ಚಿಕ್ಕಮಗಳೂರು: ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕ ರಸ್ತೆಯು ತೀವ್ರ ಕೆಸರುಮಯ ವಾದ ಹಿನ್ನೆಲೆಯಲ್ಲಿ ಕೂಡಲೇ ದುರಸ್ಥಿಗೊಳಿಸಬೇಕು ಎಂದು ಬಿಜೆಪಿ ನಗರ ಯುವಮೋರ್ಚಾ ಹಾಗೂ ಸಾರ್ವಜನಿಕರು ಪೌರಾಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ನಗರ ಯುವಮೋರ್ಚಾ ಅಧ್ಯಕ್ಷ ಜೀವನ್ ರಂಗನಾಥ್ ವಿಪರೀತ ಮಳೆಯಿ ಂದಾಗಿ ಕೋಟೆ ಸಮೀಪದ ವಾಟರ್ ಟ್ಯಾಂಕ್ ಹತ್ತಿರ ರಸ್ತೆಯು ಕೆಸರುಮಯವಾಗಿ ಶಾಲಾ ಮಕ್ಕಳು, ವೃದ್ದರು ಸಂಚರಿಸದಂಥ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಗರದ ವಾಟರ್ಟ್ಯಾಂಕ್ ಹತ್ತಿರ ಚಿಕ್ಕಮಗಳೂರು-ಸಕಲೇಶಪುರ ಮಾರ್ಗವಾಗಿ ನಿರ್ಮಿಸುತ್ತಿರುವ ರೈಲ್ವೆ ಕಾಮಗಾರಿ ಸಂಪೂರ್ಣವಾಗಿ ರಸ್ತೆಯನ್ನು ಅಗೆದಿರುವ ಕಾರಣ ರಸ್ತೆಯು ಅತಿಯಾದ ಮಳೆಯಿಂ ದಾಗಿ ಕೆಸರುಮಯವಾಗಿದೆ ಎಂದು ಹೇಳಿದರು.
ಈ ಮಾರ್ಗದಲ್ಲಿ ಸುಮಾರು ೨೫೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಇದೇ ಮಾರ್ಗವಾಗಿ ಸಂಚರಿಸಬೇಕಾಗಿದೆ. ಸಣ್ಣ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರು ಹೆಚ್ಚಿರುವ ಈ ರಸ್ತೆಯ ಲ್ಲಿ ಸಂಚರಿಸುವ ವೇಳೆ ಕೆಸರಿನಲ್ಲಿ ಬೀಳುವ ಆತಂಕ ಉಂಟಾಗಿದೆ ಎಂದು ಹೇಳಿದರು.
ಆದ್ದರಿಂದ ನಗರಸಭಾ ಪೌರಾಯುಕ್ತರು ಸಾರ್ವಜನಿಕರು ಸಂಚರಿಸುವ ಈ ರಸ್ತೆಯನ್ನು ತಾತ್ಕಾಲಿಕ ವಾಗಿ ದುರಸ್ಥಿಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅವಘಡಗಳು ಸಂಭವಿಸಿದರೆ ತಾವೇ ಹೊಣೆಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಕೋಟೆ ಗ್ರಾಮಸ್ಥರ ನಟರಾಜ್, ರಾಘವೇಂದ್ರ, ಶ್ಯಾಮು, ಪುನೀ ತ್, ಕುಮಾರ್, ಪವಾನಿ, ಸಿದ್ದಾರ್ಥ ಮತ್ತಿತರರು ಹಾಜರಿದ್ದರು.
Urge Municipal Commissioner to repair muddy road