July 16, 2024
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಕಮ್ಯುನಲ್ ಗವರ್ನಮೆಂಟ್ ಆಗಿ ಬದಲಾಗಿದೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅರಾಜಕತೆ, ಗೂಂಡಾಗಿರಿ, ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೆ ವೇಳೆಯಲ್ಲಿ ಗೂಂಡಾಗಳು ನಿರ್ಭಯರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ವೇಳೆ ಮಂಗಳೂರಿನಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಸಿದ ಅವರು, ರಾಜ್ಯ ಸರ್ಕಾರ ಮತೀಯ ಚಟುವಟಿಕೆಗಳಿಗೆ ಕುಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದರು.

ಯಾವುದೇ ಅನುಮತಿ ಪಡೆಯದೆ ಒಂದಷ್ಟು ಜನ ಸೇರಿಕೊಂಡು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ನಮಾಜು ಮಾಡುವುದು ರಸ್ತೆಯಲ್ಲಿ ಅಲ್ಲ. ಅದಕ್ಕಾಗಿಯೇ ಮಸೀದಿ ಇದೆ. ಹೀಗೆ ರಸ್ತೆಯಲ್ಲಿ ನಮಾಜು ಮಾಡುವವರ ಮೇಲೆ ಪೊಲೀಸರು ಸುಮೊಟೊ ಕೇಸು ದಾಖಲಿಸಿದರೆ ಅಂತ ಪೊಲೀಸರನ್ನು ಕಡ್ಡಾಯ ರಜೆ ಮೇಲೆ ಕಳಿಸುತ್ತಾರೆ. ರಾಜ್ಯ ಸರ್ಕಾರ ಒಂದು ಕೋಮುನವರ ಮೇಲೆ ದಾಖಲಾಗಿರುವ ಎಲ್ಲಾ ಕೇಸುಗಳನ್ನು ವಾಪಾಸ್ ತೆಗೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ ಅವರಿಗೆ ಯಾವುದೇ ಭಯ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಒಂದು ಕೋಮಿನವರಿಗೆ ನೀವು ಏನಾದರೂ ಮಾಡಿ ನಾವು ನಿಮ್ಮ ಜೊತೆಗಿದ್ದೇವೆ ಎಂಬ ಸಂದೇಶ ಕೊಡುತ್ತಿದೆ. ಈ ಮೂಲಕ ರಾಜ್ಯದ ಜನರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ನೀತಿಯೇ ಗೃಹ ಸಚಿವರನ್ನು ದುರ್ಬರನ್ನಾಗಿಸಿದೆಯೋ ಅಥವಾ ದುರ್ಬಲತೆಯೇ ಅವರನ್ನು ಆವರಿಸಿದೆಯೋ ಗೊತ್ತಾಗುತ್ತಿಲ್ಲ. ಸಿಎಂ ರೇಸ್ ನಲ್ಲಿದ್ದ ಗೃಹ ಮಂತ್ರಿ ಮುಖ್ಯಮಂತ್ರಿ ಆಗದ ಹತಾಶೆಯಿಂದಾಗಿ ತಮ್ಮ ಸ್ಥಾನವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎನಿಸುತ್ತಿದೆ. ರಾಜ್ಯದಲ್ಲಿ ಪೊಲೀಸರ ನೈತಿಕ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವಾಗುತ್ತಿದೆ. ಕಂಡು ಕಾಣದಂತೆ, ಕೇಳಿದರು ಕೇಳದಂತೆ ಇರುವ ದುರ್ಬಲ ಗೃಹ ಇಲಾಖೆ ರಾಜ್ಯದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

State Government Communal Government

About Author

Leave a Reply

Your email address will not be published. Required fields are marked *