ಚಿಕ್ಕಮಗಳೂರು: ಅಮಲಿನ ಭ್ರಮೆಯು ಆರ್ಥಿಕ, ಸಾಮಾಜಿಕ, ಸಾಂಸಾರಿಕ ಸ್ಥಾನ ಮಾನವನ್ನು ನಾಶ ಮಾಡಿ ಅಜ್ಞಾನದಲ್ಲಿ ಮುಳುಗಿಸುತ್ತದೆ. ಈ ಭ್ರಮೆಯಿಂದ ಹೊರಬರಲು ಮನಸ್ಸನ್ನು ಗಟ್ಟಿ ಯಾಗಿಸಿ ದುಶ್ಚಟಗಳಿಂದ ದೂರವಿರಬೇಕು ಎಂದು ಕರ್ನಾಟಕ ಜನ ಜಾಗೃತಿ ವೇದಿಕೆಯ ಟ್ರಸ್ಟ್ ಜಿಲ್ಲಾಧ್ಯಕ್ಷ ಎ.ಸಿ.ಚಂದ್ರಪ್ಪ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ತಾಲ್ಲೂಕಿನ ಅಂಬಳೆ ಗ್ರಾಮದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ೧೮೩೧ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ನೆರೆವೆರಿಸಿ ಅವರು ಮಾತನಾಡಿದರು.
ಯಾವುದೇ ಚಟ ಮನು?ನನ್ನು ಅಂಧನನ್ನಾಗಿ ಮಾಡುತ್ತದೆ. ಮನು? ಜೀವನವನ್ನು ಸಂ ಪೂರ್ಣವಾಗಿ ಆವರಿಸಿ ಜೀವನದ ಸರ್ವಸ್ವವನ್ನು ಕಬಳಿಸುವ ಶಕ್ತಿ ವ್ಯಸನಕ್ಕಿದೆ. ಹೊಸ ಜೀವನದ ಸಂತೋ ?ಕ್ಕಾಗಿ ಪ್ರತಿನಿತ್ಯ ದೇವರ ನಾಮಸ್ಮರಣೆ ಅಸಹಾಯಕತೆಯಿಂದ ಹೊರಬರಲು ಸಹಕಾರಿಯಾಗಿದೆ ಎಂದರು.
ಮದ್ಯವರ್ಜನ ಶಿಬಿರದಲ್ಲಿ ತನ್ನ ಶಕ್ತಿಯನ್ನು ತಾನೇ ಅರ್ಥಮಾಡಿಕೊಂಡು ಬದುಕುವ ಆತ್ಮಸ್ಥೈರ್ಯ ವನ್ನು ಪಡೆಯಲು ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಇದರಿಂದ ಉತ್ತಮ ಫಲಿತಾಂಶ ಕಾಣಲು ಸಾಧ್ಯ ವಾಗಿದೆ. ಹಾಗಾಗಿ ವ್ಯಸನದಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಂಡು ಸಾತ್ವಿಕ ಜೀವನ ನಡೆ ಸಲು ಮುಂದಾಗಬೇಕು ಎಂದರು.
ಸಂಪಾದಕ ಪಿ.ರಾಜೇಶ್ ಮಾತನಾಡಿ ಮದ್ಯವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆ ಗಳು ತಲೆದೋರುತ್ತವೆ. ಕುಡಿತದ ಚಟದಿಂದ ಹಲವು ಕುಟುಂಬಗಳು ಹಾಳಾಗಿವೆ. ಮದ್ಯವ್ಯಸನದಿಂದ ಅಪ ರಾಧ ಪ್ರಕರಣಗಳು ಹೆಚ್ಚುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶಿಬಿರ ನೆರವಾಗಲಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ ಸಾವಿರಾರು ಕತ್ತಲೆ ತುಂಬಿದ ಕುಟುಂಬಕ್ಕೆ ಶಕ್ತಿಯನ್ನು ತುಂಬಿದ ವಿರೇಂದ್ರ ಹೆಗ್ಗಡೆಯವರು. ಇಂದು ಮದ್ಯವರ್ಜನ ಶಿಬಿರದ ಮೂಲಕ ಪುಣ್ಯದ ಕೆಲಸವನ್ನು ಮಾಡುತ್ತಿರುವ ಟ್ರಸ್ಟ್ನಿಂದ ಅದೇ? ಜನರ ಬದುಕು ಬಂಗಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮದ್ಯವರ್ಜನ ಸಮಿತಿಯ ಅಧ್ಯಕ್ಷ ಬಸವರಾಜ್, ಅಂಬಳೆ ಗ್ರಾ.ಪಂ. ಅಧ್ಯಕ್ಷ ದೊಡ್ಡೇಗೌಡ, ಸದಸ್ಯರಾದ ವಿಜಯಮ್ಮ, ಪೋಲಿಸ್ ಸಹಾಯಕ ಉಪನಿರೀಕ್ಷಕ ಪೂರ್ಣೇಶ್, ಕ.ರ.ವೇ ಉಪಾಧ್ಯಕ್ಷ ಕೋಟೆ ಮಲ್ಲೇಶ್ , ಕಾರ್ಯದರ್ಶಿ ಕುಮಾರ್ ಆರ್ ಶೆಟ್ಟಿ, ಬಿರೇಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಮೇಶ್ಗೌಡ, ಸಂಸ್ಥೆಯ ಯೋಜನಾಧಿಕಾರಿಗಳಾದ ರಮೇಶ್ ನಾಯ್ಕ್, ನಾಗರಾಜ್ ಕುಲಾಲ್, ಕೊರಗಪ್ಪ ಪೂಜಾರಿ, ಮೇಲ್ವಿಚಾರಕರು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
Drug addiction camp held at Beeralingeshwar Community Hall Amble village