ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆ, ಗಾಳಿಯ ಅಬ್ಬರ ಮುಂದೂದಿದ್ದು ನಿರಂತರ ಮಳೆಯಿಂದ ಇಲ್ಲಿನ ಜನಜೀವನ ಅಸ್ತ ವ್ಯಸ್ತಗೊಂಡಿದೆ. ಅನಾಹುತಗಳನ್ನು ಸೃಷ್ಟಿಸಿದೆ.
ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಭದ್ರಾನದಿಯಲ್ಲಿ ಮು ಳುಗಿದೆ. ಕೆಲವು ಕಡೆಗಳಲ್ಲಿ ಧರೆಕುಸಿದು ಸಂಚಾರ ಬಂದ್ ಆಗಿದೆ. ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಮನೆಗಳು ಕುಸಿದು ಬಿದ್ದಿವೆ ಮಳೆ ನಾನಾ ರೀತಿಯ ಆವಾಂತರಗಳನ್ನು ಪ್ರತಿನಿತ್ಯ ಸೃಷ್ಟಿಸುತ್ತಿದೆ.
ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿಘಾಟಿ, ಕಳಸ, ಕುದುರೆಮುಖ, ಬಾಳೆಹೊನ್ನೂರು, ಕೊಪ್ಪ, ಶೃಂಗೇರಿ ಭಾಗ ದಲ್ಲಿ ಮಳೆ ಮತ್ತೇ ಅಬ್ಬರಿಸುತ್ತಿದೆ. ಮಳೆಯ ಜತೆಗೆ ಭಾರೀ ಗಾಳಿ ಬೀಸುತ್ತಿದ್ದು ಅನಾಹುತಗಳನ್ನು ಸಂಭವಿಸುತ್ತಿವೆ. ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳದಂತಾಗಿದೆ. ಕುಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ದೂರವಾಣಿ ಸಂಪರ್ಕ ಸ್ಥಗಿತಗೊಂಡಿ ದೆ. ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ.
ನಿರಂತರ ಮಳೆಗೆ ಕಾಫಿ, ಅಡಿಕೆ, ಕಾಳುಮೆಣಸು ರೋಗಬಾಧೆಗೆ ತುತ್ತಾಗುತ್ತಿದ್ದರೇ ಬಯಲುಸೀಮೆ ಭಾಗದಲ್ಲಿನ ತರಕಾರಿ ಬೆಳೆಗಳು ತೇವಾಂಶ ಹೆಚ್ಚಳದಿಂದ ಭೂಮಿಯಲ್ಲೇ ಕರಗಿ ಹೋಗುತ್ತಿದೆ. ಬುಧವಾರ ರಾತ್ರಿಯಿಂದ ಮಲೆನಾಡು ಭಾಗದಲ್ಲಿ ಮಳೆ ಮತ್ತು ಗಾಳಿ ತೀವ್ರತೆಪಡೆದುಕೊಂಡಿದ್ದು, ಎಡಬಿಡದೆ ಮಳೆಯಾಗುತ್ತಿದೆ.
ಗಾಳಿ ಮಳೆಯಿಂದ ಜನರು ಮನೆಯಿಂದ ಹೊರಬರಲು ಹೇದರುತ್ತಿದ್ದಾರೆ. ತುಂಗಾನದಿ ನೀರಿನಲ್ಲಿ ಶಾರದೆ ದೇವಸ್ಥಾನ ಸಮೀಪದ ಕಪ್ಪೆ ಶಂಕರ ಮುಳುಗಿದೆ. ಪ್ಯಾರಾಲರ್ ರಸ್ತೆ ಸಮೀಪಕ್ಕ ನದಿನೀರು ಬಂದಿದೆ. ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭದ್ರಾನದಿಯ ನೀರಿನ ಹರಿವು ಹೆಚ್ಚಳ ವಾಗಿದೆ. ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಿದ್ದು ಸಂಚಾರ ಬಂದ್ ಆಗಿದೆ. ಇದುವರೆಗೂ ನಾಲ್ಕು ಬಾರೀ ಸೇತುವೆ ಮುಳುಗಿದೆ.
ತುಂಗಾ ನದಿ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಮೂಡಿಗೆರೆ- ಚಿಕ್ಕಮಗಳೂರು ಹೆದ್ದಾರಿಯಲ್ಲಿ ನಾಲ್ಕು ಕಡೆಗಳಲ್ಲಿ ಭಾರೀ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯರು ಮರತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಕಲ್ಲೇಶ್ ಎಂಬುವರ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಕಳಸ ಸಮೀಪದ ಕಾರಗದ್ದೆ ಗ್ರಾಮದಲ್ಲಿ ಕಾರಗದ್ದೆ-ನಡುಗುಡಿಗೆ ಸಂಪರ್ಕದ ಕಿರು ಸೇತುವೆ ಹಳ್ಳದ ನೀರಿ ನಲ್ಲಿ ಮುಳುಗಿದೆ. ಭಟ್ರುಮಕ್ಕಿ ಎಂಬಲ್ಲಿ ಭತ್ತದ ಗದ್ದೆಗಳಿಗೆ ನೀರು ಹರಿದು ಜಾಲವೃಗೊಂಡಿದ್ದು ಅಪಾರ ನಷ್ಟ ಉಂಟಾಗಿದೆ.
ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಬಿನ್ನಡಿ ಸುರೇಶ್ ಎಂಬುವರ ಮನೆಯ ಹಿಂಭಾಗ ಬಾವಿ ಕುಸಿಯತೊಡಗಿದೆ.
ಕೊಪ್ಪ ತಾಲೂಕು ಹೇರೂರು ಸಮೀದ ಕೆಮ್ಮಣ್ಣು ಗ್ರಾಮದಲ್ಲಿ ಗೋಶಾಲೆಯ ಮೇಲೆ ತೆಂಗಿನ ಮರ ಬಿದ್ದಿದೆ. ಗೋಶಾಲೆಯ ಮೇಲ್ಚಾವಣಿಗೆ ಹಾನಿಯಾಗಿದ್ದು ಗೋಶಾಲೆಯಲ್ಲಿದ್ದ ೫೦ ಗೋವುಗಳು ಮೇಯಲು ತೆರಳಿದ್ದರಿಂದ ಅನಾಹುತ ತಪ್ಪಿದೆ. ಕೊಪ್ಪ ತಾಲೂಕಿನ ನಾರ್ವೆ ಸಮೀಪ ರಸ್ತೆಪಕ್ಕದಲ್ಲಿ ಧರೆಕುಸಿದಿದ್ದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಚಿಕ್ಕಮಗಳೂರು ಸುತ್ತ ಮುತ್ತಲು ಭಾರೀ ಮಳೆಯಾಗುತ್ತಿದೆ.
ಮಳೆ ಇದೇ ರೀತಿ ಮುಂದೂವರೆದರೇ ಭೂಕುಸಿತ, ಮನೆ ಕುಸಿತ ಮರ ಬೀಳುವುದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ ಈ ಹಿನ್ನಲೆಯಲ್ಲಿ ಸಾರ್ವಜನಿಕರು ಮುನ್ನೇಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
In Kafinad rain-wind is raging-people’s life is chaotic