ಚಿಕ್ಕಮಗಳೂರು: ಜಿಲ್ಲೆಯಲ್ಲಿ ತಮಿಳು ಜನಾಂಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದೆ. ಒಗ್ಗಟ್ಟಿನ ಪ್ರದರ್ಶನದಿಂದ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಶ್ರೀ ಸುಬ್ರ ಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದ ಅಧ್ಯಕ್ಷ ಜಿ.ರಘು ಹೇಳಿದರು.
ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾದ ತಮಿಳು ಸಂ ಘದ ಸದಸ್ಯರುಗಳ ಸಭೆಯನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಹಲವಾರು ಸಣ್ಣಪುಟ್ಟ ಕೆಲಸಗಳಲ್ಲಿ ತಮಿಳು ಜನಾಂಗದ ಶ್ರಮ ಬಹಳಷ್ಟಿದೆ. ದಿನದ ದುಡಿಮೆಯನ್ನೇ ನಂಬಿಕೊಂಡು ಅನೇಕರು ಕಷ್ಟಪಡುತ್ತಿದ್ದಾರೆ. ಇಂದಿಗೂ ತಮಿಳರ ಜನಾಂಗವನ್ನು ಜನಪ್ರತಿ ನಿಧಿಗಳಾಗಲೀ ಅಥವಾ ಸರ್ಕಾರವಾಗಲೀ ಸಮರ್ಪಕವಾಗಿ ಗುರುತಿಸುವ ವಿಫಲವಾಗಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.
ಸಮುದಾಯಕ್ಕೆ ತಮಿಳು ಮಾತೃಭಾಷೆಯಾದರೆ, ಕನ್ನಡ ಜೀವನದ ಭಾಷೆಯಾಗಿದೆ. ಅನೇಕ ತಲೆ ಮಾರುಗಳಿಂದ ತಮಿಳರು ಕನ್ನಡ ನೆಲದಲ್ಲೇ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ರಾಜ ಕೀಯ ಹಾಗೂ ಸಾಮಾಜಿಕ ಬೆಳೆಯುವ ಹಂತವನ್ನು ಇಂದಿಗೂ ತಲುಪಿಲ್ಲ. ಸರ್ಕಾರ ಜನಾಂಗ ಕಡೆಗಣಿಸು ತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಲ್ಪಪ್ರಮಾಣದ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಐಶರಾಮಿ ಜೀವನ ಹಾಗೂ ರಾಜಕೀಯ ಸೇರಿದಂತೆ ಇನ್ನಿತರೆ ಸ್ಥಾನಗಳಲ್ಲಿ ಅವಕಾಶ ಕಲ್ಪಿಸಿ ಬೆಳೆಯುತ್ತಿದೆ. ಹಲವಾರು ವರ್ಷಗಳ ಪೂ ರ್ವಜರ ಕಾಲದಿಂದ ನೆಲೆಸಿರುವ ತಮಿಳರಿಗೆ ಸೂಕ್ತ ಸ್ಥಾನ ಒದಗಿಸದೇ ಸ್ಥಳೀಯ ಜನಪ್ರತಿನಿಧಿಗಳು ಹಿಂದೇ ಟು ಹಾಕುತ್ತಿದ್ದಾರೆ ಎಂದು ದೂರಿದರು.
ಜನಾಂಗದಲ್ಲಿ ಬಹಳಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಮಕ್ಕಳ ವಿದ್ಯಾಭ್ಯಾಸ ಹಾ ಗೂ ಮದುವೆ ಕಾರ್ಯಕ್ಕೆ ತುಂಬಾನೇ ಸಮಸ್ಯೆಯಾಗುತ್ತಿದೆ. ಇಂದಿನ ಬೆಲೆಏರಿಕೆ ನಡುವೆ ದುಡಿಮೆ ಶೇ.೧೦೦ ಭಾಗ ಕುಟುಂಬದ ನಿರ್ವಹಣೆಗೆ ಸೀಮಿತವಾಗಿದೆ. ಹೀಗಾಗಿ ಜನಾಂಗಕ್ಕೆ ಸಮುದಾಯ ಭವನ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಕೃಷ್ಣರಾಜ್ ಮಾತನಾಡಿ ನಗರದ ಆರೇಳು ವಾರ್ಡ್ಗಳಲ್ಲಿ ತಮಿಳು ಜನಾಂಗ ಗಳ ಸಭೆ ನಡೆಸುವ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಬೇಕಿದೆ. ಇದರಿಂದ ಜನಾಂಗ ಆರ್ಥಿಕವಾಗಿ ಸದೃಢಗೊಳಿಸಲು ಸಾಧ್ಯ ಎಂದ ಅವರು ತಮಿಳರು ಬಲಿಷ್ಟವಾದರೆ ಭವಿಷ್ಯದಲ್ಲಿ ನೆಮ್ಮದಿಯಿಂ ದ ಜೀವಿಸಬಹುದು ಎಂದರು.
