ALSO FEATURED IN

ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಅಬ್ಬರ

Spread the love

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದೆ.ಕಳೆದ ರಾತ್ರಿಯಿಂದಲೇ ಧಾರಾಕಾರ ವಾಗಿ ಮಳೆ ಸರಿಯುತ್ತಿದ್ದು, ಬೃಹತ್ ಮರಗಳು ಧರೆಗುರುಳುತ್ತಿವೆ. ರಾತ್ರಿಇಡಿ ಒಂದೇ ಸಮನೆ ಮಳೆಬರುತ್ತಿರುವುದರಿಂದ ಮೂಡಿಗೆರೆ ತಾಲೂಕಿನ ಕೋಗಿಲೆ ಗ್ರಾಮದ ಬಳಿ ಬೃಹ ತ್‌ಮರವೊಂದು ಉರಳಿದ ಪರಿಣಾಮ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಪರದಾಡುವಂತಾಗಿದ್ದು,

ಸ್ಥಳೀಯರಿಂದ ಮೂರು ಗಂಟೆಗಳ ನಿರಂತರ ಕಾರ್ಯಾಚರಣೆಯೊಂದಿಗೆ ಮರ ತೆರವುಗೊಳಿಸಲಾಯಿತು. ಗಾಳಿ-ಮಳೆಗೆ ವಿದ್ಯುತ್‌ಲೈನಿನ ಮೇಲೆ ಮರದಕೊಂಬೆಗಳು ಮುರಿದುಬೀಳುತ್ತಿರುವುದರಿಂದ ಕೆಲವು ಗ್ರಾಮ ಗಳ ಜನರು ಕತ್ತಲೆಯಲ್ಲಿ ಮುಳುಗುವಂತಾಗಿದ್ದಾರೆ. ವಿದ್ಯುತ್ ಕೈಕೊಡುತ್ತಿರುವುದರಿಂದ ಕೆಲವೆಡೆ ಮೊಬೈಲ್ ಗಳಿಗೆ ಸಿಗ್ನಲ್ ಸಿಗದ ಬೇರೆಯವರನ್ನು ಸಂಪರ್ಕಿಸಲು ಹರಸಾಹಸ ಪರದಾಡುತ್ತಿರುವುದು ಮಲೆನಾಡ ಕುಗ್ರಾಮಗಳಲ್ಲಿ ಸರ್ವೆಸಾಮಾನ್ಯವಾಗಿದೆ.

ಮಲೆನಾಡು ಭಾಗದಲ್ಲಿ ಹುಟ್ಟಿ ರಾಜ್ಯದ ಉದ್ದಗಲಕ್ಕೂ ಹರಿಯುವ ತುಂಗಾ, ಭದ್ರ, ಹೇಮಾವತಿ ನದಿನೀರಿನಲ್ಲಿ ಏರಿಕೆಯಾಗಿದ್ದು, ಇದೇ ರೀತಿ ಮಳೆ ಮುಂದುವರೆದರೆ ಅಪಾಯದ ಮಟ್ಟ ಮೀರಿ ಹರಿಯುವ ಲಕ್ಷಣಗಳು ಕಂಡುಬರುತ್ತಿವೆ.ಸೋಮವಾಹಿನಿಯ ತುಂಬಹರಿಯುತ್ತಿದೆ. ನದಿಗಳು ಉಕ್ಕಿಹರಿಯಲು ಮುಂದಾದರೆ ಮೀನುಗಳ ಗದ್ದೆಗೆ ಹತ್ತುವ ಸಾಧ್ಯತೆಗಳಿದ್ದು, ಮೀನುಶಿಕಾರಿಗೆ ಜನರು ಸಜ್ಜಾಗಿದ್ದಾರೆ.

ಇತ್ತ ಬೆಳೆಗಾರರು ತೋಟದಲ್ಲಿ ಕಳೆತೆಗೆಯುವ, ರಾಸಾಯನಿಕ ಮತ್ತು ದನದಗೊಬ್ಬರವನ್ನು ಕಾಫಿಗಿಡಗಳಿಗೆ ಹಾಕವು ಕೆಲಸದಲ್ಲಿ ನಿರತವಾಗಿದ್ದರೆ, ಇದೇ ರೀತಿ ಮಳೆ ಮುಂದುವರೆದರೆ ಕೊಳೆರೋಗದ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂಬ ಭಯ ಕಾಡತೊಡಗಿದೆ. ರೈತರು ಭತ್ತದ ನಾಣಿಗೆ ಬೇಸಾಯ ಆರಂಭಿಸಿದ್ದರೆ, ಮತ್ತೆ ಕೆಲವರು ಬದುಗಳನ್ನು ಸವರುವ ಕೆಲಸಕ್ಕೆ ಮುಂದಾಗಿದ್ದಾರೆ.

