ALSO FEATURED IN

ಆ.25ಕ್ಕೆ ಸಖರಾಯಪಟ್ಟಣದಲ್ಲಿ ಬ್ರಹ್ಮಾಕುಮಾರೀಸ್‌ನ ನೂತನ ಕಟ್ಟಡ ಶಿವದರ್ಶನ ಭವನ ಲೋಕಾರ್ಪಣೆ

Spread the love

ಚಿಕ್ಕಮಗಳೂರು: ತಾಲ್ಲೂಕು ಸಖರಾಯಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕಟ್ಟಡ ಶಿವದರ್ಶನ ಭವನ ಆ.೨೫ ರಂದು ಭಾನುವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಬ್ರಹ್ಮಾಕುಮಾರೀಸ್‌ನ ಸಂಚಾಲಕರಾದ ಭಾಗ್ಯಕ್ಕ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವದರ್ಶನ ಭವನದ ನೂತನ ಕಟ್ಟಡವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಬ್ರಹ್ಮಾಕುಮಾರೀಸ್‌ನ ಉಪ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಡಾ. ಅಂಬಿಕಾಜಿ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹೆಚ್.ಡಿ ತಮ್ಮಯ್ಯ ನೆರವೇರಿಸಲಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಹಿಸಲಿದ್ದು, ಉಪಸ್ಥಿತರಾಗಿ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಮಂಜುಳ ಹುಲ್ಲಹಳ್ಳಿ, ಡಾ. ಸಂತೋಷ್ ನೇತಾ, ನಂದಕುಮಾರ್, ಡಿ.ವಿ ಜಯಪ್ಪ, ರಾಜಮ್ಮ, ಕಿರಣ್ ಕುಮಾರ್, ಮಹಡಿಮನೆ ಸತೀಶ್, ಲತಾ ಪುಟ್ಟಸ್ವಾಮಿ, ಎಸ್.ಎನ್ ಮಂಜುನಾಥ ಮತ್ತಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಅಂದು ಬೆಳಿಗ್ಗೆ ೯.೩೦ ಕ್ಕೆ ಸಖರಾಯಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭಗಳೊಂದಿಗೆ ಶಾಂತಿಯಾತ್ರೆ ನಡೆಯಲಿದ್ದು, ಈಶ್ವರೀಯ ವಿದ್ಯಾರ್ಥಿಗಳಿಂದ ಹಾಗೂ ಇತರರ ಸಹಕಾರದಿಂದ ಶಿವದರ್ಶನ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಸುಮಾರು ೮೦ ಲಕ್ಷ ರೂ ವೆಚ್ಚದಲ್ಲಿ ೩೦x೬೦ ಅಳತೆಯ ನಿವೇಶನದಲ್ಲಿ ನಿರ್ಮಿಸಲಾಗಿರುವ ಭವನದಲ್ಲಿ ಕೆಳ ಹಂತಸ್ತಿನಲ್ಲಿ ೨ ಧ್ಯಾನದ ರೂಂ, ಕ್ಲಾಸ್ ಹಾಲ್, ೭ ದಿನದ ಕೋರ್ಸ್ ರೂಂ, ಅಡುಗೆ ಮನೆ, ಅತಿಥಿ ಕೊಠಡಿಗಳನ್ನು ಒಳಗೊಂಡಿದೆ ಎಂದು ಹೇಳಿದರು.

೨೦೧೦ ರ ಏಪ್ರಿಲ್ ಮಾಹೆಯಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕಟ್ಟಡ ನಿರ್ಮಿಸಲು ಹುಲಿಕೆರೆ ಮಹಾ ಸ್ವಾಮಿಗಳು ಹಾಗೂ ಎಸ್.ಎಲ್ ಧರ್ಮೇಗೌಡ, ರಾಜಯೋಗಿನಿ ಬಿ.ಕೆ ಭಾರತಿಜೀ ಇನ್ನೂ ಅನೇಕ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಸಖರಾಯಪಟ್ಟಣದ ಬಾಡಿಗೆ ಮನೆಯಲ್ಲಿ ಈವರೆಗೆ ನಡೆಯುತ್ತಿದ್ದ ವಿಶ್ವವಿದ್ಯಾಲಯ ಇದೇ ಆ.೨೫ ರಂದು ಶಿವದರ್ಶನ ಭವನದೆಡೆಗೆ ಸಾಗಲಿದೆ ಎಂದರು.

ಸುತ್ತಮುತ್ತ ಹಳ್ಳಿಗಳಲ್ಲಿ ಶಿವಸಂದೇಶ ಸಾರುವ ಕಾರ್ಯಗಳು ಎಲ್ಲಾ ಶಾಲಾ-ಕಾಲೇಜು, ಹಾಸ್ಟೆಲ್ ಕಚೇರಿಗಳಲ್ಲಿ ಜ್ಞಾನಜ್ಯೋತಿ ಬೆಳಗಿಸಲಾಯಿತು. ಅನೇಕ ಆರೋಗ್ಯ ಶಿಬಿರಗಳು ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಕಾರ್ಯಕ್ರಮಗಳು, ರೈತರಿಗೆ ಯೋಗಿಕ್ ಖೇತಿ ಕಾರ್ಯಕ್ರಮ, ಯುವ ಪೀಳಿಗೆಗೆ ಚಾರಿತ್ರ್ಯ ನಿರ್ಮಾಣದಲ್ಲಿ ರಾಜಯೋಗದ ಪಾತ್ರ, ಯೋಗ, ಪ್ರಾಣಾಯಾಮ, ರಾಜ ಯೋಗದ ಜಾಗೃತಿ ಕಾರ್ಯಕ್ರಮಗಳು ೨೧ ವರ್ಗಗಳಿಂದ ಸುದೀರ್ಘವಾಗಿ ನಡೆಸುತ್ತ ಬರಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜಯೋಗಿನಿ ಬಿ.ಕೆ ಯಶೋಧಕ್ಕ, ರಾಯಪ್ಪಣ್ಣ ಉಪಸ್ಥಿತರಿದ್ದರು.

Inauguration of the new building of Brahmakumaris Shiva Darshan Bhavan in Sakharayapatnam on August 25.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version