ಚಿಕ್ಕಮಗಳೂರು: ನಗರ ಸಭೆಯಲ್ಲಿ ಪ್ರತಿ ವಿಷಯಕ್ಕೆ ಅನುಮೋದನೆ ಪಡೆದು ಮಂಜೂರಾತಿ ನೀಡಬೇಕೆಂಬ ಸಂವಿಧಾನಾತ್ಮಕವಾದ ಹಕ್ಕನ್ನು ನಗರಸಭೆ ಅಧ್ಯಕ್ಷ ಗಾಳಿಗೆ ತೂರಿದ್ದಾರೆ ಎಂದು ನಗರಸಭೆ ಸದಸ್ಯ ಟಿ.ರಾಜಶೇಖರ್ ಆರೋಪಿಸಿದರು.
ಅವರು ಇಂದು ಜು.೧೦ ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸರಿಯಾಗಿ ಸಭೆ ನಡೆಸದೆ ವಿ?ಯ ಚರ್ಚಿಸದೆ ೧ರಿಂದ ೬೮ ವಿ?ಯಗಳಿಗೆ ಅನುಮೋದನೆ ದೊರೆತಿದೆ ಎಂದು ಏಕಪಕ್ಷೀಯ ನಿರ್ಧಾರ ಕೈಗೊಂಡ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ೧೯ ಬಿಜೆಪಿ ಸದಸ್ಯರನ್ನು ಒಳಗೊಂಡ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದರು.
ಸಂವಿಧಾನ ಬದ್ಧವಾದ ಕಾನೂನು ಗೌರವಿಸುವ ಅಧಿಕಾರಿಗಳು ಅಧ್ಯಕ್ಷರೊಂದಿಗೆ ಕೈಜೋಡಿಸಿರುವುದು ಬೇಸರದ ಸಂಗತಿ, ಪೌರಾಯುಕ್ತರು ಸಮ್ಮತಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಇನ್ನು ಉಳಿದ ೧೦ ದಿನದ ಅಧಿಕಾರವಧಿಯಲ್ಲಿ ೧೨ ಕೋಟಿ ರೂಗಳ ಕಾಮಗಾರಿಯಲ್ಲಿ ಭ್ರ?ಚಾರ ನಡೆಸಲು ಅಧ್ಯಕ್ಷರು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದ್ದು ಅಜೆಂಡದಲ್ಲಿಯೂ ಇದೆ ಇದನ್ನು ತಡೆಯಲು ಪ್ರತಿಪಕ್ಷ ಸದಸ್ಯರಾದ ನಾವು ವಿರೋಧಿಸುತ್ತೇವೆ ಎಂದು ಸಭೆಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡರೆಂದು ದೂರಿದರು.
ಈವರೆಗೆ ಅಧ್ಯಕ್ಷ ನಡೆಸಿರುವ ಕಳಪೆ ಕಾಮಗಾರಿ, ಕಮಿ?ನ್ ದುರಾಸೆ, ಅಧಿಕಾರದ ಆಸೆಯಿಂದ ನಗರಸಭೆ ಅದೋಗತಿಗೆ ತಲುಪಿದೆ ಈ ಸಂಬಂಧ ಇಂದು ಜಿಲ್ಲೆಯ ಎಲ್ಲಾ ಶಾಸಕರು, ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನ್ಯಾಯ ಕೇಳಲು ಆಗಮಿಸಿದ್ದೇವೆ ಎಂದು ಹೇಳಿದರು.
ಈ ಸಂಬಂಧ ಎಲ್ಲರಿಗೂ ಮನವರಿಕೆ ಮಾಡಿದ್ದು ನಿವೇಶನ ಹಂಚಿಕೆಯಲ್ಲಿ ಆಗಿರುವ ಭ್ರಷ್ಟಚಾರದ ಬಗ್ಗೆ ಹಾಗೂ ಇ-ಖಾತಾ ಮಾಡಿದಾಗ ಆಗಿರುವ ಲೋಪಗಳ ಬಗ್ಗೆಯೂ ಸಚಿವರ ಗಮನಕ್ಕೆ ತಂದಿದ್ದೇವೆ ಎಂದರು.
ಕಾನೂನು ವಿರುದ್ಧವಾಗಿ ನಗರಸಭೆಯಲ್ಲಿ ೧೩ ಜನರ ಪರವಾಗಿ ಸುಳ್ಳು ಹೇಳಿರುವ ಕುರಿತು ಸಭೆಯ ನಡವಳಿಗಳನ್ನು ರದ್ದುಪಡಿಸುವಂತೆ ಕೋರಿ ಮನವಿ ನೀಡಿದ್ದು, ಸಚಿವರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
೧೯ ಬಿಜೆಪಿ ಸದಸ್ಯರ ಸಹಿ ಒಳಗೊಂಡ ಮನವಿ ಪತ್ರವನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಕವಿತಾಶೇಖರ್, ಅರುಣ್ಕುಮಾರ್, ಮಧುಕುಮಾರ್ ರಾಜ್ ಅರಸ್, ಸುಜಾತಶಿವಕುಮಾರ್, ರೂಪಕುಮಾರ್, ಗೋಪಿ, ಅನುಮಧುಕರ್, ಮಣಿಕಂಠ, ವಿಫುಲ್ಕುಮಾರ್ ಜೈನ್, ರಾಜು, ಅಮೃತೇಶ್ ಚೆನ್ನಕೇಶವ, ದೀಪರವಿಕುಮಾರ್, ಭವ್ಯಮಂಜುನಾಥ್, ಲಲಿತರವಿನಾಯಕ ಉಪಸ್ಥಿತರಿದ್ದರು.
Members demand for cancellation of unilateral resolution of municipal council