ಚಿಕ್ಕಮಗಳೂರು: ಅಂತರ್ ಜಿಲ್ಲಾ ಮನೆಯ ಕಳವು ವ್ಯಕ್ತಿಯನ್ನು ಬಂಧಿಸಿರುವ ಕಡೂರು ಪೊಲೀಸರು ೪.೧೯ ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಡೂರು ಪಟ್ಟಣ್ಣದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾ ಧಿಕಾರಿ ಡಾ.ವಿಕ್ರಮ್,ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ತರೀಕೆರೆ ಡಿಬೈಎಸ್ಪಿ ಹಾಲಮೂ ರ್ತಿರಾವ್,ವೃತ್ತನಿರೀಕ್ಷಕ ಡಿ.ದುರುಗಪ್ಪ ನೇತೃತ್ವದಲ್ಲಿ ಮನೆಕಳ್ಳರ ಪತ್ತೆಗೆ ತಂಡವನ್ನು ರಚಿಸಲಾಗಿತ್ತು.
ಜಿಲ್ಲಾ ಪೊಲೀಸ್ ಕಛೇರಿಯ ಬೆರಳಚ್ಚು ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳ ಸಹಾಯದಿಂದ ಆರೋಪಿ ಯನ್ನು ಪತ್ತೆ ಹಚ್ಚಲು ಕಡೂರು ಠಾಣೆಯ ಪಿಎಸ್ಐ ಪವನ್ಕುಮಾರ್, ನವೀನ್ಕುಮಾರ್ ಸಿಬ್ಬಂದಿಗಳಾದ ಮಂಜುನಾಥಸ್ವಾಮಿ, ಮಧುಕುಮಾರ್,ಹರೀಶ್,ಧನಪಾಲ್ನಾಯ್ಕ್, ಮೊಹಮ್ಮದ್ ರಿಯಾಜ್,ಸ್ವಾಮಿ,ಎನ್.ಕೆ. ಜಯಮ್ಮ ಅವರುಗಳು ತಂಡದಲ್ಲಿದ್ದರು.
ಹೊಳಲ್ಕೆರೆ ತಾಲೂಕು ಭರಮಸಾಗರದ ದಾದಾಪೀರ್ ಸದ್ಯಭದ್ರಾವತಿ ಸೀಗೆಬಾಗಿಯಲ್ಲಿ ವಾಸವಿದ್ದು, ಈತನನ್ನು ಪತ್ತೆಹಚ್ಚಿ ಬಂಧಿಸಿದ್ದು, ಈತನ ಮೇಲೆ ಈಹಿಂದೆ ಬೀರೂರು, ಭದ್ರಾವತಿ, ಅರಸೀಕೆರೆ, ಕೆ.ಆರ್.ನಗರ, ಮೈಸೂರು, ಹಿರಿಯೂರು, ಬೆಂಗಳೂರು ಹಾಗೂ ವಿವಿಧ ಠಾಣೆಗಳಲ್ಲಿ ೪೦ ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.
ಈತನಿಂದ ೬೧ ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಮತ್ತು ೧೦೨ ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ೪,೧೯,೨೮೭ ರೂಗಳಾಗಿವೆ ಈ ಕಾರ್ಯಾಚರಣೆಯಿಂದ ೨ ಮನೆ ಕಳವು ಪ್ರಕರಣಗಳನ್ನು ಭೇದಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯ ಪತ್ತೆ ತಂಡದ ಉತ್ತಮಕಾರ್ಯವನ್ನು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಶ್ಲಾಘಿಸಿದ್ದು, ತಂಡಕ್ಕೆ ಬಹುಮಾನವನ್ನು ಘೋಷಿಸಿದ್ದಾರೆ.
Gold jewelery worth Rs 4.19 lakh seized by Kadur police