ಆಯಾ ವಾರ್ಡ್ಗಳಲ್ಲಿ ಜನಾಂಗದ ಪಟ್ಟಿ ತಯಾರಿಸಬೇಕು. ಸಂಘಕ್ಕೆ ಸೇರ್ಪಡೆಗೊಳಿಸುವ ಮೂ ಲಕ ಸರ್ಕಾರದ ಮುಂದೆ ಶಕ್ತಿ ತೋರ್ಪಡಿಸಬೇಕು. ಆಗ ಮಾತ್ರ ಸಾಮಾಜಿಕ ಹಾಗೂ ರಾಜಕೀಯವಾಗಿ ಅವಕಾಶ ಪಡೆದುಕೊಳ್ಳಬಹುದು. ಹೀಗಾಗಿ ಜನಾಂಗದ ಬೆಳವಣಿಗೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದ ಮುಖಂಡ ವಿಜಯ್ಕುಮಾರ್ ಮಾತನಾಡಿ ತಮಿಳು ಸಂಘ ಪ್ರಾರಂಭವಾಗಿ ಎರಡು ದಶಕವನ್ನು ಸಮೀಪಿಸುತ್ತಿರುವ ವೇಳೆಯಲ್ಲೂ ಪ್ರಾಮುಖ್ಯತೆಯಿಂದ ವಂಚಿತಗೊಂಡಿದೆ. ಸರ್ಕಾರವು ಜನಾಂ ಗದ ಬಡವರನ್ನು ಗುರುತಿಸಿ ನಿವೇಶನ ಹಾಗೂ ಬದುಕಿಗೆ ಸೌಲಭ್ಯಗಳನ್ನು ಒದಗಿಸಿದರೆ ಸದೃಢ ಜೀವನ ನಡೆ ಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲೆಯ ಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕುಮಾರಗಿರಿ ದೇವಾಲಯ ನಿರ್ಮಿಸಿ ಮದುವೆ ಸೇರಿದಂತೆ ಇನ್ನಿತರ ಸಮಾರಂಭ ನಡೆಸಲು ಅನುಕೂಲವಾಗಿದೆ. ಈ ದುಬಾರಿ ಜೀವನದಲ್ಲಿ ಕಷ್ಟದಿಂದ ಬದುಕು ಸಾಗಿಸುತ್ತಿರುವ ಜನಾಂಗ ಸಮಾರಂಭ ನಡೆಸಲು ದೂರದ ಊರಿಗೆ ತೆರಳಬೇಕಾಗಿತ್ತು ಎಂದು ತಿಳಿ ಸಿದರು.
ಈ ಸಂದರ್ಭದಲ್ಲಿ ಸಂಘದ ಸಹಕಾರ್ಯದರ್ಶಿ ಸಿ.ಕೆ.ಮೂರ್ತಿ, ಮುಖಂಡರುಗಳಾದ ಮುರುಗಣ್ಣ, ಮಹಾಲಿಂಗಂ, ಚಿನ್ನಪ್ಪ, ಸತೀಶ್, ಹರೀಶ್, ಹರಿ, ಸಂತೋಷ್, ಸತ್ಯವತಿ, ಲಕ್ಷ್ಮೀ, ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.
Meeting of members of Sri Subrahmanya Bharati Mahasabha Tamil Sangh