ಚಿಕ್ಕಮಗಳೂರು: ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ರಾಷ್ಟç ಧ್ವಜಕ್ಕೆ ಆಗುವ ಅವಮಾನ ಮಾಡುವುದನ್ನು ತಡೆಯಬೇಕು ಮತ್ತು ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವೇಕಾನಂದ ಯುವಕ ಸಂಘ ಹಾಗೂ ಹಿಂದು ಜನ ಜಾಗೃತಿ ಸಮಿತಿಯ ಪದಾಧಿಕಾರಿಗಳು ಸೋಮವಾರ ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟಧ್ವಜವೇ ರಾಷ್ಟ್ರದ ಗುರುತು ಮತ್ತು ಆತ್ಮ. ಈ ರಾಷ್ಟç ಧ್ವಜಗಳನ್ನು ಆ. ೧೫ನೇ ತಾರೀಕು ಮತ್ತು ಜ. ೨೬ರ ಗಣರಾಜ್ಯೋತ್ಸವ ದಿನದಂದು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟçಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ.
ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗುವುದಿಲ್ಲವಾದ್ದರಿಂದ ಹಲವುದಿನಗಳ ವರೆಗೆ ರಾಷ್ಟçಧ್ವಜಗಳಿಗೆ ನಿರಂತರವಾಗಿ ಅಗೌರವವಾಗುತ್ತಲೇ ಇರುತ್ತದೆ. ಹೀಗಾಗಿ ಪ್ಲಾಸ್ಟಿಕ್ ಧ್ವಜ ಸಂಪೂರ್ಣವಾಗಿ ನಿಷೇಧಿಸುವ ಜೊತೆಗೆ ಅವುಗಳ ತಯಾರಕರು ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ರಾಜು ಆರ್.ಕಲ್ದೊಡ್ಡಿ, ಹಿಂದು ಜನ ಜಾಗೃತಿ ಸಮಿತಿಯ ಶಾರದ, ಅಮಿತ್, ಸಪ್ನಾ. ವಿವೇಕಾನಂದ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ಉಪಾಧ್ಯಕ್ಷ ರಾಮು,ಕಾರ್ಯದರ್ಶಿ ಪ್ರಸನ್ನ ಉಪಸ್ಥಿತರಿದ್ದರು.
Demand action against plastic flag sellers