್ನು ಕೂದುವಳ್ಳಿ ಗ್ರಾಮದ ಮುಖಂಡ ಕೆ.ಎಂ.ಮಂಜುನಾಥ, ಅಂಬೇಡ್ಕರ್ ಯುವಕಸಂಘದ ಅಧ್ಯಕ್ಷ ಕೆ.ಜಿ.ಸಂದೀಪ್, ಸವಿತಾ ಯುವತಿ ಮಂಡಳಿ ಅಧ್ಯಕ್ಷೆ ಅಭಿಲಾಶ್,ಅರವಿಂದ್, ಮದನ್, ಕೆ.ಜೆ.ಸತೀಶ್,ಕೆ.ಹೆಚ್.ಕೃಷ್ಣಪ್ರಸಾದ್, ಶೈಲಾಜಗದೀಶ್, ಕೆ.ಜೆ.ಮಂಜುನಾಥ, ಮಂಜಯ್ಯ, ಜವರಯ್ಯ ವಿತರಿಸಿದರು.

ಯುವಕಸಂಘದ ಪದಾಧಿಕಾರಿಗಳಾದ ಇಂದ್ರೇಶ್, ರಾಹುಲ್, ರೋಹಿತ್, ಪ್ರಜ್ವಲ್, ಕಿಶೋರ್, ಶಶಾಂಕ್, ಪುರುಷೋತ್ತಮ, ಪ್ರತಾಪ್, ಸಾರ್ಥಕ್, ಶಾಶ್ವತ್,ಗ್ರಾಮದ ಕೆ.ಪಿ.ಭದ್ರಯ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವರಾಜ್ ಇದ್ದರು.

Saharaboys cricket team of Gududur village won the first place

About Author

Leave a Reply

Your email address will not be published. Required fields are marked *