ಚಿಕ್ಕಮಗಳೂರು: ಇಂದಿನ ಲೋಕಸಭಾ ಚುನಾವಣೆ ಕೋಟಾ ಶ್ರೀನಿವಾಸ್ ಅಥವಾ ನರೇಂದ್ರ ಮೋದಿಯದ್ದಲ್ಲ. ದೇಶದ ಆರ್ಥಿಕ ಪ್ರಗತಿ ಹಾಗೂ ಸುರಕ್ಷಿತವಾಗಿ ಕಟ್ಟಿಗೊಳಿಸುವ ಚುನಾವಣೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತ ಅನಿಲ್ಕುಮಾರ್ ಹೇಳಿದರು.
ನಗರದ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಥಮ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಶನಿವಾರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲದ ಕಾರಣ ಕಾರ್ಯಕರ್ತರ ಮೇಲೆ ಜವಾಬ್ದಾರಿ ಹೆಚ್ಚಿದ್ದು ಕೆಲವು ವಿರೋಧ ಪಕ್ಷಗಳ ಟೀಕೆಗಳು ಬರಬಹುದು, ಆ ಬಗ್ಗೆ ಹೆಚ್ಚು ಆಲೋಚಿಸದೇ ದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿಗೆ ಮತ ಯಾಚಿಸುವ ಜೊತೆಗೆ ಕೇಂದ್ರದ ಮಹಿಳಾ ಸಬಲೀಕರಣದ ಸೌಲಭ್ಯಗಳನ್ನು ಮತದಾರರಿಗೆ ಮನವರಿಕೆ ಮಾಡ ಬೇಕು ಎಂದರು.
ಇತ್ತೀಚೆಗೆ ಕೋಟಾ ಶ್ರೀನಿವಾಸ್ ಪೂಜಾರಿ ನಾಮಪತ್ರ ಸಲ್ಲಿಸುವ ಮುನ್ನ ಆಸ್ತಿ ಘೋಷಿಸಿದ್ದಾರೆ. ಇದನ್ನು ಕೆಲವು ಕಿಡಿಕೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕಾರ್ಯ ಕರ್ತರು ಸುಳ್ಳು ಸುದ್ದಿಗಳಿಗೆ ಕಿವಿಕೊಡದೇ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ ಶ್ರೀನಿವಾಸ್ ಪೂಜಾರಿ ಪರ ಪ್ರಚಾರ ದಲ್ಲಿ ತೊಡಗಬೇಕು ಎಂದರು.
ರಾಜ್ಯಸರ್ಕಾರ ಪ್ರತಿ ಮಹಿಳೆಗೆ ಎರಡು ಸಾವಿರ ಹಣ ನೀಡುತ್ತಿದ್ದು ದಿನಬಳಕೆ ವಸ್ತುಗಳು, ಸರ್ಕಾರಿ ಅಧಿಕಾ ರಿಗಳ ತೆರಿಗೆ ಸೇರಿದಂತೆ ಇನ್ನಿತರೆ ವಹಿವಾಟಿನಲ್ಲಿ ದರ ಏರಿಸಿ ಜನತೆಗೆ ನೀಡಿದರೆ ಉಚಿತವೆಂದು ಘೋಷಣೆಯಾ ಗಲು ಸಾಧ್ಯವಿಲ್ಲ. ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಿ ಕಡಿಮೆ ಆಸುಪಾಸಿನಲ್ಲಿದ್ದ ಶುಲ್ಕ ದಿನೇ ದಿನೇ ಸಾವಿರಾರು ರೂ.ಗಳು ಏರಿಕೆಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಏ.೨೬ ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮಹಿಳಾ ಮೋರ್ಚಾ ಪದಾಧಿಕಾ ರಿಗಳು ಕಾರ್ಯಪ್ರವೃತ್ತರಾಗಿ, ಪ್ರತಿ ಬೂತ್ಗಳಲ್ಲಿ ಬಿಜೆಪಿ ಯೋಜನೆಗಳ ಕರಪತ್ರಗಳನ್ನು ಹಂಚಿ ಮನವರಿಕೆ ಮಾಡ ಬೇಕು. ಅಲ್ಲದೇ ಯುಗಾದಿ ಹಿಂದೂಗಳ ಬಹುದೊಡ್ಡ ಹಬ್ಬವಾಗಿದ್ದು ಮಹಿಳೆಯರು ತಮ್ಮ ಮನೆಗಳ ಮುಂಭಾಗ ರಂಗೋಲಿ ಜೊತೆಯಲ್ಲಿ ‘ಮರಳಿ ಬಂತು ಯುಗಾದಿ, ಮರಳಿ ಬರುವರು ಮೋದಿ’ ಎಂಬ ಸಾಲುಗಳನ್ನು ರಚಿಸಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ಕೇಂದ್ರದಿಂದ ಅನೇಕ ಯೋಜನೆಗಳು ಜಾರಿಗೊಂಡಿವೆ. ಅಲ್ಲದೇ ರೈತಾಪಿ ವರ್ಗಕ್ಕೆ ಸವಲತ್ತುಗಳನ್ನು ಒದಗಿಸಿದೆ. ಹಿಂದಿನ ಸರ್ಕಾರಗಳು ಕೈಗೊಳ್ಳದ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಮನ್ನಣೆ ನೀಡಿರುವುದು ಮೋದಿ ಸರ್ಕಾರ ಎಂದರು.
ದೇಶದ ಭದ್ರತೆ ದೃಷ್ಟಿಯಿಂದ ಸೈನಿಕರನ್ನು ಅತಿಹೆಚ್ಚು ಶಕ್ತಿಶಾಲಿಯಾಗಿ ಹಾಗೂ ಉನ್ನತ ಸ್ಥಾನಮಾನ ಕಲ್ಪಿಸಿ ರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಇಂದಿಗೂ ಓರ್ವ ಸೈನಿಕ ಸಾಮಾನ್ಯವಾಗಿ ನಿವೃತ್ತಿ ಅಥವಾ ವೃತ್ತಿ ಯಲ್ಲಿ ರಜೆ ಹಾಕಿ ತವರಿಗೆ ಮರಳಿದ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಗೌರವದಿಂದ ಕಾಣುತ್ತಿದ್ದು ಇದು ಬಿಜೆಪಿ ಸರ್ಕಾರ ಯೋಧರಿಗೆ ಸಲ್ಲಿಸಿರುವ ಗೌರವ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಂಜುಳಾ ಮಂಜುನಾಥ್, ನಗರಾಧ್ಯಕ್ಷೆ ಪವಿತ್ರ, ಪ್ರಧಾನ ಕಾರ್ಯದರ್ಶಿಗಳಾದ ಮಧು, ಗಗನ, ಕಾರ್ಯದರ್ಶಿ ಪ್ರೀತಿ, ನಗರಸಭಾ ಸದಸ್ಯರುಗಳಾದ ಸುಜಾತ, ಅನುಮಧುಕುಮಾರ್, ರೂಪ ಕುಮಾರ್ ಮತ್ತಿತರರು ಹಾಜರಿದ್ದರು.
District BJP Mahila Morcha First Executive Meeting