ALSO FEATURED IN

ಸಾರ್ವಜನಿಕ ಸ್ಥಳದಲ್ಲಿ ತಲವಾರ್ ಪ್ರದರ್ಶನ – ಇಬ್ಬರ ಬಂಧನ

Spread the love

ಎನ್.ಆರ್.ಪುರ: ಸಾರ್ವಜನಿಕ ಸ್ಥಳದಲ್ಲಿ ಲಾಂಗ್ (ತಲವಾರ್) ಝಳಪಿಸುತ್ತ ಸೆರೆಹಿಡಿದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹಾಗೂ ವಾಹನದಲ್ಲಿ ಲಾಂಗ್ ಇರಿಸಿಕೊಂಡು ಸಂಚರಿಸಿದ ಆರೋಪದ ಮೇಲೆ ಯುವಕರಿಬ್ಬರನ್ನು ಪೊಲೀಸರು ಂಜೆ ಬಂಧಿಸಿದ್ದಾರೆ.

ಪಟ್ಟಣದ ೬ನೇ ವಾರ್ಡ್ ಬೆಟ್ಟಗೆರೆ ನಿವಾಸಿಗಳಾದ ಮೆಕಾನಿಕ್ ಸೈಯದ್ ಸಲ್ಮಾನ್ (೨೨) ಮತ್ತು ಕಾರ್ಪೆಂಟರ್ ಮಹಮ್ಮದ್ ಸಾದಿಕ್ (೨೫) ಬಂಧಿತರು. ಇಬ್ಬರು ವ್ಯಕ್ತಿಗಳು ಕಪ್ಪು ಕಾರಿನಲ್ಲಿ ಲಾಂಗ್ ಇರಿಸಿಕೊಂಡು ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಶೆಟ್ಟಿಕೊಪ್ಪ ಗ್ರಾಮದ ಕಡೆಯಿಂದ ಬರುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಗುರುದತ್ ಕಾಮತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ಮಾಡಿದ್ದರು.

ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ ಲಾಂಗ್ ಕಂಡುಬಂ ದಿತ್ತು. ನಮ್ಮನ್ನು ನೋಡಿ ಜನರು ಹೆದರಿಕೊಳ್ಳಬೇಕು ಎಂಬ ಉದ್ದೇಶ ದಿಂದ ಲಾಂಗ್ ತೋರಿಸುತ್ತ ಓಡಾಡಿ ದ್ದೆವು ಎಂದು ಆರೋಪಿಗಳು ಹೇಳಿರು ವುದಾಗಿ ಪೊಲೀಸರು ತಿಳಿಸಿದರು.

ಆಯುಧ ಮತ್ತು ಕಾರು ವಶಪಡಿಸಿ ಕೊಂಡಿರುವ ಪೊಲೀಸರು ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಯುವರಾಜ್, ದೇವರಾಜ್, ಚೈತ್ರಾ ಪಾಲ್ಗೊಂಡಿದ್ದರು. ಆರೋಪಿಗಳು ತಲವಾರ್ ಹಿಡಿದುಕೊಂಡಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

Demonstration of talwar in public place – two arrested

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version