May 20, 2024

ಜಿಲ್ಲಾ ಭೀಮ್ ಆರ್ಮಿಯಿಂದ ಅನಿಲ್‌ಕುಮಾರ್ ಸನ್ಮಾನ

0
ಜಿಲ್ಲಾ ಭೀಮ್ ಆರ್ಮಿಯಿಂದ ಅನಿಲ್‌ಕುಮಾರ್ ಸನ್ಮಾನಜಿಲ್ಲಾ ಭೀಮ್ ಆರ್ಮಿಯಿಂದ ಅನಿಲ್‌ಕುಮಾರ್ ಸನ್ಮಾನ

ಜಿಲ್ಲಾ ಭೀಮ್ ಆರ್ಮಿಯಿಂದ ಅನಿಲ್‌ಕುಮಾರ್ ಸನ್ಮಾನ

ಚಿಕ್ಕಮಗಳೂರು:  ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯಾಗಿ ಆರ್.ಅನಿಲ್‌ಕುಮಾರ್ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಭೀಮ್ ಆರ್ಮಿ ಮುಖಂಡರುಗಳು ಕಚೇರಿಯಲ್ಲಿ ಆತ್ಮೀಯವಾಗಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅನಿಲ್‌ಕುಮಾರ್ ಬಡವರು, ದೀನ ದಲಿತರ ನೋವಿಗೆ ಸ್ಪಂದಿಸುವುದು, ಹಕ್ಕು ಗಳು ಹಾಗೂ ಅಕ್ರಮ ಭೂ ಒತ್ತುವರಿ ವಿರುದ್ಧ ನಿರಂತರ ಹೋರಾಟ ರೂಪಿಸಿ ನ್ಯಾಯ ಒದಗಿಸಲು ಹೋ ರಾಟ ನಡೆಸಿದವರು ಭೀಮ್ ಆರ್ಮಿ ಮುಖಂಡರು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಪ್ರತಿ ಗ್ರಾಮಗಳ ಮೂಲೆ ಮೂಲೆಗಳಿಗೆ ಮುಟ್ಟಿಸುವ ಕಾರ್ಯವನ್ನು ಮುಖಂಡರು ಮಾಡಬೇಕಿದೆ ಎಂದ ಅವರು ಭೀಮ್‌ಆರ್ಮಿ ಶಕ್ತಿಯು ರಾಜಕೀಯ ಪಕ್ಷಗ ಳನ್ನು ತಲ್ಲಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಬುದ್ಧ, ಬಸವಣ್ಣ, ಅಂಬೇಡ್ಕರ್‌ರವರ ಆದರ್ಶ ಹಾಗೂ ವಿಚಾರಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು. ಅನ್ಯಾಯ ಅಥವಾ ತುಳಿತಕ್ಕಾಳದ ನೊಂದ ಕುಟುಂಬಗಳಿಗೆ ಸಂಘಟನೆ ಮುಖಾಂ ತರ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಭೀಮ್‌ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ ಈಗಾಗಲೇ ಸಂಘಟನೆಯಲ್ಲಿ ಎರಡು ಸಾವಿ ರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಯಾಗುತ್ತಿದೆ. ಸಂಘಟನೆ ಉದ್ದೇಶ ಅಂಬೇಡ್ಕರ್‌ರವರ ಸಂವಿಧಾನ ನೀತಿ, ನಿಯಮಗಳನ್ನು ಎಲ್ಲೆಡೆ ಪಸರಿಸುವುದು ಹಾಗೂ ನ್ಯಾಯ ಸಮ್ಮತ ಹೋರಾಟಕ್ಕೆ ಸೀಮಿತವಾಗಿದೆ ಎಂದರು.

ದಲಿತ ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಅಂಬೇಡ್ಕರ್ ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಪ್ರತಿ ಜನಾಂಗಕ್ಕೂ ಪೂರಕವಾಗಿದೆ ಎಂದ ಇತ್ತೀಚೆಗೆ ಸಂವಿಧಾನ ಅಪಾ ಯದಲ್ಲಿರುವ ಕಾರಣ ಇಂದಿನ ಯುವಪೀಳಿಗೆ ಎಚ್ಚೆತ್ತುಕೊಳ್ಳಬೇಕು. ಸಮಾಜದಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿಲೀಪ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಸದಸ್ಯರುಗಳಾದ ರಾಕೇಶ್, ಪ್ರಸನ್ನ, ಕುಮಾರ್, ಚೌಡಪ್ಪ, ಪ್ರದೀಪ್, ರಮೇಶ್, ಪ್ರವೀಣ್, ಮನು, ಸುಧೀರ್ ಮತ್ತಿತರರು ಹಾಜರಿದ್ದರು.

Anil Kumar Honored by Zilla Bhim Army

 

About Author

Leave a Reply

Your email address will not be published. Required fields are marked *