ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳು ಮತ್ತು ತತ್ವ ಸಿದ್ಧಾಂತಗಳನ್ನು ಎಲ್ಲಾ ಸಮುದಾಯ ಜನರು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ದಾಸರಹಳ್ಳಿ ತಿಳಿಸಿದರು.
ಅವರು ನಗರದ ವಿಜಯಪುರದಲ್ಲಿರುವ ಶ್ರೀ ನಾರಾಯಣ ಸೇವಾ ಸಮಿತಿ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೭೦ ನೇ ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ ಜಾತಿ ಸಂಘ?, ಮೇಲು ಕೀಳು, ಅಸಮಾನತೆಯಂತಹ ಸಾಮಾಜಿಕ ಸಮಸ್ಯೆಗಳೇ ತುಂಬಿಕೊಂಡಿದ್ದ ಅಂದಿನ ಕಾಲದಲ್ಲಿ ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು ನಮ್ಮೆಲ್ಲರಿಗೂ ಮಾದರಿ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವವನ್ನು ಸರ್ಕಾರದ ವತಿಯಿಂದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುತ್ತಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಮತ್ತು ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗೆ ಅವರ ಜ್ಞಾನದ ಬಗ್ಗೆ ತಿಳಿಸುವ ಮೂಲಕ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಎಲ್ಲರೂ ಸಹಕಾರಿ ಆಗಬೇಕೆಂದು ತಿಳಿಸಿದರು.
ಸ್ಥಳಿಯ ಶಾಸಕ ಹೆಚ್.ಡಿ.ತಮ್ಮಯ್ಯ ಮತ್ತು ವಿವಿಧ ಪಕ್ಷದ ಮುಖಂಡರುಗಳು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಅನುದಾನ ಸಿಗುವಂತೆ ಶಿಫಾರಸ್ಸ್ ಮಾಡಿಸಿದ್ದು, ಅನೇಕ ನಾಯಕರು ಭರವಸೆಗಳನ್ನು ಕೊಟ್ಟಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ೪.೫ ಕೋಟಿ ರೂ ಅಂದಾಜು ವೆಚ್ಚ ಆಗಲಿದೆ ಎಂದರು.
ಹಲವು ಬಾರಿ ಬೇಡಿಕೆಯನ್ನಿಟ್ಟರು ಇದುವರೆಗೂ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಭವನಕ್ಕೆ ದೊರೆತ್ತಿಲ್ಲ, ಸಮಾಜದವರ ಸಹಾಯ ಧನದಿಂದ ೫೦ ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಅನುದಾನ ನೀಡಿ ಭವನ ನಿರ್ಮಾಣ ಸಂಪೂರ್ಣಗೋಳ್ಳಲು ಸಹಕರಿಸಬೇಕೆಂದು ಈ ಮೂಲಕ ಸ್ಥಳಿಯ ನಾಯಕರಿಗೆ ಬೇಡಿಕೆಯನ್ನಿಟ್ಟರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀನಿವಾಸ ಮಾಯಪ್ಪ, ಖಜಾಂಚಿ ಕೆ.ಪಿ.ಸುರೇಶ್, ಗೌರವಾಧ್ಯಕ್ಷರಾದ ಕೆ.ಎಂ.ಗುಣಶೇಖರ್, ಕೆ.ಸಿ.ಶಾಂತಕುಮಾರ್, ಕೆ.ಅಯ್ಯಪ್ಪ, ಸಿ.ಆರ್.ಕುಮಾರ್, ಎಂ.ರಾಜು, ಚಂದ್ರು ಕೋಟೆ, ಜಯಪ್ರಕಾಶ್, ಎಲ್.ಸಿ.ಚಂದ್ರು, ಮಹಿಳಾ ಸಂಘದ ಅಧ್ಯಕ್ಷರಾದ ಶಶಿಕಲಾಅಶೋಕ್, ಗಿರಿಜಾ, ತಾರಕೇಶ್ವರಿ, ಸವಿತಾ, ಉಷಾ, ಪದ್ಮ, ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
170th Jayanti Program of Brahmashree Narayanaguru