ಒಟ್ಟಾರೆಯಾಗಿ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೆ, ಬಯಲು ಪ್ರದೇಶವಾದ ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ.

ಕೆರೆಕಟ್ಟೆಯಲ್ಲಿ ಗರಿಷ್ಠ ಮಳೆ: ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಗರಿಷ್ಟ ೧೩೬ಲ.೮ ಮಿ.ಮೀ ಮಳೆಯಾಗಿ ದ್ದರೆ,ಕಡೂರುಪಟ್ಟಣದಲ್ಲಿ ಕನಿಷ್ಟ ೫.೩ ಮಿಲಿಮೀಟರ್ ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕಿನ ಹಲವೆಡೆ ಬಿದ್ದಿರುವ ಮಳೆ ವಿವರ ಮಿ.ಮೀಗಳಲ್ಲಿ ಇಂತಿದೆ.

ಚಿಕ್ಕಮಗಳೂರು ೧೫, ವಸ್ತಾರೆ ೩೨.೭, ಆಲ್ದೂರು ೩೭,ಜೋಳದಾಳ್ ೩೦, ಅತ್ತಿಗುಂಡಿ ೫೩.೬, ಸಂಗಮೇಶ್ವರಪೇಟೆ ೨೪, ಕೆ.ಆರ್.ಪೇಟೆ ೨೦, ಬ್ಯಾರುವಳ್ಳಿ ೩೪, ಮಳಲೂರು ೨೧.೧, ದಾಸರಹಳ್ಳಿ ೧೧.೨, ಮೂಡಿಗೆರೆ ೩೨.೪, ಕೊಟ್ಟಿಗೆಹಾರ ೫೬, ಗೋಣಿಬೀಡು ೪೫, ಜಾವಳಿ ೬೦.೭, ಕಳಸ ೭೬.೨, ಹಿರೇಬೈಲು ೯೦,ಹೊಸಕೆರೆ ೭೭.೨, ಬಿಳ್ಳೂರು ೭೦.೨, ನಸರಿಂಹರಾಜಪುರ ೩೫.೨, ಬಾಳೆಹೊನ್ನೂರು ೪೫, ಮೇಗರಮಕ್ಕಿ ೪೦, ಶೃಂಗೇರಿ ೭೨.೪, ಕಿಗ್ಗ ೧೦೬.೪, ಕೊಪ್ಪ ೫೬,ಹರಿಹರಪುರ ೬೫, ಜಯಪುರ ೪೭.೮, ಬಸರಿಕಟ್ಟೆ ೭೪, ಕಮ್ಮರಡಿ ೭೩.೬, ತರೀಕೆರೆ ೨೪, ಲಕ್ಕವಳ್ಳಿ೨೭.೬, ರಂಗೇನಹಳ್ಳಿ ೨೪.೬, ಉಡೇವಾ ೧೬.೪, ತಣಿಗೆಬೈಲು ೨೩.೬, ತ್ಯಾಗದಬಾಗಿ ೨೫, ಹುಣಸಘಟ್ಟ ೨೦.೪, ಕಡೂರು ತಾಲೂಕಿನ ಬೀರೂರು ೧೩, ಸಖರಾಯಪಟ್ಟಣ ೧೨.೪, ಸಿಂಗಟಗೆರೆ ೧೭.೪, ಪಂಚನಹಳ್ಳಿ ೫.೮, ಎಮ್ಮೆದೊಡ್ಡಿ ೧೧, ಗಿರಿಯಾಪುರ ೧೨, ಯಗಟಿ೬.೮, ಬಾಸೂರು ೭, ಅಜ್ಜಂಪುರ ೨೧, ಶಿವನಿ ೧೨.೨, ಬುಕ್ಕಾಂಬುದಿಯಲ್ಲಿ ೨೪.೨ ಮಿಲಿಮೀಟರ್ ಮಳೆಯಾಗಿದೆ.

Heavy rain continued in the mountainous region

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version