ಚಿಕ್ಕಮಗಳೂರು: ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಜನ್ಮದಿನದ ಅಂಗವಾಗಿ ನಗರದ ಕೆಂಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖಂಡರುಗಳು ಮಂಗಳವಾರ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ, ನಂತರ ಮಕ್ಕಳಿಗೆ ನೋಟ್ಪುಸ್ತಕ ಹಾಗೂ ಸಿಹಿ ವಿತರಿಸುವ ಮೂಲಕ ಆಚರಿಸಿದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಕನ್ನಡಿಗರ ಧ್ವನಿಯಾಗಿ, ನಾಡು, ನು ಡಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ ಕನ್ನಡಪರ ಹೋರಾಟಗಾರ ಕೆ.ಆರ್.ಕುಮಾರ್ ಎಂದ ಅವರು ತಮ್ಮ ಜೀವನವನ್ನು ಕನ್ನಡತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಕನ್ನಡ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕುಮಾರ್ ಅವರು ಕನ್ನಡಪರ ಕಾರ್ಯಗಳಿಂ ದಲೇ ಯುವಮೂಹವನ್ನು ಸಂಘಟಿಸಿದ್ದಾರೆ. ನಾಡು-ನುಡಿಯ ಸೇವೆ, ಚಳವಳಿಯಿಂದಲೇ ರಾಜ್ಯಾಧ್ಯಕ್ಷ ಕೆ. ಆರ್.ಕುಮಾರ್ ಗುರುತಿಸಿಕೊಂಡಿದ್ದಾರೆ ಎಂದರು.
ಕನ್ನಡ ನಾಡು- ನುಡಿ ಕುರಿತಾದ ಬದ್ಧತೆ ಅಪಾರ. ಕನ್ನಡದ ಯುವಕರನ್ನು ಸೂಜಿಗಲ್ಲಿನಂತೆ ಸೆಳೆ ಯುವ ಶಕ್ತಿ ಅವರಿಗಿದೆ. ಕನ್ನಡ ಅಸ್ಮಿತೆಗೆ ಧಕ್ಕೆ ಉಂಟಾದರೆ ರಾಜಿರಹಿತ ಹೋರಾಟ ಮಾಡಿಕೊಂಡು ಬಂದಿ ರುವ ಅವರು ಆ ಗುಣದಿಂದಲೇ ಸಂಘಟನೆ ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರು.
ಕನ್ನಡಸೇನೆ ಗೋವಾ ರಾಜ್ಯಾಧ್ಯಕ್ಷ ರತ್ನಕಾರ್ ಪೂಜಾರಿ ಮಾತನಾಡಿ ಜಿಲ್ಲೆಯಲ್ಲಿ ಕನ್ನಡಾಭಿಮಾನಿ ಗಳ ಬಳಗ ಬಹಳಷ್ಟು ದೊಡ್ಡದಿದೆ. ರಾಜ್ಯಾಧ್ಯಕ್ಷ ಹುಟ್ಟುಹಬ್ಬವನ್ನು ಮಕ್ಕಳಿಗೆ ಸಾಮಾಗ್ರಿ, ನೋಟ್ಪುಸ್ತಕ ವಿತ ರಿಸಿ ಆಚರಿಸುತ್ತಿರುವುದು ಉತ್ತಮ ವಿಚಾರ ಎಂದು ತಿಳಿಸಿದರು.
ಕನ್ನಡಿಗರು ಸ್ವಾಭಿಮಾನಿಗಳು, ಪ್ರತಿಯೊಂದು ಭಾಷೆಯ ಮೇಲೆ ವಿಶೇಷ ಅಭಿಮಾನ, ಪ್ರೀತಿ ಹೊಂದಿ ರುವ ಗುಣವುಳ್ಳವರು. ಆದರೆ ಮಾತೃಭಾಷೆಗೆ ಧಕ್ಕೆ ಅಥವಾ ಅಗೌರವ ಉಂಟಾದರೆ ಸಹಿಸುವ ಶಕ್ತಿಯಿಲ್ಲ. ಒಂದು ವೇಳೆ ತಾಯ್ನುಡಿಗೆ ಮಸಿ ಬಳಿಯುವ ಕೆಲಸ ಮಾಡುವವರ ವಿರುದ್ಧ ಕಾನೂನಾತ್ಮಕವಾಗಿ ಪುಟಿದೇ ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಸೇ ಜಿಲ್ಲಾ ವಕ್ತಾರ ಕಳವಾಸೆ ರವಿ, ಆಟೋ ಘಟಕದ ಅಧ್ಯಕ್ಷ ಜಯ ಪ್ರಕಾಶ್, ಸಂಘಟನಾ ಸಂಚಾಲಕ ಸತೀಶ್, ಭೂಮಿಕಾ ಟಿವಿ ಸಂಪಾದಕ ಅನಿಲ್ಆನಂದ್, ಮುಖಂಡರು ಗಳಾದ ವೀರೇಶ್, ಹೇಮಂತ್, ಪಾಲಾಕ್ಷಿ, ಅನ್ವರ್, ಶಂಕರೇಗೌಡ, ಚೇತನ್, ಪುಷ್ಪ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.
Birthday Celebration of Kannada Sena State President in Government School