ಚಿಕ್ಕಮಗಳೂರು: ದನಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ, ಹಣ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ದನಕಳ್ಳತನ ಮಾಡುತ್ತಿದ್ದ ಅಜ್ಜಂಪುರ ನಿವಾಸಿಗಳಾದ ಉಮ್ಮರ್ ಫಾರುಕ್ ಖಾನ್, ಮುಬಾರಕ್, ಉಮ್ಮರ್ ಫಾರುಕ್ ಬಂಧಿತ ಆರೋಪಿಗಳು.
ಬಂಧಿತರಿಂದ ೪ ಲಕ್ಷ ೩೦ ಸಾವಿರ ರೂ. ಮೌಲ್ಯದ ಆಶೋಕ ಲೈಲ್ಯಾಂಡ್ ವಾಹನ, ೧.೧೦ ಲಕ್ಷ ರೂ. ಮೌಲ್ಯದ ಮೂರು ಹಸು ಒಂದು ಹೋರಿ, ಕರುಗಳು ಸೇರಿ ೬.೩೦ ಲಕ್ಷ ರೂ. ಮೌಲ್ಯದಷ್ಟು ಹಸು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲೂಕಿನ ವಿವಿಧೆಡೆ ದನಗಳ ಕಳ್ಳತನ ಪ್ರಕರಣ ನಡೆದಿದ್ದು, ತಂಗಲಿ ಬೈಪಾಸ್ ರಸ್ತೆಯ ಬ್ರಿಡ್ಜ್ ಬಳಿ ಅನುಮಾನಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾಗ ಆಶೋಕ ಲೈಲ್ಯಾಂಡ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ನಾಲ್ಕು ಹಸುಗಳು ವಾಹನದಲ್ಲಿ ಇದ್ದದ್ದು ಕಂಡು ಬಂದಿದೆ.
ಈ ಸಂಬಂಧ ಮೂರು ಜನರನ್ನು ವಿಚಾರಣೆ ಒಳಪಡಿಸಿದಾಗ ಸಮಂಜಸ ಉತ್ತರ ನೀಡಿಲ್ಲ ಹಾಗೂ ಜಾನುವಾರು ಸಾಗಟ ಸಂಬಂಧ ಸೂಕ್ತ ದಾಖಲೆ ಇಲ್ಲದಿದ್ದರಿಂದ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.
Arrest of the accused who were doing cattle theft