ALSO FEATURED IN

ವಿವಿಧ ಈಡೇರಿಕೆಗೆ ಒತ್ತಾಯಿಸಿ ಸಹಾಯಕಿಯರ ಪ್ರತಿಭಟನೆ

Spread the love

ಚಿಕ್ಕಮಗಳೂರು:  ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂ ಚಾಯಿತಿ ಸ್ವಚ್ಚವಾಹಿನಿ ಆಟೋ ಡ್ರೈವರ್‍ಸ್ ಮತ್ತು ಸಹಾಯಕಿಯರ ಜಿಲ್ಲಾ ಸಂಘದ ಮಹಿಳೆಯರು ನಗರದ ಜಿಲ್ಲಾ ಪಂಚಾಯಿತಿ ದ್ವಾರದ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಸಂಘದ ರಾಜ್ಯ ಸಂಚಾಲಕ ಡಿ.ಎಂ.ಮಲಿಯಪ್ಪ ಸ್ವಚ್ಚವಾಹಿನಿ ಮಹಿಳಾ ಕಾ ರ್ಮಿಕರು ಕಸವಿಲೇವಾರಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಕಸವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಸವಿಲೇವಾರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಸರ್ಕಾರದ ಪ್ರಮುಖ ಅಭಿ ಯಾನದ ಸ್ವಚ್ಚ ಭಾರತ್ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದಾಗಿ ಕೇಂದ್ರ ಸರ್ಕಾರವು ಉಲ್ಲೇಖಿಸಿದೆ. ಆದರೆ ಗ್ರಾಮಗಳ ಸ್ವಚ್ಚತೆಯ ಜವಾಬ್ದಾರಿ ವಹಿಸಿರುವಂತಹ ಸ್ವಚ್ಚವಾಹಿನಿ ನೌಕರರಿಗೆ ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ಸರ್ಕಾರದಿಂದ ತರಬೇತಿ ಪಡೆದ ಸ್ವಚ್ಚವಾಹಿನಿ ನೌಕರರಿಗೆ ಗ್ರಾ.ಪಂ.ಗಳಲ್ಲಿ ಕೆಲಸ ನೀಡುತ್ತಿಲ್ಲ. ಗಾಡಿ ಗಳಿಗೆ ವಿಮೆ ನವೀಕರಣ ಮಾಡಿಲ್ಲ. ಜೀವದ ಹಂಗನ್ನು ತೊರೆದು ಸ್ವಚ್ಚತಾ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ವೇತನವನ್ನು ಬಾಕಿ ಉಳಿಸಿಕೊಂಡಿರುವ ಜೊತೆಗೆ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣಾ ಸಲಕರಣೆ ಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಸಂಚಾಲಕಿ ಹೆಚ್.ಜಿ.ಮಮತ ಮಾತನಾಡಿ ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಮಹಿ ಳಾ ಸಿಬ್ಬಂದಿಗಳು ಹಲವಾರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಅಲ್ಲದೇ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸಿಲ್ಲ. ಸರ್ಕಾರದಿಂದಲೇ ತರಬೇತಿ ಪಡೆದ ಎಲ್ಲಾ ಸ್ವಚ್ಚವಾಹಿನಿ ನೌಕರರಿಗೆ ವರ್ಷಪೂರ್ತಿ ಕೆಲಸ ನೀಡದೇ ಅನ್ಯಾಯವೆಸಗುತ್ತಿದೆ ಎಂದು ದೂರಿದರು.

ಹೀಗಾಗಿ ಸ್ವಚ್ಚತಾ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಟ ವೇತನ ೨೬ ಸಾವಿರ ನಿಗಧಿಪಡಿಸ ಬೇಕು. ತರಬೇತಿ ಪಡೆದ ಸ್ವಚ್ಚವಾಹಿನಿ ನೌಕರರಿಗೆ ಗ್ರಾ.ಪಂ.ಗಳಲ್ಲಿ ಕೆಲಸ ಕೊಡಲು ಸೂಕ್ತ ಕ್ರಮ ಕೈಗೊಳ್ಳ ಬೇಕು. ಬಾಕಿ ವೇತನ ಕೂಡಲೇ ಪಾವತಿಸಬೇಕು. ೧೫ನೇ ಹಣಕಾಸಿನಂತೆ ೬ ತಿಂಗಳ ವೇತನವನ್ನು ಕಡ್ಡಾಯ ವಾಗಿ ನೀಡಬೇಕು. ನೌಕರರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಬಿಂಧು, ಆಶಾ, ಮಮತ, ಶೀಲಾ, ಪ್ರತಿಮಾ, ಜ್ಯೋತಿ, ಶ್ವೇತಾ, ಸ್ಮಿತಾ, ಸುಪ್ರೀತ, ಪುಷ್ಪಲತಾ ಮತ್ತಿತರರು ಹಾಜರಿದ್ದರು.

Protest of helpers demanding different fulfillment

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version