ALSO FEATURED IN

ಕಾಳುಮೆಣಸು ಕಳ್ಳತನ ಆರೋಪಿಗಳ ಬಂಧನ

Spread the love

ಚಿಕ್ಕಮಗಳೂರು: ಮಸಗಲಿ ಗ್ರಾಮದಲ್ಲಿ ಕಾಳುಮೆಣಸು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಲ್ಲಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಸಗಲಿ ಗ್ರಾಮದ ದೇವರಾಜ್ ಗೌಡ ಅವರ ಕಾಫಿ ಗೋಡಾನ್ ನಿಂದ ಸುಮಾರು ೭೨೦ ಕೆ.ಜಿ. ಕಾಳುಮೆಣಸು ಕಳ್ಳತನವಾಗಿತ್ತು. ಈ ಬಗ್ಗೆ ಅವರು ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಳುಮೆಣಸು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ನಗರದ ಇಂದಿರಾಗಾಂಧಿ ಬಡಾವಣೆ ನಿವಾಸಿ ಲೋಹಿತ್ ಎಂಬಾತನನ್ನು ಬಂಧಿಸಿದ್ದು, ಆತನಿಂದ ೪ ಲಕ್ಷಕ್ಕೂ ಅಧಿಕ ಮೌಲ್ಯದ ೬೪೬ ಕೆ.ಜಿ. ಕಾಳುಮೆಣಸು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿ ಬಳಿ ಇದ್ದ ಕಾರು ಮತ್ತು ಬೈಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸತ್ಯನಾರಾಯಣ, ಪಿಎಸೈ ಗುರು ಎ. ಸಜ್ಜನ್, ಸಿಬ್ಬಂದಿ ಭರತ್ ಭೂಷಣ್, ಕುದರಾಳ್ ಕರಿಯಪ್ಪ, ಚಿದಾನಂದ, ನವೀನ್ ಮಂಡೆಗಾರ್, ನಿಂಗರಾಜ್, ದರ್ಶನ್, ಸಾಗರ್, ನವೀನ್, ತೀರ್ಥೇಶ್, ಅಶೋಕ್, ನಟರಾಜ್ ಭಾಗವಹಿಸಿದ್ದರು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೆಚ್ಚುವರಿ ಪೊಲೀಸ್ ಅದಿಕ್ಷಕ ಕೃಷ್ಣಮೂರ್ತಿ ಅಭಿನಂದಿಸಿದ್ದಾರೆ

Arrest of pepper theft accused

 

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version